Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Wednesday, December 3, 2014

BHOPAL DAY


ಡಿಸೆಂಬರ್ 3- ಭೋಪಾಲ್ ದುರಂತ ದಿನ

          ವಿಶ್ವದ ಚರಿತ್ರೆಯಲ್ಲಿ ದಾಖಲಾದ ಘೋರ ದುರಂತಗಳಲ್ಲಿ ಒಂದು ಭೋಪಾಲ್ ವಿಷಾನಿಲ ದುರಂತ.1984ರ ಡಿಸೆಂಬರ್ 2 ರಂದು ಮಧ್ಯ ರಾತ್ರಿ,ಮಧ್ಯ ಪ್ರದೇಶದ ಭೋಪಾಲ್ ಎಂಬ ಸ್ಥಳದಲ್ಲಿ ಅಮೇರಿಕನ್ ಕಂಪೆನಿಯಿಂದ ಸ್ಥಾಪಿಸಲ್ಪಟ್ಟ ಯೂನಿಯನ್ ಕಾರ್ಬೈಡ್ ನಿಂದ ಸೋರಲ್ಪಟ್ಟ ವಿಷಾನಿಲದಿಂದಾಗಿ 10 ಸಾವಿರ ಜನರು ಬಲಿಯಾದರು. ಭೋಪಾಲ್ ವಿಷಾನಿಲಸೋರಿಕೆಯಲ್ಲಿ 5 ಲಕ್ಷಕ್ಕಿಂತ ಹೆಚ್ಚು ಜನ ಗಾಯಗೊಂಡಿದ್ದರು.ದುರಂತದ ದುಷ್ಪರಿಣಾಮವಾಗಿ ಅಸಂಖ್ಯಾತ ಜನರಿಗೆ,ಯಕೃತ್,ಕಿಡ್ನಿ,ಚರ್ಮ ಕಾಯಿಲೆಗಳು ಕಾಣಿಸಿದುವು.

WORLD HANDICAPS SUPPORT DAY


ವಿಶ್ವ ಅಂಗವಿಕಲರ ದಿನ

ವಿಶ್ವದಲ್ಲಿ ಅನೇಕ ಜನರು ಅಂಗ ವಿಕಲತೆ ಹೆಂದಿದ್ದಾರೆ.ಇವರನ್ನು ವಿಕಲ ಚೇತನರು ಎನ್ನುತ್ತಾರೆ.ಇವರ ಹಕ್ಕುಗಳನ್ನು,ಅವಕಾಶಗಳನ್ನು ಒದಗಿಸಿ ಕೊಡಬೇಕಾದುದು ನಮ್ಮೆಲ್ಲರ ಕರ್ತವ್ಯ.ಅವರಿಗೆ ಕರುಣೆ ತೊರುವ ಬದಲು ಅವರಲ್ಲಿ ಧೈರ್ಯ,ಆತ್ಮ ವಿಶ್ವಾಸ ತುಂಬಿಸಿ ಅವರನ್ನು ಸಮಾಜದ ವಾಹಿನಿಗೆ ತರುವಲ್ಲಿ ನಾವೆಲ್ಲರೂ ಕೈ ಜೋಡಿಸ ಬೇಕು.

Tuesday, December 2, 2014

National Pollution Control Day



ಡಿಸೆಂಬರ್ 2 ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ


     ನಮ್ಮ ಸುತ್ತು ಮುತ್ತಲಿನ ಗಾಳಿ,ನೀರು,ಮಣ್ಣು,ಸಸ್ಯ ಸಂಕುಲ ಎಲ್ಲವನ್ನೂ ಒಟ್ಟಾಗಿ ಪರಿಸರ ಎನ್ನುತ್ತೇವೆ. ಪರಿಸರದಿಂದ ನಾವು. ಪರಿಸರ ಚೆನ್ನಾಗಿದ್ದರೆ ನಾವು ಚೆನ್ನಾಗಿರಬಹುದು.ನೆಲ,ಜಲ,ವಾಯು ಮಾಲಿನ್ಯವು ಆರೋಗ್ಯವಂತ ಪರಿಸರವನ್ನು ಹಾಳು ಮಾಡುತ್ತವೆ. ವಾಹನಗಳ,ಕಾರ್ಖಾನೆಗಳ ಸೂಕ್ತ ನಿರ್ವಹಣೆ ಕೊರತೆಯಿಂದ ವಾಯು ಮಾಲಿನ್ಯವಾಗುತ್ತಿದೆ.

Monday, December 1, 2014

ಗುಲಾಮಗಿರಿ ನಿರ್ಮೂಲನಾ ದಿನ


ಡಿಸೆಂಬರ್ 2 ಗುಲಾಮಗಿರಿ ನಿರ್ಮೂಲನಾ ದಿನ

ಇಂದು ಜಗತ್ತಿನೆಲ್ಲೆಡೆ ಗುಲಾಮ ಗಿರಿಯು ಕಾನೂನು ಬಾಹಿರವಾಗಿದೆ.ಆದರೂ ಕೂಡಾ ಇಂದು ಜಗತ್ತಿನಲ್ಲಿ ಸುಮಾರು 27 ಮಿಲಿಯ ಕ್ಕಿಂತಲೂ ಅಧಿಕ ಗುಲಾಮರು ಜೀತದಾಳುಗಳಾಗಿ ಜೀವನ ಸವೆಸುತ್ತಿದ್ದಾರೆ.ಆಫ್ರಿಕಾ,ಏಷ್ಯಾ,ಮಧ್ಯ ಪೂರ್ವ ರಾಷ್ಟ್ರಗಳಲ್ಲಿ ಅತ್ಯಧಕ ಸಂಖ್ಯೆಯಲ್ಲಿದ್ದಾರೆ.ಪ್ರತಿ ವರ್ಷವೂ ಸಾವಿರಾರು ಜನರನ್ನು ಮಕ್ಕಳನ್ನು ಕಳ್ಳ ಸಾಗಣೆ ಮೂಲಕ ವಿದೇಶ ಗಳಶಿಗೆ ಸಾಗಿಸಲಾಗುತ್ತಿದ್ದು,ಅವರನ್ನು ಗುಲಾಮರನ್ನಾಗಿ ಮಾಡಲಾಗುತ್ತಿದೆ.

KALOTHSAVA AWARDS




ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ ಉತ್ತಮ ಸಾಧನೆಗೈದ ನಮ್ಮ ಶಾಲಾ ಪುಟಾಣಿಗಳು
ಕ್ಷಿತೀಶ ಸಿ.ಎಸ್.-ಸಂಸ್ಕೃತ ಸಮಸ್ಯಾ ಪೂರ್ಣದಲ್ಲಿ ಪ್ರಥಮ ಸ್ಥಾನ,ಕನ್ನಡ ಕಂಠ ಪಾಠದಲ್ಲಿ ದ್ವಿತೀಯ,ಪ್ರಶ್ನೋತ್ತರಿಯಲ್ಲಿ ದ್ವಿತೀಯ,ಹಿಂದಿ ಭಾಷಣ ಸ್ಪರ್ಧೆಯಲ್ಲಿ ತೃತೀಯ

ಕಥೆ ಹೇಳುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ 2ನೇತರಗತಿ ವಿದ್ಯಾರ್ಥಿನಿ ಚಿನ್ಮಯಿ.ಎಸ್-ಒಗಟು ಸ್ಪರ್ಧೆಯಲ್ಲಿ ತೃತೀಯ
ಬಿಂದು ಎಸ್.-ಸಂಸ್ಕೃತ ಕಥಾ ರಚನೆಯಲ್ಲಿ ಬಿ.ಗ್ರೇಡ್



ಜ್ಯೋತಿಕ ಸಿ.ಟಿ ಸಂಸ್ಕೃತ ಸಿದ್ಧರೂಪ ಚರಣ ದಲ್ಲಿ ದ್ವಿತೀಯ ಸ್ಥಾನ
 ಗೌತಮ್ ಎಸ್,4ನೇತರಗತಿ-ಕನ್ನಡ ಕಂಠಪಾಠದಲ್ಲಿ ದ್ವಿತೀಯ ಸ್ಥಾನ
ಪೂರ್ಣಿಮಾ ಕೆ.ಯಂ.4ನೇ ತರಗತಿ ಏಕಪಾತ್ರಾಭನಯದಲ್ಲಿ ಬಿ ಗ್ರೇಡ್

S.No.
Name of the Student
Std
ITEM
Place
Grade
Points
1
Chinmayi S
2
Story telling
I
A
5
2
Kshitheesha C S
7
Sanskrit  Samasyapoorna
I
A
5
3
Jyothika C T.
5
Sanskrit Siddaroopacharana
II
A
5
4
Kshitheesha C S
7
Sanskrit Prashnothari
II
A
5
5
Gautham S
4
L.P.Kannada Recitation
II
A
5
6
Kshitheesha C S
7
U.P.Kannada Recitation
II
A
5
7
Bindu S
7
Sanskrit Katha rachana

B
3
8
Chinmayi S
2
Ogatu

C
1
9
Poornima K M
4
Mono act

B
3