Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Saturday, September 27, 2014

ಲೂಯೀ ಪ್ಯಾಶ್ಚರ್ ಪುಣ್ಯದಿನ



ಸೆಪ್ಟೆಂಬರ್:28-ಲೂಯೀಪ್ಯಾಶ್ಚರ್ ಪುಣ್ಯ ದಿನ
ವಿಜ್ಞಾನಿ ಲೂಯೀಪ್ಯಾಶ್ಚರ್

ವೈದ್ಯಕೀಯ ಮತ್ತು ರಸಾಯನ ಶಾಸ್ತ್ರಗಳಲ್ಲಿ ಜಗತ್ತಿಗೇ ಉಪಯೋಗವಾಗಬಲ್ಲ ಸಂಶೋಧನೆಗಳನ್ನು ಮಾಡಿದ ಶ್ರೇಷ್ಠ ವಿಜ್ಞಾನಿ ಲೂಯೀಪ್ಯಾಶ್ಚರ್,1822ರಲ್ಲಿ ಜನಿಸಿದರು.
ಹುಚ್ಚು ನಾಯಿ ಕಡಿತದಿಂದ ಉಂಟಾಗುವ ರೇಬೀಸ್ ಕಾಯಿಲೆಗೆ ಲಸಿಕೆಯನ್ನು ಕಂಡು ಹಿಡಿದವರು ಇವರು.ಸೀತಾಳೆ ಸಿಡುಬು,ನಂಗಡಿ ರೋಗಕ್ಕೂ ಚುಚ್ಚು ಮದ್ದು ಕಂಡು ಹಿಡಿದರು.ಹಾಲನ್ನು ತುಂಬಾ ಸಮಯ ಕೆಡದಂತೆ ಇಡುವ ವಿಧಾನವಾದ ಪ್ಯಾಶ್ಚರೀಕರಣ ಇವರ ಆವಿಷ್ಕಾರ.ಸ್ವಲ್ಪ ಶಾಖದಲ್ಲಿ,ಹಾಲನ್ನು ಕಾಯಿಸುವುದರಿಂದ ಅದರಲ್ಲಿರುವ ಬ್ಯಾಕ್ಟೀರಿಯಾ ನಾಶಹೊಂದುತ್ತವೆ.ಕ್ಷಯರೋಗ ತರಬಲ್ಲ ಬ್ಯಾಕ್ಟೀರಿಯಾ ನಾಶಹೊಂದುತ್ತವೆ.
ಲೂಯೀಪ್ಯಾಶ್ಚರ್ 1895ರ ಸೆಪ್ಟೆಂಬರ್ 28ರಂದು ನಿಧನರಾದರು.

Thursday, September 25, 2014

ವಿಜ್ಞಾನ ರಸಪ್ರಶ್ನೆ ಸ್ಪರ್ಧೆ


ಶಾಲಾ ಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ

25-09-2014ರಂದು ಶಾಲಾ ಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ ಜರಗಿತು.ಶಾಲಾಮುಖ್ಯಶಿಕ್ಷಕ ಶ್ರೀ ಶ್ಯಾಮಭಟ್ಉದ್ಘಾಟಿಸಿದರು.ಯು.ಪಿ.ವಿಭಾಗದ ರಸಪ್ರಶ್ನೆ ಸ್ಪರ್ಧೆಯನ್ನು ವಿಜ್ಞಾನ ಶಿಕ್ಷಕರಾದ ಶ್ರೀ ಪ್ರಸಾದ್ ರೈನಡೆಸಿಕೊಟ್ಟರು.

ಎಲ್.ಪಿ.ವಿಭಾಗದಲ್ಲಿ ಶ್ರೀಮತಿ ಸರಸ್ವತಿ ಹಾಗೂ ಶ್ರೀಮತಿ ರಾಜೇಶ್ವರಿ.ಬಿ ನಡೆಸಿಕೊಟ್ಟರು. ಯು.ಪಿ.ವಿಭಾಗದಲ್ಲಿ ಕ್ಷಿತೀಶ ಸಿ,ಯಸ್ ಪ್ರಥಮ ಸ್ಥಾನ,ಜ್ಯೋತಿಕಾ.ಸಿ.ಟಿ ದ್ವಿತೀಯ ಸ್ಥಾನ ಪಡೆದರು.L.P.ವಿಭಾಗದಲ್ಲಿ ಗೌತಮ್.ಯಸ್ ಪ್ರಥಮ ಸ್ಥಾನ,ಆಯಿಷತ್ ತಬ್ ಸೀರ ಸಿ.ಯಚ್ ದ್ವಿತೀಯ ಸ್ಥಾನ ಪಡೆದರು
ರಸಪ್ರಶ್ನೆ ಸ್ಪರ್ಧೆ


BLOG INAUGURATION

ಶಾಲಾ ಬ್ಲಾಗಿನ ಉದ್ಘಾಟನಾ ಸಮಾರಂಭ
ದೊಡ್ಡ ಪರದೆಯಲ್ಲಿ ಶಾಲಾ ಬ್ಲಾಗ್
ಪ್ರಾರ್ಥನೆ

ವಾರ್ಡ್ ಸದಸ್ಯೆ ಶ್ರೀಮತಿ ಸುಬೈದಾ ಯಂ.ಪಿಯವರಿಂದ ಉದ್ಘಾಟನೆ
ದೀಪ ಬೆಳಗಿಸಿ ಉದ್ಘಾಟನೆ
ಮುಖ್ಯ ಶಿಕ್ಷಕ,ಶ್ರೀ ಶ್ಯಾಮ ಭಟ್ ರಿಂದ ಪ್ರಾಸ್ತಾವಿಕ ನುಡಿ
ಪೈವಳಿಕೆ ಪಂಚಾಯತ್ ಸದಸ್ಯೆ ಶ್ರೀಮತಿ ಪುಷ್ಪಾ ಕಮಲಾಕ್ಷ ಅವರಿಂದ ಶುಭಾಶಂಸನೆ
MPTA ಅಧ್ಯಕ್ಷೆ ಶ್ರೀಮತಿ ಇಂದಿರಾಅವರಿಂದ ಶುಭಾಶಂಸನೆ
PTA ಅಧ್ಯಕ್ಷರಾದ ಶ್ರೀ ಪರಮೇಶ್ವರ ಪಾವಲುಕೋಡಿಯವರಿಂದ ಅಧ್ಯಕ್ಷೀಯ ಭಾಷಣ

ಪ್ರಸಾದ್ ರಿಂದ ಧನ್ಯವಾದ ಸಮರ್ಪಣೆ


ಚೇವಾರು ಶಾಲಾ ಬ್ಲಾಗಿನ ಉದ್ಘಾಟನಾ ವರದಿ

ಮಂಜೇಶ್ವರ:  ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯ ನೂತನ ಬ್ಲಾಗಿನ ಉದ್ಘಾಟನಾ ಸಮಾರಂಭವು ಜರಗಿತು.ಪೈವಳಿಕೆ ಪಂಚಾಯತು ಸದಸ್ಯೆ ಶ್ರೀಮತಿ ಸುಬೈದಾ ಯಂ.ಪಿ.ಉದ್ಘಾಟಿಸಿದರು.ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಪರಮೇಶ್ವರ ಪಾವಲುಕೋಡಿ ಅಧ್ಯಕ್ಷ ಸ್ಥಾನ ವಹಿಸಿದರು.ಪೈವಳಿಕೆ ಕೆ.ಇ.ಬಿ.ಅಸಿಸ್ಟೆಂಟ್ ಇಂಜಿನಿಯರ್ ಶ್ರೀ ಕುಮಾರ ಸುಬ್ರಹ್ಮಣ್ಯ ಭಟ್ ಶೈಕ್ಷಣಿಕ ರಂಗದಲ್ಲಿ ಬ್ಲಾಗಿನ ಯೋಗ್ಯಬಳಕೆಯನ್ನು ಶ್ಲಾಘಿಸಿದರು. ಪೈವಳಿಕೆ ಪಂಚಾಯತು ಸದಸ್ಯೆ ಶ್ರೀಮತಿ ಪುಷ್ಪಾ ಕಮಲಾಕ್ಷ,ಮಾತೃ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಇಂದಿರಾ ಮಿತ್ತಡ್ಕ, ರಕ್ಷಕ-ಶಿಕ್ಷಕ ಸಂಘದ ಸದಸ್ಯರಾದ ಅಬ್ದುಲ್ ಕೋಯಾ, ಶುಭ ಹಾರೈಸಿದರು.ಶಾಲಾ ಮುಖ್ಯ ಶಿಕ್ಷಕ,ಶ್ಯಾಮ್ ಭಟ್,ಅತಿಥಿಗಳನ್ನು ಸ್ವಾಗತಿಸಿ,ಪ್ರಾಸ್ತಾವಿಕ ನುಡಿಗಳನ್ನಾಡಿದರು.ಪ್ರಸಾದ್ ರೈ ವಂದಿಸಿದರು.ಸ್ಟಾಫ್ ಕಾರ್ಯದರ್ಶಿ ವಿನೋದ್ ಚೇವಾರ್, ಕಾರ್ಯಕ್ರಮ ನಿರೂಪಿಸಿದರು.ಈ ಸಂದರ್ಭದಲ್ಲಿ ರಕ್ಷಕರಿಗೆ ಶಾಲಾ ಚಟುವಟಿಕೆಗಳನ್ನೊಳಗೊಂಡ ಬ್ಲಾಗನ್ನು LCD Projector ಮೂಲಕ ಪ್ರದರ್ಶಿಸಲಾಯಿತು.

School Assembly

ಶಾಲಾ ಎಸೆಂಬ್ಲಿ

ಶಾಲಾ ಎಸೆಂಬ್ಲಿಯಲ್ಲಿ ಮಂಗಳಯಾನದ ಯಶಸ್ಸಿಗೆ ಕಾರಣಕರ್ತರಾದ ನಮ್ಮದೇಶದ ವಿಜ್ಞಾನಿಗಳನ್ನು ಅಭಿನಂದಿಸಲಾಯಿತು.
ಮಂಗಳಯಾನದ ಕುರಿತಾದ ವಿವರಣೆಗಳನ್ನು ಮುಖ್ಯಶಿಕ್ಷಕ ಶ್ರೀ ಶ್ಯಾಮ ಭಟ್  ವಿವರಿಸಿದರು.ವಿದ್ಯಾರ್ಥಿಗಳು ವಾರ್ತೆ,ನುಡಿಮುತ್ತು,Thought for the day,ಗಳನ್ನು ಓದಿದರು.ಶಾಲಾ ನಾಯಕಿ ಜೈನಬತ್ ಅಸ್ಮೀನಾ  ಎಸೆಂಬ್ಲಿಯನ್ನು ನಿರ್ವಹಿಸಿದಳು.



Wednesday, September 24, 2014

School Assembly

ಶಾಲಾ ಎಸೆಂಬ್ಲಿ

INVITATION-ಕರೆಯೋಲೆ



   ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆ, ಚೇವಾರು.
P. O. ಕುಡಾಲುಮೇರ್ಕಳ,ವಯಾ: ಮಂಗಲ್ಪಾಡಿ ,ಪಿನ್- 671324 
PH:04998205170 E-Mail:chevar11264@gmail.com
Blog WWW.11264ssaupschevar.blog spot.in


ಶಾಲಾ ಬ್ಲಾಗ್ ನ ಉದ್ಘಾಟನಾ ಸಮಾರಂಭ

                                
ತಾರೀಕು:25-0-9-2014        ಸ್ಥಳ:           ಶಾಲಾ ಸಭಾಂಗಣ        ಸಮಯ: 2pm

                    ಪ್ರಾರ್ಥನೆ:        ಶಾಲಾ ವಿದ್ಯಾರ್ಥಿನಿಯರಿಂದ

ಸ್ವಾಗತ,ಪ್ರಾಸ್ತಾವಿಕ ಭಾಷಣ:    ಶ್ರೀ ಶ್ಯಾಮ ಭಟ್,ಮುಖ್ಯ ಶಿಕ್ಷಕರು

            ಉದ್ಘಾಟನೆ :     ಶ್ರೀ ನಂದಿಕೇಶನ್ ಯನ್,     ಉಪಜಿಲ್ಲಾವಿದ್ಯಾಧಿಕಾರಿಗಳು.

                  ಅಧ್ಯಕ್ಷರು:     ಶ್ರೀ ಪರಮೇಶ್ವರ ಪಾವಲುಕೋಡಿ,ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರು

              ಮುಖ್ಯ ಅತಿಥಿ:      ಶ್ರೀಮತಿ ಸುಬೈದಾ ಯಂ.ಪಿ.,ವಾರ್ಡ್ ಸದಸ್ಯರು.

           ಶುಭಾಶಂಸನೆ :     ಶ್ರೀ ಕುಮಾರ ಸುಬ್ರಹ್ಮಣ್ಯ,Assnt.Engineer,KSEB Paivalike

           ಶ್ರೀಮತಿ ಇಂದಿರಾ ಮಿತ್ತಡ್ಕ,MPTA ಅಧ್ಯಕ್ಷರು

               

                     ನಿರೂಪಣೆ:        ಶ್ರೀ ವಿನೋದ ಚೇವಾರು,ಸ್ಟಾಫ್ ಸೆಕ್ರೆಟರಿ

                ದನ್ಯವಾದ  :      ರವಿಕುಮಾರ್


ಸರ್ವರಿಗೂ ಆದರದ ಸ್ವಾಗತ 

Headmaster,Staff and Students