Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Saturday, December 23, 2017

Learning Camp

ಚೇವಾರಿನಲ್ಲಿ ಶ್ರದ್ಧಾ- ಮಧುರ ಕನ್ನಡ ಕಲಿಕಾ ಶಿಬಿರದ ಉದ್ಘಾಟನೆ

ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರದ್ಧಾ- ಮಧುರ ಕನ್ನಡ ಕಲಿಕಾ ಶಿಬಿರವನ್ನು ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ನೂರುದ್ದೀನ್ ಮುಬಾರಕ್ ಉದ್ಘಾಟಿಸಿದರು.ಕಲಿಕೆಯಲ್ಲಿ ಏಕಾಗ್ರತೆ ಹೆಚ್ಚಿಸಿ,ಆಸಕ್ತಿಯನ್ನುಂಟುಮಾಡುವಲ್ಲಿ ಇಂತಹ ಶಿಬಿರಗಳು ಸಹಕಾರಿ ಎಂದು ಅಭಿಪ್ರಾಯ ಪಟ್ಟರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕ ಶ್ಯಾಮ್ ಭಟ್ ವಹಿಸಿ,ಈ ವಿಶೇಷ ಯೋಜನೆಯ ರೂಪುರೇಷೆಯನ್ನು ವಿವರಿಸಿದರು.ಮುಖ್ಯ ಅತಿಥಿ,ಮಾತೃ ರಕ್ಷಕ ಶಿಕ್ಷಕ ಸಂಘದ ಸದಸ್ಯೆ ಶಶಿಕಲಾ ಶುಭ ಹಾರೈಸಿದರು.ಶಿಕ್ಷಕಿ ಪ್ರಮೀಳಾ ಪ್ರಾರ್ಥನೆ ಹಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ರಾಜೇಶ್ವರಿ.ಬಿ,ಸರಸ್ವತಿ.ಬಿ,ತರಗತಿ ನಡೆಸಿದರು.ರವಿಕುಮಾರ್ ಸ್ವಾಗತಿಸಿದರು.ಪುಷ್ಪಲತಾ ವಂದಿಸಿದರು. ಪ್ರಸಾದ್ ರೈ ಕಾರ್ಯಕ್ರಮ ನಿರೂಪಿಸಿದರು.

No comments:

Post a Comment