ಚೇವಾರಿನಲ್ಲಿ 69ನೇ ಗಣರಾಜ್ಯೋತ್ಸವ ಆಚರಣೆ
ಚೇವಾರು ಶ್ರೀ ಶಾರದಾ
ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಗಣರಾಜ್ಯೋತ್ಸವ ಆಚರಣೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ
ನೂರುದ್ದೀನ್ ಧ್ವಜಾರೋಹಣಗೈದರು.ದೇಶಭಕ್ತಿಯನ್ನು ಎಳವೆಯಲ್ಲಿಯೇ ಬೆಳೆಸುವ ಮೂಲಕ ಸಮಾಜದಲ್ಲಿ ಶಾಂತಿ
ಸಾಮರಸ್ಯಮನ್ನು ಕಾಪಾಡುವ ಮೂಲಕ ಸದೃಢ ಭಾರತವನ್ನು ನಿರ್ಮಿಸಬಹುದೆಂದು ಅಭಿಪ್ರಾಯಪಟ್ಟರು.ಹಳೆ
ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಅಬ್ದುಲ್ ಅಸೀಸ್ ಚೇವಾರ್,ಶುಭಾಶಂಸನೆಗೈದರು.ಶಾಲಾ ಮುಖ್ಯ
ಶಿಕ್ಷಕ ಶ್ಯಾಮ್ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು.ಶಿಕ್ಷಕಿ ಸರಸ್ವತಿ
ವಂದಿಸಿದರು.ಸ್ಕೌಟ್ ಶಿಕ್ಷಕ ವಿನೋದ್ ಚೇವಾರ್ ಕಾರ್ಯಕ್ರಮ ನಿರೂಪಿಸಿದರು.
No comments:
Post a Comment