Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Thursday, October 16, 2014

Abdul kalam

  ಅಕ್ಟೋಬರ್:15 ಅಬ್ದುಲ್ ಕಲಾಂ ಜನ್ಮದಿನ
    ಅಬ್ದುಲ್ ಕಲಾಂ ಭಾರತ   ಕ೦ಡ   ಮೇಧಾವಿ. ಕ್ಷಿಪಣಿ ತಂತ್ರಜ್ಞಾನಕ್ಕೆ
ಹೊಸ ಶಕ್ತಿ ತುಂಬಿದ ವಿಜ್ಞಾನಿ. ಸರಳ ವ್ಯಕ್ತಿತ್ವದ,ಇವರು ಭಾರತದ
ರಾಷ್ಟ್ರಪತಿ ಆಗಿದ್ದರು. ದೇಶ ಕಂಡ ಅಪ್ರತಿಮ ವಿಜ್ಞಾನಿ.ಕಲಾಂ ಅವರು,
ರೋಹಿಣಿ ಉಪಗ್ರಹವನ್ನು, ಭೂ ಕಕ್ಷೆಗೆ ಒಯ್ದ, ಭಾರತದ ಮೊದಲ ಉಪಗ್ರಹ ವಾಹಕದ ನಿರ್ದೇಶಕರಾಗಿದ್ದರು.1980ರ ಜುಲೈ18ರಂದು
ದೇಶದ ಪ್ರಥಮ ಉಪಗ್ರಹ ಉಡ್ಡಯನ ವಾಹಕ  ಪಿ.ಎಸ್.ಎಲ್.ವಿ.3
ನಭಕ್ಕೆ, ಯಶಸ್ವಿಯಾಗಿ ಹಾರಿತು. ಇದರ ರುವಾರಿಯಾಗಿದ್ದವರು ಅಬ್ದುಲ್
ಕಲಾಂ. ಅಬ್ದುಲ್ ಕಲಾಂ ಅವರಿಗ ಮಕ್ಕಳು ಎಂದರೆ ಪ್ರೀತಿ. ಇಂದಿನ
ಮಕ್ಕಳು ಉತ್ತಮವಾದ ಕನಸನ್ನು ಕಾಣಬೇಕು.ಅದನ್ನು ಈಡೇರಿಸಲು
ಕಷ್ಟಪಟ್ಟು ಕೆಲಸ ಮಾಡಬೇಕೆಂಬುದು ಅವರ ಕಿವಿಮಾತು. ಅವರ ಆತ್ಮ
ಚರಿತ್ರೆಯು ”ಅಗ್ನಿಯ ರೆಕ್ಕೆಗಳು”ಎoಬ ಕೃತಿ. ನಾವು ಕೂಡಾ ವಿಜ್ಞಾನಿಗಳಾಗಲು ಪ್ರಯತ್ನಿಸೋಣ. ದೇಶವನ್ನು ಮುನ್ನಡೆಸೋಣ.

Friday, October 10, 2014

Science Quiz Winner

ಮಂಜೇಶ್ವರ ಉಪಜಿಲ್ಲಾ ಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಚೇವಾರು ಶಾಲಾ ವಿದ್ಯಾರ್ಥಿ ಕ್ಷಿತೀಶ ಸಿ.ಎಸ್.

Naada habba Awards


ಪೈವಳಿಕೆ ಪಂಚಾಯತು ಮಟ್ಟದ ನಾಡ ಹಬ್ಬದಲ್ಲಿ ಬಹುಮಾನ ಗಳಿಸಿದ ನಮ್ಮ ಶಾಲಾ ವಿದ್ಯಾರ್ಥಿಗಳು
ಸಮೂಹ ಗಾನದಲ್ಲಿ ದ್ವಿತೀಯ

ಜಾನಪದ ಗೀತೆಯಲ್ಲಿ ಪ್ರಥಮ



ಜಾನಪದ ಗೀತೆಯಲ್ಲಿ ಪ್ರಥಮ

Thursday, October 9, 2014

Eye


ವಿಶ್ವ ದೃಷ್ಟಿ ದಿನಾಚರಣೆ


ವಿಶ್ವ ದೃಷ್ಟಿ ದಿನಾಚರಣೆಯನ್ನು ಅಕ್ಟೋಬರ್ ತಿಂಗಳ 2ನೇ ಗುರುವಾರದಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ.
ಅಂಧತ್ವತನ ಇನ್ನು ಮುಂದಿಲ್ಲದಂತೆ ತಡೆಗಟ್ಟೋಣಎಂಬ ಘೋಷಣಾ ವಾಕ್ಯದೊಂದಿಗೆ ವಿಶ್ವ ದೃಷ್ಟಿ ದಿನಾಚರಣೆಯನ್ನು ಈ ವರ್ಷ ಆಚರಿಸ ಲಾಗುತ್ತಿದೆ.ಕಣ್ಣು ಎಂಬುದು ಪಂಚೇಂದ್ರಿಯಗಳಲ್ಲಿ ಒಂದು ಅಂಗವಾಗಿದೆ.ಕಣ್ಮ ಲ್ಲದವರಸು ಜೀವಿಸುವುದು ಬಹಳ ಕಷ್ಟದಿಂದ.ಟಿ.ವಿಯನ್ನು ಅತೀ ಹತ್ತಿರದಿಂದ ವೀಕ್ಷಿಸುವುದರಿಂದ,ಪ್ರಖರ ಬೆಳಕನ್ನು ನೇರವಾಗಿ ನೋಡುವುದರಂದ,ಅರೆ ಬೆಳಕಿನಲ್ಲಿ ಓದುವುದರಿಂದ,ಕಣ್ಣಿನ ದೃಷ್ಟಿ ದೋಷ ಉಂಟಾಗುತ್ತದೆ. ವಿಶ್ವದ ಶೇಕಡಾ 80ರಷ್ಟು ಅಂಧತ್ವವನ್ನು ಚಿಕಿತ್ಸೆ ಮೂಲಕ ನಿವಾರಿಸ ಬಹುದು.ಮರಣದ ನಂತರ ನಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಅಂಧರ ಬೀಳನ್ನು ಬೆಳಗಿಸಬಹುದು.


POSTAL DAY

 ಒಕ್ಟೋಬರ್ 9:ವಿಶ್ವ ಅಂಚೆ ದಿನ.


            ಸ್ವಾತಂತ್ರ್ಯ ಪೂರ್ವದ ಲ್ಲೇ ನಮ್ಮ ದೇಶದಲ್ಲಿ ಅಂಚೆ ವ್ಯವಸ್ಥೆ ಆರಂಭವಾಗಿದ್ದು,ಇಂದಿಗೂ ಪ್ರಸ್ತುತತೆಯನ್ನು ಪಡೆದು ಕೊಂಡಿದೆ. ಒಂದುಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪತ್ರಗಳನ್ನೂ, ಪಾರ್ಸಲ್ ಮೂಲಕ ವಸ್ತುಗಳನ್ನೂ ಮನಿಆರ್ಡರ್ ಮೂಲಕ ಹಣವನ್ನೂಕಳುಹಿಸಲುಅಂಚೆವ್ಯವಸ್ಥೆಯನ್ನುಬಳಸುತ್ತಿದ್ದೇವೆ.ಇವುಗಳಲ್ಲದೇ ಪೋಸ್ಟಲ್
ಬ್ಯಾಂಕಿನಲ್ಲಿ ಹಣವನ್ನು ಉಳಿತಾಯ ಮಾಡಬಹುದಾಗಿದೆ. ಪ್ರತಿಯೊಂದು
ಸ್ಥಳಕ್ಕೂ 6ಅಂಕೆಗಳನ್ನೊಳಗೊಂಡPINಕೋಡ್ ಎಂಬ ನಿರ್ದಿಷ್ಟ
ಸಂಖ್ಯೆಯಿದೆ.ಇದನ್ನು ಪೋಸ್ಟಲ್ ಇಂಡೆಕ್ಸ್ ನಂಬರ್ ಎನ್ನುವರು.
ಫೋನ್,ಕಂಪ್ಯೂಟರ್,ಮೊಬೈಲ್ಗಳ ಬಳಕೆಯಲ್ಲಿ ಕಡಿಮೆಯಾದ

ಸಂತಾಪ


ಸಂತಾಪ

ಮಂಜೇಶ್ವರ ಎಸ್ ಎ ಟಿ ಎಚ್ ಎಸ್ ಶಿಕ್ಷಕ,ಸ್ಕೌಟ್ ಅಧ್ಯಾಪಕ, ಶಿಕ್ಷಕರ ತರಬೇತಿಯ ಜಿಲ್ಲಾ ಸಂಪನ್ಮೂಲ ವ್ಯಕ್ತಿ, ಶೈಕ್ಷಣಿಕ ರಂಗದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ರಚನಾತ್ಮಕ ಚಟುವಟಿಕೆಗಳನ್ನು ಪ್ರೋತ್ಸಾಹಿಸಿ, ಎಲ್ಲರಿಗೂ ಆದರ್ಶಪ್ರಾಯರಾಗಿದ್ದು, ನಮ್ಮನ್ನಗಲಿದ ಶಿವಾನಂದ ಅರಿಬೈಲು ಅವರಿಗೆ ನಮ್ಮ ಶಾಲಾ ಅಧ್ಯಾಪಕ ವೃಂದ,ವಿದ್ಯಾರ್ಥಿ ಸಮೂಹ ಹಾಗೂ ರಕ್ಷಕ ವೃಂದ ಸಂತಾಪ ವ್ಯಕ್ತ ಪಡಿಸಿದರು.ಅವರ ದಿವ್ಯ ಆತ್ಮಕ್ಕೆ ಭಗವಂತನು ಚಿರ ಶಾಂತಿ ನೀಡಲಿ,ಕುಟುಂಬದವರಿಗೆ ದು:ಖವನ್ನು ಸಹಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಲಾಯಿತು.

Wednesday, October 8, 2014

Indian Airforce Day

   ಅಕ್ಟೋಬರ್ 8 ರಾಷ್ಟ್ರೀಯ ವಾಯುಸೇನಾದಿನ.

   ವಿಶ್ವದಲ್ಲೇ ನಮ್ಮ ದೇಶದ ವಾಯು ಸೇನೆಗೆ ವಿಶಿಷ್ಟ ಸ್ಥಾನವಿದೆ.
ಭೂಸೈನ್ಯ ,ನೌಕಾ ಸೈನ್ಯ ಮತ್ತು ವಾಯುಸೈನ್ಯಗಳೆಂಬ ಮೂರು ದಳಗಳುನಮ್ಮ ದೇಶವನ್ನು ಹಗಲಿರುಳು ಕಾಯುತ್ತಿವೆ.ಅನೇಕ ಯೋಧರು,ಮನೆಬಂಧುಗಳಿಂದ ದೂರವಿದ್ದು,ಸಮವಸ್ತ್ರ ಧರಿಸಿ, ವಾಯು ನೆಲೆಗಳಲ್ಲಿದೇಶದ ರಕ್ಷಣೆಗಾಗಿ ದುಡಿಯುತ್ತಿದ್ದಾರೆ. ಅನೇಕ ಆಧುನಿಕಯುದ್ಧವಿಮಾನಗಳು,ಶಸ್ತ್ರಾಸ್ತ್ರಗಳುವಾಯುಸೇನೆಯಲ್ಲಿವೆ.
ವಾಯುಪಡೆಯ ಬಗ್ಗೆ ಇನ್ನಷ್ಟು ತಿಳಿಯೋಣ,ಗೌರವಿಸೋಣ,ನಾವೂ
ಯೋಧರಾಗೋಣ.