Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Monday, January 25, 2016

HAPPY REPUBLIC DAY

ಗಣರಾಜ್ಯೋತ್ಸವದ ಶುಭಾಶಯಗಳು

NATIONAL VOTER'S DAY


ಜನವರಿ 25,ರಾಷ್ಟ್ರೀಯ ಮತದಾರರ ದಿನ
ಭಾರತವು ಪ್ರಜಾ ಪ್ರಭುತ್ವ ವ್ಯವಸ್ಥೆಯನ್ನು ಹೊಂದಿದ ದೊಡ್ಡ ರಾಷ್ಟ್ರವಾಗಿದೆ.ಜನರಿಂದಲೇ ಜನರಿಗಾಗಿ ಜನರೇ ಆಡಳಿತ ವ್ಯವಸ್ಥೆಯನ್ನು ರೂಪಿಸಿರುವುದು ಇದರ ವೈಶಿಷ್ಠ್ಯವಾಗಿದೆ.ಮತದಾನದ ಮೂಲಕ ನಮ್ಮ ಪ್ರತಿನಿಧಿಗಳನ್ನು ಆರಿಸುವುದು.ಇದಕ್ಕಾಗಿ ಭಾರತೀಯ ಚುನಾವಣಾ ಆಯೋಗವೆಂಬ ಬೃಹತ್ ವ್ಯವಸ್ಥೆ ಇದೆ.ಈ ಆಯೋಗದ ಸಂಸ್ಥಾಪನಾ ದಿನವಾದ ಜನವರಿ 25 ನ್ನು ರಾಷ್ಟ್ರೀಯ ಮತದಾರರ ದಿನವನ್ನಾಗಿ ದೇಶಾದ್ಯಂತ ಆಚರಿಸಲಾಗುತ್ತಿದೆ.18 ವರ್ಷ ಪೂರ್ತಿಗೊಂಡ ನಾಗರೀಕರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಸಲು ಅರ್ಹರಾಗಿರುತ್ತಾರೆ.
ಮತದಾರರ ಪ್ರತಿಜ್ಞಾ ವಿಧಿ
ಪ್ರಜಾ ಪ್ರಭುತ್ವದಲ್ಲಿ ದೃಢ ವಿಶ್ವಾಸವುಳ್ಳ ಭಾರತದ ಪೌರರಾದ ನಾವು,ನಮ್ಮ ದೇಶದ ಪ್ರಜಾ ಸತ್ತಾತ್ಮಕ ಸಂಪ್ರದಾಯಗಳು,ಮುಕ್ತ,ನ್ಯಾಯ ಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯುತ್ತೇವೆಂದು ಮತ್ತು ಪ್ರತಿಯಂದು ಚುನಾವಣೆಯಲ್ಲಿ ನಿರ್ಭೀತರೀಗಿ ಧರ್ಮ,ಜನಾಂಗ,ಜಾತಿ,ಮತ ಭಾಷೆ ಅಥವಾ ಯಾವುದೇ ಪ್ರೇರಣೆಗಳ ದಾಕ್ಷೀಣ್ಯ.ಗಳಿಂದ ಪ್ರಭಾವಿತರಾಗದೇ ಮತ ಚಲಾಯಿಸುತ್ತೇವೆಯಂದು ಈ ಮೂಲಕಪ್ರತಿಜ್ಞೆ ಸ್ವೀಕರಿಸುತ್ತೇವೆ.

Sunday, January 17, 2016

NAVY DAY


ಜನವರಿ-15 ರಾಷ್ಟ್ರೀಯ ಭೂ ಸೇನಾ ದಿನ
ರಾಷ್ಟ್ರ ರಕ್ಷಣೆಯೇ ಪರಮಧ್ಯೇಯವನ್ನಾಗಿಸಿಕೊಂಡು ಎಂತಹ ಕಠಿಣ ಪರಿಸ್ಥಿತಿ ಎದುರಾದರೂ ಸಮರ್ಥವಾಗಿ ಎದುರಿಸಿ,ಎಂತಹ ಸನ್ನಿವೇಶಗಳಲ್ಲೂ ಎದೆಗುಂದದೆ,ದೇಶ ಸೇವೆಯೇ ಈಶ ಸೇವೆ  ಎಂದು ನಂಬಿರುವವರು ನಮ್ಮ ಭಾರತದ ಸಶಸ್ತ್ರ ಪಡೆಗಳು.ಇವುಗಳು ವಿಶ್ವದಲ್ಲೇ ಅಪ್ರತಿಮ.ವಿಶ್ವದಲ್ಲೇ ನಮ್ಮ ದೇಶದ ಭೂ ಸೇನೆಗೆ ವಿಶಿಷ್ಟವಾದ ಸ್ಥಾನವಿದೆ. ದೇಶ ರಕ್ಷಣೆ ಮತ್ತು ನಾಗರೀಕರ ಜೀವ ರಕ್ಷಣೆ ಮಾಡುವುದರಲ್ಲಿ ಯೋಧರ ತ್ಯಾಗ,ಶೌರ್ಯ,ಸಾಹಸ,ಬಲಿದಾನ ಅಪೂರ್ವ ವಾದುದು.ಭೂ ಸೇನೆ,ನೌಕಾ ಸೇನೆ ಹಾಗೂ ವಾಯು ಸೇನೆಗಳೆಂಬ ದಳಗಳು,ನಮ್ಮ ದೇಶವನ್ನು ಹಗಲಿರುಳು ಕಾಯುತ್ತಿವೆ.
1949ರ ಜನವರಿ 15ರಂದು,ಬ್ರಿಟಿಷ್ ಕಮಾಂಜರ್ ಇನ್ ಚೀಫ್ ಜನರಲ್ ರೋಯ್ ಬುಚ್ಚರ್ ಅವರಿಂದ ಭಾರತದ ಫೀಲ್ಡ್ ಮಾರ್ಷಲ್ ಕೆ.ಯಂ.ಕಾರ್ಯಪ್ಪರಿಗೆ ಅಧಿಕಾರ ಹಸ್ತಾಂತರವಾಯಿತು.ಆದ್ದರಿಂದ ಪ್ರತಿ ವರ್ಷ ಜನವರಿ 15ರಂದು  ರಾಷ್ಟ್ರೀಯ ಭೂ ಸೇನಾ ದಿನವನ್ನಾಗಿ ಆಚರಿಸಲಾಗುತ್ತಿದೆ.
ಅನೇಕ ಯೋಧರು ಮನೆ,ಬಂಧುಗಳಿಂದ ದೂರವಿದ್ದು ಚಳಿ,ಮಳೆ,ಬಿಸಿಲುಗಳನ್ನು ಲೆಕ್ಕಿಸದೆ,ದೇಶದ ರಕ್ಷಣೆಗಾಗಿ ಭೂ ಸೇನೆಯಲ್ಲಿ ದುಡಿಯುತ್ತಿದ್ದಾರೆ. ಯೋಧರನ್ನು ಗೌರವಿಸೋಣ.

Thursday, January 14, 2016

VIDYARANGA CAMP

ಶಾಲಾ ಮಟ್ಟದ ವಿದ್ಯಾರಂಗ ಸಾಹಿತ್ಯೋತ್ಸವ 2016
ಸ್ವಾಗತ ಭಾಷಣ ಶ್ರೀಮತಿ ರಾಜೇಶ್ವರಿಯವರಿಂದ

ಉದ್ಘಾಟನೆ ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ರಿಂದ

ಹಸ್ತಪತ್ರಿಕೆ ಬಿಡುಗಡೆ ಮಾಜಿ ಪಂಚಾಯತು ಸದಸ್ಯೆ ಸುಬೈದಾ ರಿಂದ

ಪ್ರತಿ ತರಗತಿ ವಿದ್ಯಾರ್ಥಿಗಳು ತಯಾರಿಸಿದ ಹಸ್ತ ಪತ್ರಿಕೆಗಳನ್ನು ಬಿಡುಗಡೆಗೊಳಿಸುತ್ತಿರುವ ತರಗತಿ ಅಧ್ಯಾಪಕರು


ಧನ್ಯವಾದ ಸಮರ್ಪಣೆ ಶ್ರೀಮತಿ ಪುಷ್ಪಲತರಿಂದ

MY PAINTING

Goutham S V Std

Monday, January 11, 2016

YOUTH DAY



ಜನವರಿ 12 ರಾಷ್ಟ್ರೀಯ ಯುವ ದಿನ


ಯುವಕರೇ, ಎದ್ದೇಳಿ,ಗುರಿ ಮುಟ್ಟುವ ತನಕ ನಿಲ್ಲದಿರಿ.ದೇಶಕ್ಕಾಗಿ ಹೋರಾಡಿಎಂದು ಕರೆಯನ್ನಿತ್ತು,ಯುವಕರಲ್ಲಿರುವ ಶಕ್ತಿಯನ್ನು ಜಾಗೃತ ಗೊಳಿಸಿದ ಮಹಾನ್ ಸಂತ,ಸ್ವಾಮೀ ವಿವೇಕಾನಂದರ ಜನ್ಮ ದಿನ ವಾದ ಜನವರಿ 12ನ್ನು ರಾಷ್ಟ್ರೀಯ ಯುವ ದಿನ ವನ್ನಾಗಿ ದೇಶದಾದ್ಯಂತ ಆಚರಿಸಲಾಗುತ್ತಿದೆ.
ಸ್ವಾಮೀ ವಿವೇಕಾನಂದರು 1863 ರ ಜನವರಿ 12 ರಂದು ಪಶ್ಚಿಮ ಬಂಗಾಳದಲ್ಲಿ ಜನಿಸಿದರು.ತಂದೆ ವಿಶ್ವ ನಾಥ ದತ್ತ,ತಾಯಿ ಭವನೇಶ್ವರಿ ದೇವಿ,ದೈವ ಭಕ್ತರಾಗಿದ್ದರು.ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಸಿದ ನರೇಂದ್ರ ನಾಥ ದತ್ತರಿಗೆ ಆಧ್ಯಾತ್ಮದಲ್ಲಿ ಒಲವು ಹೆಚ್ಚಿತು.ಶ್ರೀ ರಾಮ ಕೃಷ್ಣ ಪರಮ ಹಂಸರ ಶಿಷ್ಯರಾದ ನರೇಂದ್ರ ನಾಥ ದತ್ತರು,ಸಮಾಜದಲ್ಲಿ ರುವ ಅಶಾಂತಿ,ಬಡತನ ನಿರ್ಮೂಲನೆ ಮಾಡಲು ಪಣತೊಟ್ಟರು.
1893ರಲ್ಲಿ ಶಿಕಾಗೋದಲ್ಲಿ ನಡೆದ ಸರ್ವ ಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ,ಭಾರತದ ಆದ್ಯಾತ್ಮಿಕ ತತ್ವಗಳನ್ನು ಜಗತ್ತಿಗೇ ಪಸರಿಸಿದರು.

Sunday, January 3, 2016


ಜನವರಿ 3,ಪ್ರವಾದಿ ಮಹಮ್ಮದ್ ಪೈಗಂಬರ್ ಜನ್ಮ ದಿನ
ಕ್ರಿ.ಶ.570 ರಲ್ಲಿ ಪ್ರವಾದಿ ಮಹಮ್ಮದ್ ಮೆಕ್ಕಾದಲ್ಲಿ ಜನಿಸಿದರು.ಆಧ್ಯಾತ್ಮ ದಲ್ಲಿ ಆಸಕ್ತಿ ಹೊಂದಿದ್ದ ಇವರಿಗೆ ಕ್ರಿ.ಶ.610 ರಲ್ಲಿ ಸಾಕ್ಷಾತ್ಕಾರವಾಯಿತು.ಧರ್ಮ ಪ್ರಚಾರದಲ್ಲಿ ತೊಡಗಿದ ಇವರು ಅಲ್ಲಾಹುವಿನ ಮಗ ಎಂದು ಪ್ರಸಿದ್ಧರಾದರು. ಕ್ರಿ.ಶ.622 ರಲ್ಲಿ ಮದೀನಾಕ್ಕೆ ತೆರಳಿದರು.ಮಹಮ್ಮದೀಯ ಹಿಜಿರಾ ಶಕ ಇಲ್ಲಿಂದ ಪ್ರಾರಂಭವಾಯಿತು.ಮತ್ತೆ ಮೆಕ್ಕಾಕ್ಕೆ ಹಿಂತಿರುಗಿದ ಮಹಮ್ಮದ್ ಪೈಗಂಬರ್,ಅರೇಬಿಯಾದ ಪ್ರವಾದಿ ಎಂದು ಪರಿಗಣಿಸಲ್ಪಟ್ಟರು.
ಇವರು ಸ್ಥಾಪಿಸಿದ ಮತವೇ ಇಸ್ಲಾಂ.ಇಲ್ಲಿ ವಿಗ್ರಹ ಆರಾಧನೆಗೆ ಅವಕಾಶವಿಲ್ಲ.ಸಮಾನತೆಗೆ ಪ್ರಾಧಾನ್ಯ.5 ಬಾರಿ ಪ್ರಾರ್ಥನೆ.ಬಡವರಿಗೆ ದಾನ,ರಂಜಾನ್ ಉಪವಾಸ ಇವರು ಅನುಸರಿಸಬೇಕಾದ ನಿಯಮ.ಕುರ್ ಆನ್ ಇವರ ಪವಿತ್ರ ಗ್ರಂಥ.