Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Tuesday, October 7, 2014

ವನ್ಯಜೀವಿ ಸಪ್ತಾಹ


ಅಕ್ಟೋಬರ್ 1 ರಿಂದ 7.ವನ್ಯಜೀವಿ ಸಪ್ತಾಹ

    ಭೂಮಿಯ ಮೇಲೆ ವಿವಿಧ ಪ್ರಭೇದಗಳ ಜೀವರಾಶಿಗಳಿವೆ.ಇವುಗಳಲ್ಲಿ ವನ್ಯ ಜೀವಿಗಳೂ ಸೇರಿವೆ.ಭೂಮಿಯ ಮೇಲೆ ಬದುಕುವ ಹಕ್ಕು ಮನುಷ್ಯರಂತೆಯೇ,ಇತರಜೀವಿಗಳಿಗೂ ಇದೆ.ಕಾಡು ಅನೇಕ ವನ್ಯ ಜೀವಿಗಳ ಆಶ್ರಯತಾಣವಾಗಿದೆ.ಹುಲಿ,ಸಿಂಹ,ಕರಡಿ,ಮಂಗ,ಚಿರತೆ,ಜೀಬ್ರಾ ಮುಂತಾದ ಅನೇಕಜೀವಿಗಳಿಗೆ ಬದುಕಲು ಕಾಡು ಬೇಕು.ಕಾಡು ಪ್ರಾಣಿಗಳ ರಕ್ಷಣೆಯ ನಿಟ್ಟಿನಲ್ಲಿ ಅಕ್ಟೋಬರ್ 1ರಿಂದ 7ರ ತನಕ ವನ್ಯ ಜೀವಿ ಸಪ್ತಾಹವನ್ನು ಆಚರಿಸಲಾಗುತ್ತಿದೆ.1977ರಲ್ಲಿಅರಣ್ಯ ಸಂರಕ್ಷಣಾ ಕಾಯಿದೆ ಜಾರಿಗೆ ಬಂದ ನಂತರ ವನ್ಯ ಜೀವಿಗಳು ಅರಣ್ಯ ಸಂಪತ್ತು ಉಳಿಯಲು ಕಾರಣವಾಯಿತು.ಆಹಾರ ಸರಪಳಿಯಲ್ಲಿ ಎಲ್ಲಾ ಜೀವಿಗಳು ಒಳಗೊಂಡಿವೆ.
ವನ್ಯ ಜೀವಿಗಳ ಅಳಿವಿಗೆ,ಮನುಷ್ಯನು ಕಾರಣನಾಗುತ್ತಿರುವುದು ಬೇಸರದ ಸಂಗತಿಯಾಗಿದೆ.ಗಾಂಧೀಜಿಯವರ ನೆನಪಿನಲ್ಲಿ ಆರಂಭವಾದ ಈ ವನ್ಯ ಜೀವಿ ಸಂರಕ್ಷಣಾ ಸಪ್ತಾಹವು ಫಲಪ್ರದವಾಗಲಿ,ವನ್ಯ ಜೀವಿಗಳು ಇನ್ನಷ್ಟು ಹೆಚ್ಚಾಗಲಿ ಎಂಬುದೇ ನಮ್ಮೆಲ್ಲರ ಆಶಯ.

Thursday, October 2, 2014

NAVOLLASA CAMP

ಸಾಕ್ಷರತಾ ಶಿಬಿರ 'ನವೋಲ್ಲಾಸ'ದ ಆಯೋಜನೆ
ಸ್ವಾಗತ ಭಾಷಣ ರವಿಕುಮಾರ ರಿಂದ
ಪ್ರಾಸ್ತಾವಿಕ ಭಾಷಣ ಮುಖ್ಯ ಶಿಕ್ಷಕರಿಂದ

ನವೋಲ್ಲಾಸ ಶಿಬಿರದ ಉದ್ಘಾಟನೆ ಸುಬೈದಾ ಟೀಚರ್ ರಿಂದ





ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಕ್ಷರ ನವೋಲ್ಲಾಸ ಶಿಬಿರವು ಇತ್ತೀಚೆಗೆ ಜರಗಿತು.ಶಿಬಿರದ  ಉದ್ಘಾಟನೆಯನ್ನು ಪೈವಳಿಕೆ ಪಂಚಾಯತು ಸದಸ್ಯೆ  ಸುಬೈದಾ ಟೀಚರ್  ನೆರವೇರಿಸಿ,ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ,ತಮ್ಮ ಪ್ರತಿಭೆಯನ್ನು ವ್ಯಕ್ತಪಡಿಸಲು ಶಿಬಿರಗಳು ಸಹಕಾರಿ ಎಂದು ಅಭಿಪ್ರಾಯಪಟ್ಟರು. ಪಿ.ಟಿ.ಎ. ಅಧ್ಯಕ್ಷ ಪರಮೇಶ್ವರ ಪಾವಲುಕೋಡಿ ಅಧ್ಯಕ್ಷತೆ ವಹಿಸಿದರು.ಮುಖ್ಯ ಅತಿಥಿಗಳಾಗಿ  ಮಾತೃ ರಕ್ಷಕ ಸಂಘದ ಅಧ್ಯಕ್ಷೆ ಇಂದಿರಾಮಿತ್ತಡ್ಕ ಹಾಗೂ ಅಧ್ಯಾಪಕ ಶಂಕರ ನಾರಾಯಣ ಭಟ್ ಶುಭ ಹಾರೈಸಿದರು. ಶಾಲಾ ಮುಖ್ಯ ಶಿಕ್ಷಕ ಶ್ಯಾಮ ಭಟ್ ಶಿಬಿರದ ಉದ್ದೇಶವನ್ನು ವಿವರಿಸಿದರು.ಶಿಕ್ಷಕ ರವಿಕುಮಾರ್ ಸ್ವಾಗತಿಸಿದರು. ಶಿಕ್ಷಕಿ ಪ್ರಮೀಳಾ ವಂದಿಸಿದರು. ಶಿಕ್ಷಕ ಪ್ರಸಾದ್ ರೈ ಕಾರ್ಯಕ್ರಮ ನಿರೂಪಿಸಿದರು.


 ಶಂಕರ ನಾರಾಯಣ ಭಟ್-ಶುಭಾಶಂಸನೆ

GANDHI JAYANTHI CELEBRATION

ಗಾಂಧೀ ಜಯಂತಿ ಆಚರಣೆ
ವಾರ್ಡ್ ಸದಸ್ಯೆ ಶ್ರೀಮತಿ ಸುಬೈದಾರಿಂದ ಉದ್ಘಾಟನೆ
ವಿದ್ಯಾರ್ಥಿಗಳು ಹಾಗೂ ರಕ್ಷಕರು.
ಶ್ರೀ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಘದ ಅಧಿಕಾರಿ ಭರತ್ ಕುಂದಾಪುರ

ಅಧ್ಯಕ್ಷರ ಭಾಷಣ

ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ

ಗಾಂಧೀಜಿ ಭಾವಚಿತ್ರಕ್ಕೆ ನಮನ
MPTA ಅಧ್ಯಕ್ಷೆಯವರಿಂದ ಶುಭಾಶಂಸನೆ.
ಪರಿಸರ ಶುಚೀಕರಣ
ಪರಿಸರ ಶುಚೀಕರಣ
ಪರಿಸರ ಶುಚೀಕರಣ

ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ




ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಾಂಧೀ ಜಯಂತಿಯನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.ಶಾಲಾ ಎಸೆಂಬ್ಲಿಯಲ್ಲಿ,ಸ್ವಚ್ಛತಾ ಅಭಿಯಾನದ ಪ್ರತಿಜ್ಞೆಯನ್ನು ಕೈಗೊಳ್ಳಲಾಯಿತು. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಪೈವಳಿಕೆ ಪಂಚಾಯತು ಸದಸ್ಯೆ  ಸುಬೈದಾ ಟೀಚರ್  ನೆರವೇರಿಸಿ, ಗಾಂಧೀಜಿಯವರು ಜೀವನದಲ್ಲಿ ಪಾಲಿಸಿದ ಸತ್ಯ,ಶಾಂತಿ,ಅಹಿಂಸೆ,ಪ್ರೇಮ,ಸರಳತೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆಯಿತ್ತರು.ಪಿ.ಟಿ.ಎ. ಅಧ್ಯಕ್ಷ ಪರಮೇಶ್ವರ ಪಾವಲುಕೋಡಿ ಅಧ್ಯಕ್ಷತೆ ವಹಿಸಿದರು.ಮುಖ್ಯ ಅತಿಥಿಗಳಾಗಿ ,ಶ್ರೀ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಘದ ಅಧಿಕಾರಿ ಭರತ್ ಕುಂದಾಪುರ ಮತ್ತು ಮಾತೃ ರಕ್ಷಕ ಸಂಘದ ಅಧ್ಯಕ್ಷೆ ಇಂದಿರಾ ಶುಭಾಶಂಸನೆಗೈದರು. ಶಾಲಾ ಮುಖ್ಯ ಶಿಕ್ಷಕ ಶ್ಯಾಮ ಭಟ್ ಸ್ವಾಗತಿಸಿದರು. ಶಿಕ್ಷಕಿ ರಾಜೇಶ್ವರಿ ವಂದಿಸಿದರು. ಶಿಕ್ಷಕ ವಿನೋದ್ ಚೇವಾರು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಅಂಗವಾಗಿ ಗಾಂಧೀಜಿಯವರ ಭಾವ ಚಿತ್ರಕ್ಕೆ,ವಿದ್ಯಾರ್ಥಿಗಳು,ಶಿಕ್ಷಕರು,ರಕ್ಷಕರು ಪುಷ್ಪಾರ್ಚನೆಗೈದು ಗೌರವ ಸಲ್ಲಿಸಿದರು.ಪರಿಸರ ಶುಚೀಕರಣ ಮತ್ತು ಗಾಂಧೀಜಿ ಕುರಿತಾದ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಯಿತು.

ಅಕ್ಟೋಬರ್-2 ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನ

ನಮ್ಮ ಭವ್ಯ ಭಾರತವು ಲಕ್ಷಾಂತರ ದೇಶಭಕ್ತರನ್ನು ನೀಡಿದ ಪುಣ್ಯ ಭೂಮಿ.ದೇಶದ ಹಿತಕ್ಕಾಗಿ ಹಗಲಿರುಳು ಪ್ರಾಮಾಣಿಕವಾಗಿ ಶ್ರಮಿಸಿದವರಲ್ಲಿ ಒಬ್ಬರು ಭಾರತ ದೇಶದ ದ್ವಿತೀಯ ಪ್ರಧಾನಿ,ಸ್ವಾರ್ಥ ರಾಷ್ಟ್ರ  ಸೇವಕ,ಸರಳ,ಸಜ್ಜನಿಕೆಯ  ಮೂರ್ತ ಸ್ವರೂಪ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರು ಒಬ್ಬರು.
ಲಾಲ್ ಬಹದ್ದೂರ್ ಶಾಸ್ತ್ರಿಯವರು 1904ರ ಅಕ್ಟೋಬರ್-2ರಂದು ಉತ್ತರ ಪ್ರದೇಶದ ವಾರಣಾಸಿಯ ಸಮೀಪದ  ಮೊಘಲ್ ಸರಾಯ್ ನಲ್ಲಿ ಜನಿಸಿದರು.ತಂದೆ ಶಾರದಾ ಪ್ರಸಾದ್,ತಾಯಿ ರಾಮ್ ದುಲಾರಿ ದೇವಿ.1915ರಲ್ಲಿ ಗಾಂಧೀಜಿಯವರ ಅಸಹಕಾರ ಚಳವಳಿಯಲ್ಲಿ ಭಾಗದವಹಿಸಿದರು.
ಸ್ವತಂತ್ರ ಭಾರತದಲ್ಲಿ ,ಮೊದಲು ಸಾರಿಗೆ ಸಚಿವರಾಗಿ,1961 ರಲ್ಲಿ ಗೃಹ ಮಂತ್ರಿಯಾದರು.,1964ರ ಜೂನ್ 9ರಂದು ಪ್ರಧಾನಿಯಾದರು. ಜೈ ಜವಾನ್ ಜೈ ಕಿಸಾನ್ ಎಂಬುದು ಅವರ ಘೋಷಣಾ ವಾಕ್ಯ.

BLOOD DONATION DAY


ಅಕ್ಟೋಬರ್-1 ರಾಷ್ಚೀಯ ಸ್ವಯಂ ಪ್ರೇರಿತ ರಕ್ತದಾನ ದಿನ

       ರಕ್ತಕ್ಕೆ ಮತ್ಯಾವ ಪರ್ಯಾಯವೂ ಇಲ್ಲ.ಮಾನವ ಮಾತ್ರ ಇನ್ನೊಬ್ಬ ಮಾನವನಿಗೆ ರಕ್ತವನ್ನು ದಾನ ಮಾಡಬಹುದು ಮತ್ತು ಜೀವವನ್ನು ಉಳಿಸ ಬಹುದು. ಒಮ್ಮೆ ರಕ್ತದಾನ ಮಾಡುವ ಮೂಲಕ 3 ಕ್ಕಿಂತ ಹೆಚ್ಚು ಜನರಿಗೆ ಜೀವ ನೀಡಬಹುದು.ಒಂದು ಬಾರಿಗೆ,ಕೇವಲ 350ಮಿಲ್ಲಿ ಲೀಟರ್ ರಕ್ತವನ್ನು ಮಾತ್ರ ತೆಗೆದು ಕೊಳ್ಳಲಾಗುವುದು. ಈ ರಕ್ತವು 24 ಗಂಟೆಯೊಳಗೆ ಪುನಶ್ಚೇತನ ಗೊಳ್ಳುತ್ತದೆ. ಪುರುಷರು 3 ತಿಂಗಳಿಗೊಮ್ಮೆ ಹಾಗೂ ಮಹಿಳೆಯರು 4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು.

ಅಕ್ಟೋಬರ್-1 ವಿಶ್ವ ಹಿರಿಯ ನಾಗರಿಕರ ದಿನ

  ಹಿರಿಯ ನಾಗರಿಕರು ಸಮಾಜದ ಅಮೂಲ್ಯ ಆಸ್ತಿ.ಅವರು ಬದುಕಿನ ಸಂಜೆಯಲ್ಲಿ ನೆಮ್ಮದಿಯಿಂದ ಬಾಳುವಂತೆ ನೋಡಿಕೊಳ್ಳುವುದು ಸಮಾಜ,ಸರ್ಕಾರ ಮತ್ತು ವಾರಿಸುದಾರರ ಜವಾಬ್ದಾರಿ.ಹಿರಿಯ ನಾಗರಿಕರ ಯೋಗಕ್ಷೇಮಕ್ಕೆ ಭರವಸೆ ನೀಡಿ ಅವರಲ್ಲಿ ಆತ್ಮ ವಿಶ್ವಾಸ ಮೂಡಿಸುವುದೇ ವಿಶ್ವ ಹಿರಿಯ ನಾಗರಿಕರ ದಿನದ ಉದ್ದೇಶ.