Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Wednesday, June 22, 2016

CLUB INAUGURATION-2016-17

ವಿವಿಧ ಕ್ಲಬ್ ಗಳ ಉದ್ಘಾಟನೆ


WORLD YOGA DAY CELEBRATION-2016-17


ಚೇವಾರು ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ


ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ವಿಶ್ವ ಯೋಗ ದಿನಾಚರಣೆಯನ್ನು ಶಾಸ್ತ್ರೀಯವಾಗಿ ಆಚರಿಸಲಾಯಿತು.ಶಾಲಾ ಮುಖ್ಯ ಶಿಕ್ಷಕ ಶ್ರೀ ಶ್ಯಾಮ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಿ ಯೋಗಾಭ್ಯಾಸದ ಮಹತ್ವವನ್ನು ವಿವರಿಸಿದರು.ಮುಖ್ಯ ಅತಿಥಿಗಳಾಗಿ ಮಾಜಿ ಪಂಚಾಯತು ಸದಸ್ಯೆ ಸುಬೈದಾ ಟೀಚರ್,ಸ್ಕೌಟ್ ಶಿಕ್ಷಕ ವಿನೋದ್ ಉಪಸ್ಥಿತರಿದ್ದರು. ಸ್ಟಾಫ್ ಕಾರ್ಯದರ್ಶಿ ರವಿಕುಮಾರ್ ಸ್ವಾಗತಿಸಿದರು.ಪುಷ್ಪಲತಾ. ಕೆ.ವಿ.ವಂದಿಸಿದರು.ಯೋಗಾಚಾರ್ಯ ದಿನಕರ ಕಾಮತ್ ಚೇವಾರ್ ಯೋಗ ಪ್ರದರ್ಶನಕ್ಕೆ ನೇತೃತ್ವ ನೀಡಿದರು.ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡರು.

Tuesday, June 21, 2016

SCHOOL ELECTION-2016-17


ಶಾಲಾ ನಾಯಕನ ಚುನಾವಣೆ 2016-17



 
ಈ ಶಾಲಾ ವರ್ಷದ ಶಾಲಾ ನಾಯಕನ ಚುನಾವಣೆಯು ಘೋಷಣೆಯಾಗಿ, ನಾಮಪತ್ರ ಸಲ್ಲಿಸಲು ದಿನ ನಿಗದಿಪಡಿಸಲಾಯಿತು. ನಾಮಪತ್ರ ಹಿಂಪಡೆಯಲೂ ದಿನ ನಿಗದಿಪಡಿಸಲಾಗಿ,ಅಂತಿಮವಾಗಿ  .6 ಜನ ಅಭ್ಯರ್ಥಿಗಳು  ಚುನಾವಣಾಕಣದಲ್ಲಿದ್ದರು. ಎಲ್ಲಾ ಅಭ್ಯರ್ಥಿಗಳಿಗೆ ಚಿಹ್ನೆಗಳನ್ನು ನೀಡಿ,ಪ್ರಚಾರಕ್ಕೆ ಅನುವು ಮಾಡಿಕೊಡಲಾಯಿತು. ಚುನಾವಣಾ ದಿನದಂದು, 3ನೇ ತರಗತಿಯಂದ 7ನೇತರಗತಿ ವರೆಗಿನ ಎಲ್ಲಾ ಮತದಾರರು ಸರದಿ ಸಾಲಿನಲ್ಲಿ ನಿಂತು ಚುನಾವಣಾಧಿಕಾರಿಗಳಿಂದ,ಮತದಾರರ ಚೀಟಿ ಪಡೆದು,ಎಡಕೈ ನಡು ಬೆರಳ ತುದಿಗೆ ಅಳಿಸಲಾರದ ಶಾಯಿಯನ್ನು ಹಾಕಿಸಿ,ಚುನಾವಣಾ ಸೀಲನ್ನು ಪಡೆದು,ಗೌಪ್ಯವಾಗಿ ತಮಗಿಷ್ಟವಾದ ಅಭ್ಯರ್ಥಿಗಳಿಗೆ, ಸೀಲನ್ನು ಒತ್ತಿ, ಚೀಟಿಯನ್ನು ಮಡಚಿ ಮತ ಪೆಟ್ಟಿಗೆಗೆ ಹಾಕಿ ಹೊರ ಬಂದಾಗ,ಚುನಾವಣಾ ವ್ಯವಸ್ಥೆಯ ಕುರಿತಾದ ಜ್ನಾನವನ್ನು ಪಡೆದ ಸಂತೃಪ್ತಿ ಮಕ್ಕಳ ಮುಖದಲ್ಲಿ,ನಲಿದಾಡುತ್ತಿತ್ತು.ತದನಂತರ ಅಭ್ಯರ್ಥಿಗಳ ಸಮ್ಮುಖದಲ್ಲಿ ನಡೆದ ಮತ  ಎಣಿಕೆ ಮಾಡಿ ವಿಜೇತರ ಹೆಸರನ್ನು ಘೋಷಿಸಲಾಯಿತು.
ಶಾಲಾ ನಾಯಕನಾಗಿ 7ನೇ ತರಗತಿಯ ಜ್ಯೋತಿಕ.ಸಿ.ಟಿ., ದ್ವಿತೀಯ ನಾಯಕ ನಾಗಿ 7ನೇ ತರಗತಿಯ ಮಹಮ್ಮದ್ ನವಾಝ್ ,ತೃತೀಯ ನಾಯಕನಾಗಿ 6ನೇ ತರಗತಿಯ ನವೀನ್ ಕುಮಾರ್ ಜಯಗಳಿಸಿದರು.ಇವರನ್ನು ಅಭಿನಂದಿಸಲಾಯಿತು.

WORLD ENVIRONMENT DAY CELEBRATION

ವಿಶ್ವ ಪರಿಸರ ದಿನಾಚರಣೆ-2016-17
ಸಭಾ ಕಾರ್ಯಕ್ರಮದ ಉದ್ಘಾಟನೆ ಶಾಲಾ ಮುಖ್ಯ ಶಿಕ್ಷಕ ಶ್ಯಾಮ ಭಟ್ ರಿಂದ
ದಿನದ ಮಹತ್ವದ ಕುರಿತಾದ ವಿವರಣೆ ರವಿಕುಮಾರ್ ರಿಂದ
ಧನ್ಯವಾದ ಸಮರ್ಪಣೆ ವಿದ್ಯಾರ್ಥಿನಿ ಕುಮಾರಿ ವಿಂದ್ಯಾ ಕೊಂದಲಕಾಡು ಅವರಿಂದ

ದ್ವಿದಳ ವರ್ಷಾಚರಣೆ ಅಂಗವಾಗಿ ದ್ವಿ ದಳ ಧಾನ್ಯಗಳ ಪ್ರದರ್ಶನ -ವಿವರಣೆ ಪ್ರಸಾದ್ ರೈ ಯವರಿಂದ   


ಚೇವಾರು ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ
ಚೇವಾರು ಶ್ರೀ ಶಾರದಾ ಎ.ಯು.ಪಿ.ಶಾಲೆಯಲ್ಲಿ ವಿಶ್ವ ಪರಿಸರದಿನದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಸಭಾಕಾರ್ಯಕ್ರಮವನ್ನು ಶಾಲಾ ಮುಖ್ಯ ಶಿಕ್ಷಕ ಶ್ಯಾಮ ಭಟ್ ಉದ್ಘಾಟಿಸಿದರು.ಭೂಮಿಯ ಮೇಲಿನ ಜೀವ ಸಂಕುಲದ ಉಳಿವಿಗೆ ಉತ್ತಮ ಪರಿಸರದ ಆವಶ್ಯಕತೆಯಿದೆ.ಮುಂದಿನ ತಲೆಮಾರಿಗಾಗಿ,ಪ್ರಕೃತಿ ಸಂಪತ್ತನ್ನು ಉಳಿಸಿ ಬೆಳೆಸುವ ಮನೋಭಾವವನ್ನು ಎಳವೆಯಲ್ಲಿಯೇ ಬೆಳೆಸಬೇಕೆಂದು ಕರೆ ಕೊಟ್ಟರು. ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ಶಾಲಾ ಶಿಕ್ಷಕಿ ಸರಸ್ವತಿ,ನಮ್ಮ ಪರಿಸರವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದು,ಒಂದು ಮರ ಕಡಿದಲ್ಲಿ ಹತ್ತು ಗಿಡಗಳನ್ನು ನೆಟ್ಟು ಬೆಳೆಸಬೇಕು,ಆಗ ಮಾತ್ರ ಜೀವ ಸಂಕುಲದ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯಪಟ್ಟರು. ವಿನೋದ್ ಚೇವಾರು ಗಿಡಗಳನ್ನು ನೆಟ್ಟು ಬೆಳೆಸುವ ಕುರಿತಾದ ಮಾಹಿತಿ ನೀಡಿದರು.ಶಿಕ್ಷಕಿ ರಾಜೇಶ್ವರಿ ಹಾಗೂ ಪ್ರಸಾದ್ ರೈ ದ್ವಿದಳ ಧಾನ್ಯಗಳ ಕುರಿತು ವಿವರಿಸಿದರು.ರವಿ ಕುಮಾರ್,ಪ್ರಮೀಳಾ,ಪುಷ್ಪಲತಾ ಸಹಕರಿಸಿದರು.ಪರಿಸರ ಕುರಿತಾದ ರಸಪ್ರಶ್ನೆ ಸ್ಪರ್ಧೆ,ಪ್ರಬಂಧ ಮಂಡನೆ,ಪರಿಸರ ಜಾಗೃತಿ ಜಾಥಾ,ಗೀತೆ,ಕಿರು ನಾಟಕ ಮುಂತಾದವುಗಳನ್ನು ಏರ್ಪಡಿಸಲಾಯಿತು..ಮಿಥುನ್ ಸ್ವಾಗತಿಸಿದನು.ವಿಂಧ್ಯಾ ವಂದಿಸಿದಳು.ಜ್ಯೋತಿಕಾ ಕಾರ್ಯಕ್ರಮ ನಿರೂಪಿಸಿದಳು



PRAVESHOTHSAVA-2016-17

2016-17 ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು
ಶಾಲಾ ಮಕ್ಕಳ ಪ್ರವೇಶೋತ್ಸವ-2016-17
ಶಾಲಾ ಪುಟಾಣಿಗಳಿಂದ,ರಕ್ಷಕರಿಂದ,ಶಿಕ್ಷಕರಿಂದ ಮೆರವಣಿಗೆ

ವಾರ್ಡ್ ಸದಸ್ಯರಾದ ಶ್ರೀ ಹರೀಶ್ ಬೊಟ್ಟಾರಿಯವರಿಂದ,ಪ್ರವೇಶೋತ್ಸವದ ಸಭಾ ಕಾರ್ಯಕ್ರಮ ಉದ್ಘಾಟನೆ
ಚೇವಾರು ಶಾರದಾ ಎ.ಯು.ಪಿ.ಶಾಲೆಯಲ್ಲಿ ಪ್ರವೇಶೋತ್ಸವ
 ಚೇವಾರು ಶ್ರೀ ಶಾರದಾ ಎ.ಯು.ಪಿ ಶಾಲೆಯಲ್ಲಿ ,ನೂತನ ಶೈಕ್ಷಣಿಕ ವರ್ಷಕ್ಕೆ ಚಿಣ್ಣರನ್ನು ಸಂಭ್ರಮದಿಂದ ಸ್ವಾಗತಿಸುವ,ಶಾಲಾ ಪ್ರವೇಶೋತ್ಸವವನ್ನು, ,ಪೈವಳಿಕೆ ಪಂಚಾಯತು ಸದಸ್ಯರಾದ ಶ್ರೀ ಹರೀಶ್ ಬೊಟ್ಟಾರಿಯವರು ಉದ್ಘಾಟಿಸಿದರು.ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಇಂದಿರಾ ಮಿತ್ತಡ್ಕ,ಅಧ್ಯಕ್ಷ ಸ್ಥಾನ ವಹಿಸಿದರು.ಶ್ರೀ ಧರ್ಮ ಸ್ಥಳ ಗ್ರಾಮೀಣಾಧಿವೃದ್ಧಿ ಸಂಘದ ಸದಸ್ಯೆ ಜಯಶ್ರೀ ಶುಭ ಹಾರೈಸಿದರು.ರಕ್ಷಕ ಶಿಕ್ಷಕ ಸಂಘದ ಸದಸ್ಯರಾದ ನೂರುದ್ದೀನ್ ಶುಭಾಶಂಸನೆ ಗೈದರು. ನವಾಗತ ವಿದ್ಯಾರ್ಥಿಗಳಿಗೆ ಹರೀಶ್ ಬೊಟ್ಟಾರಿಯವರು ಕೊಡೆಗಳನ್ನು ಹಾಗೂ ಶಾಲಾ ವ್ಯವಸ್ಥಾಪಕ ಶ್ರೀ ನಾರಾಯಣ ಭಟ್,ಬ್ಯಾಗ್ ಗಳನ್ನು ಕೊಡುಗೆಯಾಗಿ ನೀಡಿದರು.ಶಾಲಾ ಮಕ್ಕಳ ರಕ್ಷಕರು,ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಂದ ಶೋಭಾಯಾತ್ರೆ ಜರಗಿತು.ಶಾಲಾ ಮುಖ್ಯ ಶಿಕ್ಷಕ ಶ್ಯಾಮ ಭಟ್ ಸ್ವಾಗತಿಸಿದರು.ಪ್ರಸಾದ್ ರೈ ವಂದಿಸಿದರು. ವಿನೋದ್ ಚೇವಾರ್ ವಂದಿಸಿದರು.

Tuesday, June 7, 2016

SEND OFF

7 ನೇ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ,2015-16



ಸಾಂಸ್ಕೃತಿಕ ಕಾರ್ಯಕ್ರಮ