ಜನವರಿ-15
ರಾಷ್ಟ್ರೀಯ ಭೂ ಸೇನಾ ದಿನ
ರಾಷ್ಟ್ರ ರಕ್ಷಣೆಯೇ ಪರಮಧ್ಯೇಯವನ್ನಾಗಿಸಿಕೊಂಡು ಎಂತಹ ಕಠಿಣ ಪರಿಸ್ಥಿತಿ ಎದುರಾದರೂ
ಸಮರ್ಥವಾಗಿ ಎದುರಿಸಿ,ಎಂತಹ ಸನ್ನಿವೇಶಗಳಲ್ಲೂ ಎದೆಗುಂದದೆ,ದೇಶ ಸೇವೆಯೇ ಈಶ ಸೇವೆ ಎಂದು ನಂಬಿರುವವರು ನಮ್ಮ ಭಾರತದ ಸಶಸ್ತ್ರ
ಪಡೆಗಳು.ಇವುಗಳು ವಿಶ್ವದಲ್ಲೇ ಅಪ್ರತಿಮ.ವಿಶ್ವದಲ್ಲೇ ನಮ್ಮ ದೇಶದ ಭೂ ಸೇನೆಗೆ ವಿಶಿಷ್ಟವಾದ
ಸ್ಥಾನವಿದೆ. ದೇಶ ರಕ್ಷಣೆ ಮತ್ತು ನಾಗರೀಕರ ಜೀವ ರಕ್ಷಣೆ ಮಾಡುವುದರಲ್ಲಿ ಯೋಧರ
ತ್ಯಾಗ,ಶೌರ್ಯ,ಸಾಹಸ,ಬಲಿದಾನ ಅಪೂರ್ವ ವಾದುದು.ಭೂ ಸೇನೆ,ನೌಕಾ ಸೇನೆ ಹಾಗೂ ವಾಯು ಸೇನೆಗಳೆಂಬ
ದಳಗಳು,ನಮ್ಮ ದೇಶವನ್ನು ಹಗಲಿರುಳು ಕಾಯುತ್ತಿವೆ.
1949ರ ಜನವರಿ 15ರಂದು,ಬ್ರಿಟಿಷ್ ಕಮಾಂಜರ್ ಇನ್ ಚೀಫ್ ಜನರಲ್ ರೋಯ್ ಬುಚ್ಚರ್ ಅವರಿಂದ
ಭಾರತದ ಫೀಲ್ಡ್ ಮಾರ್ಷಲ್ ಕೆ.ಯಂ.ಕಾರ್ಯಪ್ಪರಿಗೆ ಅಧಿಕಾರ ಹಸ್ತಾಂತರವಾಯಿತು.ಆದ್ದರಿಂದ ಪ್ರತಿ
ವರ್ಷ ಜನವರಿ 15ರಂದು ರಾಷ್ಟ್ರೀಯ ಭೂ ಸೇನಾ ದಿನವನ್ನಾಗಿ
ಆಚರಿಸಲಾಗುತ್ತಿದೆ.
ಅನೇಕ ಯೋಧರು ಮನೆ,ಬಂಧುಗಳಿಂದ ದೂರವಿದ್ದು ಚಳಿ,ಮಳೆ,ಬಿಸಿಲುಗಳನ್ನು ಲೆಕ್ಕಿಸದೆ,ದೇಶದ
ರಕ್ಷಣೆಗಾಗಿ ಭೂ ಸೇನೆಯಲ್ಲಿ ದುಡಿಯುತ್ತಿದ್ದಾರೆ. ಯೋಧರನ್ನು ಗೌರವಿಸೋಣ.
No comments:
Post a Comment