ಜನವರಿ 11 ಲಾಲ್ ಬಹದ್ದೂರ್ ಶಾಸ್ತ್ರಿ ಸಂಸ್ಮರಣಾ ದಿನ
ನಮ್ಮ ಭವ್ಯ ಭಾರತವು ಲಕ್ಷಾಂತರ ದೇಶಭಕ್ತರನ್ನು ನೀಡಿದ ಪುಣ್ಯ ಭೂಮಿ.ದೇಶದ ಹಿತಕ್ಕಾಗಿ
ಹಗಲಿರುಳು ಪ್ರಾಮಾಣಿಕವಾಗಿ ಶ್ರಮಿಸಿದವರಲ್ಲಿ ಒಬ್ಬರು ಭಾರತ ದೇಶದ ದ್ವಿತೀಯ ಪ್ರಧಾನಿ,ಸ್ವಾರ್ಥ
ರಾಷ್ಟ್ರ ಸೇವಕ,ಸರಳ,ಸಜ್ಜನಿಕೆಯ ಮೂರ್ತ ಸ್ವರೂಪ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರು
ಒಬ್ಬರು.
ಲಾಲ್ ಬಹದ್ದೂರ್ ಶಾಸ್ತ್ರಿಯವರು 1904ರ ಅಕ್ಟೋಬರ್-2ರಂದು ಉತ್ತರ ಪ್ರದೇಶದ ವಾರಣಾಸಿಯ
ಸಮೀಪದ ಮೊಘಲ್ ಸರಾಯ್ ನಲ್ಲಿ ಜನಿಸಿದರು.ತಂದೆ ಶಾರದಾ
ಪ್ರಸಾದ್,ತಾಯಿ ರಾಮ್ ದುಲಾರಿ ದೇವಿ.1915ರಲ್ಲಿ ಗಾಂಧೀಜಿಯವರ ಅಸಹಕಾರ ಚಳವಳಿಯಲ್ಲಿ
ಭಾಗದವಹಿಸಿದರು.
ಸ್ವತಂತ್ರ ಭಾರತದಲ್ಲಿ ,ಮೊದಲು ಸಾರಿಗೆ ಸಚಿವರಾಗಿ,1961 ರಲ್ಲಿ ಗೃಹ ಮಂತ್ರಿಯಾದರು.,1964ರ
ಜೂನ್ 9ರಂದು ಪ್ರಧಾನಿಯಾದರು. ಜೈ ಜವಾನ್ ಜೈ ಕಿಸಾನ್ ಎಂಬುದು ಅವರ ಘೋಷಣಾ ವಾಕ್ಯ.
No comments:
Post a Comment