ಜನವರಿ 25,ರಾಷ್ಟ್ರೀಯ ಮತದಾರರ ದಿನ
ಭಾರತವು ಪ್ರಜಾ ಪ್ರಭುತ್ವ ವ್ಯವಸ್ಥೆಯನ್ನು ಹೊಂದಿದ ದೊಡ್ಡ ರಾಷ್ಟ್ರವಾಗಿದೆ.ಜನರಿಂದಲೇ
ಜನರಿಗಾಗಿ ಜನರೇ ಆಡಳಿತ ವ್ಯವಸ್ಥೆಯನ್ನು ರೂಪಿಸಿರುವುದು ಇದರ ವೈಶಿಷ್ಠ್ಯವಾಗಿದೆ.ಮತದಾನದ ಮೂಲಕ
ನಮ್ಮ ಪ್ರತಿನಿಧಿಗಳನ್ನು ಆರಿಸುವುದು.ಇದಕ್ಕಾಗಿ ಭಾರತೀಯ ಚುನಾವಣಾ ಆಯೋಗವೆಂಬ ಬೃಹತ್ ವ್ಯವಸ್ಥೆ
ಇದೆ.ಈ ಆಯೋಗದ ಸಂಸ್ಥಾಪನಾ ದಿನವಾದ ಜನವರಿ 25 ನ್ನು ರಾಷ್ಟ್ರೀಯ ಮತದಾರರ ದಿನವನ್ನಾಗಿ
ದೇಶಾದ್ಯಂತ ಆಚರಿಸಲಾಗುತ್ತಿದೆ.18 ವರ್ಷ ಪೂರ್ತಿಗೊಂಡ ನಾಗರೀಕರು ಮತದಾರರ ಪಟ್ಟಿಯಲ್ಲಿ ಹೆಸರು
ಸೇರ್ಪಡೆ ಮಾಡಿಸಲು ಅರ್ಹರಾಗಿರುತ್ತಾರೆ.
ಮತದಾರರ ಪ್ರತಿಜ್ಞಾ ವಿಧಿ
ಪ್ರಜಾ ಪ್ರಭುತ್ವದಲ್ಲಿ ದೃಢ ವಿಶ್ವಾಸವುಳ್ಳ ಭಾರತದ ಪೌರರಾದ ನಾವು,ನಮ್ಮ ದೇಶದ ಪ್ರಜಾ
ಸತ್ತಾತ್ಮಕ ಸಂಪ್ರದಾಯಗಳು,ಮುಕ್ತ,ನ್ಯಾಯ ಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು
ಎತ್ತಿ ಹಿಡಿಯುತ್ತೇವೆಂದು ಮತ್ತು ಪ್ರತಿಯಂದು ಚುನಾವಣೆಯಲ್ಲಿ ನಿರ್ಭೀತರೀಗಿ
ಧರ್ಮ,ಜನಾಂಗ,ಜಾತಿ,ಮತ ಭಾಷೆ ಅಥವಾ ಯಾವುದೇ ಪ್ರೇರಣೆಗಳ ದಾಕ್ಷೀಣ್ಯ.ಗಳಿಂದ ಪ್ರಭಾವಿತರಾಗದೇ ಮತ
ಚಲಾಯಿಸುತ್ತೇವೆಯಂದು ಈ ಮೂಲಕಪ್ರತಿಜ್ಞೆ ಸ್ವೀಕರಿಸುತ್ತೇವೆ.
No comments:
Post a Comment