ಚೇವಾರಿನಲ್ಲಿ ಗಾಂಧೀ ಜಯಂತಿ ಆಚರಣೆ
ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಾಂಧೀ ಜಯಂತಿಯನ್ನು ವಿವಿಧ
ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.ಕಾರ್ಯಕ್ರಮವನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಇಂದಿರಾ
ಮಿತ್ತಡ್ಕ ದೀಪ ಬೆಳಗಿಸಿ ಉದ್ಘಾಟಿಸಿದರು.ಸತ್ಯ,ಶಾಂತಿ,ಅಹಿಂಸೆಯನ್ನು ಅಸ್ತ್ರವಾಗಿಸಿಕೊಂಡು ಹೋರಾಡಿ
ರಾಷ್ಟ್ರಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಅವರ ಜೀವನವೇ ನಮಗೆ ಆದರ್ಶವೆಂದು ಅಭಿಪ್ರಾಯ ಪಟ್ಟರು.ಅಧ್ಯಕ್ಷ
ಸ್ಥಾನ ವಹಿಸಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕ ಶ್ಯಾಮ
ಭಟ್,ಪ್ರಾಮಾಣಿಕತೆ,ನೈತಿಕತೆ,ಸರಳತೆ,ದೇಶಾಭಿಮಾನವನ್ನು ಎಳವೆಯಲ್ಲಿಯೇ ಮೈಗೂಡಿಸಬೇಕೆಂದು ಕರೆ
ಕೊಟ್ಟರು.ಸ್ಟಾಪ್ ಕಾರ್ಯದರ್ಶಿ ವಿನೋದ್ ಶುಭ ಹಾರೈಸಿದರು.ಗಾಂಧೀಜಿಯವರ ಭಾವ ಚಿತ್ರಕ್ಕೆ
ಪುಷ್ಪಾರ್ಚನೆ ಮಾಡಿ, ಸರ್ವ ಧರ್ಮ ಪ್ರಾರ್ಥನೆಯನ್ನು ನೆರವೇರಿಸಲಾಯಿತು.ಸೇವನಾ ವಾರಕ್ಕೆ ಚಾಲನೆ
ನೀಡಲಾಯಿತು.ವಿದ್ಯಾರ್ಥಿಗಳಿಂದ ಪ್ರಬಂಧ ಮಂಡನೆ,ರಸಪ್ರಶ್ನೆ ಜರಗಿತು.ಸರಸ್ವತಿ
ಸ್ವಾಗತಿಸಿದರು.ರವಿಕುಮಾರ್ ವಂದಿಸಿದರು.ರಾಜೇಶ್ವರಿ ಕಾರ್ಯಕ್ರಮ
ನಿರೂಪಿಸಿದರು.ಪ್ರಸಾದ್,ಪ್ರಮೀಳಾ,ಪುಷ್ಪಲತಾ,ಗೋಪಾಲ ಕೃಷ್ಣ ಭಟ್,ಕವಿತಾ ಸಹಕರಿಸಿದರು.
No comments:
Post a Comment