ಅಕ್ಟೋಬರ್
10,ಡಾ.ಶಿವರಾಮ ಕಾರಂತ ಜನ್ಮ ದಿನ
|
ಕೋಟ ಶಿವರಾಮ ಕಾರಂತರು ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರು.1902ರ ಅಕ್ಟೋಬರ್ 10ರಂದು ಉಡುಪಿ
ಜಿಲ್ಲೆಯಲ್ಲಿ,ಶಿವರಾಮ ಕಾರಂತರು ಜನಿಸಿದರು.ಕಾಲೇಜು ಶಿಕ್ಷಣದ ಸಮಯದಲ್ಲಿ,ಮಹಾತ್ಮಾ ಗಾಂಧೀಜಿಯವರ
ಕರೆಗೆ ಓಗೊಟ್ಟು,ಬ್ರಿಟಿಷರ ವಿರುದ್ಧ ಹೋರಾಡಿದರು.ಅಸಹಕಾರ ಚಳವಳಿ,ಖಾದಿ ಮತ್ತು ಸ್ವದೇಶಿ
ವಸ್ತುಗಳ ಬಳಕೆಗೆ ಕರೆಯಿತ್ತರು.ಆಗಲೇ ಸಾಹಿತ್ಯ ಕೃಷಿ ಆರಂಭಿಸಿದ್ದರು.
ಮೂಕಜ್ಜಿಯ ಕನಸು,ಮರಳಿ ಮಣ್ಣಿಗೆ,ಬೆಟ್ಟದ ಜೀವ,ಅಳಿದ ಮೇಲೆ,ಸ್ವಪ್ನದ ಹೊಳೆ,ಸರಸಮ್ಮನ ಸಮಾಧಿ
ಮುಂತಾದ ಅನೇಕ ಕೃತಿಗಳನ್ನು ರಚಿಸಿದರು.ಯಕ್ಷ ಗಾನ ನಾಟಕಗಳಲ್ಲಿ ಭಾಗವಹಿಸಿದರು.95ರ ಇಳಿ
ವಯಸ್ಸಿನಲ್ಲೂ ಪಕ್ಷಿಗಳ ಕುರಿತು ಸಂಶೋಧನೆ ಮಾಡಿ ಬರೆದರು.
ನಾಡು ಮೆಚ್ಚಿದ ಬುದ್ಧಿ ಜೀವಿ,ನಡೆದಾಡುವ ವಿಶ್ವಕೋಶ,ಜ್ಞಾನ ಪೀಠ ಪ್ರಶಸ್ತಿ ವಿಜೇತ ಡಾಕ್ಟರ್
ಶಿವರಾಮ ಕಾರಂತರ ಜೀವನ ನಮಗೆ ದಾರಿ ದೀಪವಾಗಿದೆ.
No comments:
Post a Comment