Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Wednesday, October 14, 2015

WORLD HAND WASHING DAY



ಅಕ್ಟೋಬರ್ ೧೫ ವಿಶ್ವ ಕೈ ತೊಳೆಯುವ ದಿನ




   ಉತ್ತಮ ಆರೋಗ್ಯ ಮತ್ತು ನೈರ್ಮಲ್ಯಕ್ಕಾಗಿ ಕೈ ಎತ್ತುವ ಎಂಬ ಘೋಷಣಾ ವಾಕ್ಯದೊಂದಿಗೆ ವರ್ಷ, ಅಕ್ಟೋಬರ್ ೧೫ ನ್ನು ವಿಶ್ವ ಕೈ ತೊಳೆಯುವ ದಿನವನ್ನಾಗಿ ಆಚರಿಸಲಾಗುತ್ತಿದೆ.ಆರೋಗ್ಯವೇ ಭಾಗ್ಯ ಎಂಬ ನುಡಿಯಂತೆ ಆರೋಗ್ಯಕ್ಕಿಂತ ಮಿಗಿಲಾದ ಸಂಪತ್ತು ಬೇರೊಂದಿಲ್ಲ.ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ.ಉತ್ತಮವಾದ ಆರೋಗ್ಯವನ್ನು ಕಾಪಾಡಲು,ಆರೋಗ್ಯ ಕ್ರಮಗಳನ್ನು ಅನುಸರಿಸಬೇಕಾದುದು ಅತೀ ಅಗತ್ಯವಾಗಿದೆ.ನಮ್ಮ ಪರಿಸರದಲ್ಲಿರುವ ರೋಗಾಣುಗಳಿಂದ ನಮ್ಮ ಶರೀರವನ್ನು ರಕ್ಷಿಸಲು,ನಮ್ಮ ಶರೀರವನ್ನು ಶುಭ್ರವಾಗಿ ಇಟ್ಟುಕೊಳ್ಳಬೇಕಾದುದು ಮುಖ್ಯ.ಆಹಾರವನ್ನು ಸೇವಿಸುವ ಮೊದಲು ಕೈಗಳನ್ನು ಸ್ವಚ್ಛವಾಗಿಡಬೇಕಾದುದು ಅತೀ ಆವಶ್ಯಕವಾಗಿದೆ.ಕೈಗಳ ಮೂಲಕ ನಾವು ಅನೇಕ ಕೆಲಸಗಳನ್ನು ಮಾಡುವುದರಿಂದ ಮಲಿನವಾಗುವ ಸಾಧ್ಯತೆಗಳು ಹೆಚ್ಚಾದ್ದರಿಂದ ಮಲಿನ ಕೈಗಳ ಮೂಲಕ ಆಹಾರಸೇವಿಸಿದಲ್ಲಿ,ರೋಗಾಣುಗಳು ಸುಲಭವಾಗಿ ಶರೀರವನ್ನು ಸೇರಿ ಅನಾರೋಗ್ಯಕ್ಕೆ ಕಾರಣವಾಗಬಹುದು. ನಿಟ್ಟಿನಲ್ಲಿ ಎಲ್ಲರಲ್ಲೂ ಜಾಗೃತಿಯನ್ನು ಮೂಡಿಸಲು ಕೈ ತೊಳೆಯುವ ದಿನ ವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ.

No comments:

Post a Comment