Thursday, November 6, 2014
C.V.RAMAN BIRTH DAY CELEBRATION.
ನವೆಂಬರ್ 7: ಸಿ.ವಿ.ರಾಮನ್ ಜನ್ಮ ದಿನ
ವಿಜ್ಞಾನ ಲೋಕದ ‘ಮಹಾ ಬೆಳಕು’
ಸರ್ ಸಿ.ವಿ.ರಾಮನ್ ಭಾರತದಲ್ಲಷ್ಟೇ ಅಲ್ಲದೆ ಇಡೀ ಏಷ್ಯಾದಲ್ಲಿ ಮೊತ್ತ ಮೊದಲಿಗೆ ಭೌತ ವಿಜ್ಞಾನದಲ್ಲಿ ನೋಬೆಲ್ ಪುರಸ್ಕಾರ ಪಡೆದು ಭಾರತದ ಕೀರ್ತಿಯನ್ನು ಪ್ರಪಂಚದ ಉದ್ದಗಲಕ್ಕೂ ಬೆಳಗಿದ ಪ್ರಚಂಡ ಪ್ರತಿಭೆಯ ಸರ್ ಸಿ.ವಿ.ರಾಮನ್ ಅವರು ಹುಟ್ಟಿದ್ದು ತಮಿಳುನಾಡಿನ ತಂಜಾವೂರು ಜಿಲ್ಲೆಯ ತಿರುಚಿರಾಪಲ್ಲಿ ಸಮೀಪದ ಅಯ್ಯನ ಪಟ್ಟಿ ಗ್ರಾಮದಲ್ಲಿ 1888ರ ನವೆಂಬರ್ 7ರಂದು.ತಂದೆ ಚಂದ್ರಶೇಖರ ಅಯ್ಯರ್.ವೃತ್ತಿಯಲ್ಲಿ ಭೌತ ಶಾಸ್ತ್ರ ಪ್ರಾಧ್ಯಾಪಕರು.ತಾಯಿ ಪಾರ್ವತಿ ಅಮ್ಮಾಳ್. 1928ನೇ ಇಸವಿಯು ಭಾರತವು ವಿಜ್ಞಾನ ಇತಿಹಾಸದ ಹೆದ್ದಾರಿಯಲ್ಲಿ ಮಹತ್ವದ ಮೈಲುಗಲ್ಲು ಸ್ಥಾಪಿಸಿದ ವಿಶಿಷ್ಟ ವರ್ಷ. ವಿಜ್ಞಾನ ಕ್ಷೇತ್ರದ ಸುವರ್ಣ ಕಾಲ.ಆ ವರ್ಷ ಫೆಬ್ರವರಿ 28 ರಂದು ಬೆಂಗಳೂರಿನ ಭೌತ ಶಾಸ್ತ್ರ ಸಂಘದವರು ಏರ್ಪಿಸಿದ ಕಾರ್ಯಕ್ರಮದಲ್ಲಿ ರಾಮನ್ನರು ಬೆಳಕಿನ ಕುರಿತು ತಮ್ಮದೇ ಆವಿಷ್ಕಾರದ ಹೊಸ ಸಿದ್ಧಾಂತವನ್ನು ಪ್ರತಿಪಾದಿಸಿದರು.ಇದೇ ಸಿದ್ಧಾಂತ ಮುಂದೆ ರಾಮನ್ ಪರಿಣಾಮ ಎಂದು ಜಗತ್ಪ್ರಸಿದ್ಧವಾಯಿತು.ಈ ಆವಿಷ್ಕಾರದ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ. ಹಡಗಿನಲ್ಲಿ ಪ್ರಯಾಣ ಮ ಡುತ್ತಿದ್ದ ವೇಳೆ ಅವರು ಸಮುದ್ರದ ನೀರನ್ನೇ ಗಮನಿಸುತ್ತಾ ಅದರ ಬಣ್ಣ ನೀಲಿಯಾಗಿರುವುದೇಕೆ,ಎಂದು ಚಿಂತಿಸಿದರು.ಸೂರ್ಯನ ರಶ್ಮಿಯ ಬೆಳಕು ನೀರಿನಲ್ಲಿ ಹರಡಿ ಹೋಗಿರುವುದೇ ಕಾರಣ ಎಂದು ಕಂಡು ಹಿಡಿದರು. ಈ ವಿಷಯವನ್ನು ಆಳವಾಗಿ ಚಿಂತಿಸಿ’,ದಿ ಕಲರ್ ಆಫ್ ದ ಸೀ’ ಎಂಬ ಪ್ರಬಂಧವನ್ನು ಬರೆದು ನೇಚರ್ ಪತ್ರಿಕೆಗೆ ಕೆಳುಹಿಸಿದರು
KASARAGOD
ಸಂಪೂರ್ಣ ಬ್ಲಾಗ್ ಆಧಾರಿತ ರಾಜ್ಯದ ಮೊದಲ
ಜಿಲ್ಲೆಯಾಗಿ ಕಾಸರಗೋಡು
ಕಾಸರಗೋಡು ಜಿಲ್ಲೆಯ ವಿದ್ಯಾಲಯಗಳನ್ನು,ಶಿಕ್ಷಣ
ಇಲಾಖೆಗಳನ್ನು ಪರಸ್ಪರ ಸಂಪರ್ಕಿಸುವ ರಾಜ್ಯದ ಮೊತ್ತ ಮೊದಲ ಬ್ಲಾಗ್ ವ್ಯ.ವಸ್ಥೆಯು ನಮ್ಮ
ಜಿಲ್ಲೆಯಲ್ಲಿ ಸಿದ್ಧಗೊಂಡಿದೆ.6-11-2014ರಂದು ಕಾಸರಗೋಡ್ ಮುನ್ಸಿಪಲ್ ಸಭಾಂಗಣದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ
, ಕಾಸರಗೋಡನ್ನು, ಸಂಪೂರ್ಣ ಬ್ಲಾಗ್ ಆಧಾರಿತ ರಾಜ್ಯದ ಮೊದಲ ಜಿಲ್ಲೆಯಾಗಿ ಘೋಷಿಸಲಾಯಿತು.ಜಿಲ್ಲೆಯ
559 ಶಿಕ್ಷಣ ಸಂಸ್ಥೆಗಳು,21 ಶಿಕ್ಷಣಇಲಾಖೆಗಳು,3 ಶಿಕ್ಷಕ ತರಬೇತಿ ಕೇಂದ್ರಗಳಿಗೆ ಸಂಪರ್ಕ
ಗೊಳಿಸಲಾಗಿದೆ.
AWARD FOR SCHOOL BLOG
ಶಾಲಾ ಬ್ಲಾಗಿಗೆ ಬಹುಮಾನ
ಕಂಪ್ಯೂಟರ್ ಸಂವಹನ ಕ್ಷೇತ್ರದಲ್ಲಿ ಮಹಾ ಕ್ರಾಂತಿಯನ್ನು ಉಂಟುಮಾಡಿದೆ. ಕಂಪ್ಯೂಟರ್ ಗೆ ಟೆಲಿ
ಫೋನ್ ಸಂಪರ್ಕ ಉಂಟಾಗಿದ್ದರಿಂದ ಜಗತ್ತಿನ ಕಂಪ್ಯೂಟರ್ ಗಳು ಪರಸ್ಪರ ಜೋಡಿಸಲ್ಪಟ್ಟಿವೆ.ಇದನ್ನು
ಇಂಟರ್ ನೆಟ್ ಎನ್ನುವರು.ಇದರಿಂದಾಗಿ ಇಂದು ಜಗತ್ತು ಕಿರಿದಾಗಿದೆ.
ಶೈಕ್ಷಣಿಕ ಕ್ಷೇತ್ರದಲ್ಲಿ ಈ ತಾಂತ್ರಿಕತೆಯನ್ನು ಸಮರ್ಪಕ ರೀತಿಯಲ್ಲಿ ಬಳಸಿದಲ್ಲಿ,ಅದು
ಎಲ್ಲರಿಗೂ ಪ್ರಯೋಜನಕಾರಿ,ಎಂದು ಅರಿತ ಕಾಸರಗೋಡಿನ ಶಿಕ್ಷಣ ಇಲಾಖೆಯು,ಬ್ಲೆಂಡ್(Blog for Dynamic
Educational Network) ಎಂಬ ಯೋಜನೆಯೊಂದಿಗೆ ಈ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಕಾರ್ಯಗತಗೊಳಿಸಿತು.
2014ರ ಜುಲೈ 5ರಂದು ಆರಂಭವಾದ ನಮ್ಮ ಶಾಲಾ ಬ್ಲಾಗ್,ಸೆಪ್ಟೆಂಬರ್ ನಲ್ಲಿ,ರಕ್ಷಕ-ಶಿಕ್ಷಕರ
ಸಮ್ಮುಖದಲ್ಲಿ ವಾರ್ಡ್ ಮೆಂಬರ್ ರವರು ಔಪಚಾರಿಕವಾಗಿ ಉದ್ಘಾಟಿಸಿದರು. ಶಾಲೆಯಲ್ಲಿ ಜರಗುತ್ತಿರುವ
ಪ್ರಮುಖ ಕಾರ್ಯಕ್ರಮಗಳ,ಚಟುಟವಟಿಕೆಗಳ ಚಿತ್ರ ಸಹಿತ ವಿವರಣೆ,ವಿದ್ಯಾರ್ಥಿಗಳು ರಚಿಸಿದ ಉತ್ಪನ್ನಗಳ
ಪರಿಚಯವನ್ನು,ಸಮಾಜಕ್ಕೆ ತಿಳಿಸಲು ಬ್ಲಾಗ್ ಒಂದು ವೇದಿಕೆಯಾಗಿದೆ.
ಮಂಜೇಶ್ವರ ಉಪಜಿಲ್ಲಾ ಮಟ್ಟದ ಯು.ಪಿ. ಶಾಲಾ ಬ್ಲಾಗ್ ಗಳ
ಮೌಲ್ಯಮಾಪನದಲ್ಲಿ ನಮ್ಮ ಶಾಲಾ ಬ್ಲಾಗ್ ಉತ್ತಮವಾಗಿದ್ದು ದ್ವಿತೀಯ ಸ್ಥಾನ ಪಡೆದು ಜನ ಮನ್ನಣೆ
ಗಳಿಸಿರುವುದು ಸಂತೋಷದ ವಿಷಯ.ಇದಕ್ಕೆ ಸಹಕರಿಸಿದ ಎಲ್ಲರಿಗೂ ವಂದನೆಗಳು.ಮುಂದೆಯೂ ಎಲ್ಲರ
ಸಹಕಾರವನ್ನು ಕೋರುವ
. BLOG
TEAM OF S S A U P S CHEVAR
Wednesday, November 5, 2014
ನವೆಂಬರ್: 6
ನವೆಂಬರ್: 6 ಯುಧ್ಧ ಹಾಗೂ ಶಸ್ತ್ರಾಸ್ತ್ರ ದಂಗೆಯು
ಉಂಟುಮಾಡುವ ಪರಿಸರ ವಿನಾಶವನ್ನು ಪ್ರತಿಭಟಿಸುವ ದಿನ
ರಾಮಾಯಣ,ಮಹಾಭಾರತ ಕಾಲದಿಂದಲೇ ಮಣ್ಣು,ಹೊನ್ನು,ಸಂಪತ್ತಿಗಾಗಿ ಯುದ್ಧಗಳು ನಡೆದಿವೆ ಎಂದು
ನಾವು ತಿಳಿದಿದ್ದೇವೆ. ಚರಿತ್ರೆಯಲ್ಲೂ ಸಾಕಷ್ಟು ಯುದ್ಧಗಳು ನಡೆದು ಅಪಾರ ಹಾನಿ ಸಾವು,ನೋವು
ಉಂಟಾಗಿದೆ.ಯುದ್ಧ ಉಂಟಾಗಲು ಪ್ರಧಾನ ಕಾರಣ ಮಾನವನ ಮನಸ್ಸಿನಲ್ಲಿ ಉಂಟಾಗುವ ಅತ್ಯಾಸೆ,
ಮೋಹ,ಅಹಂಕಾರ.ಮಾತ್ಸರ್ಯ.
ಯುದ್ಧಗಳಲ್ಲಿ ಬಳಸುವ ಬಾಂಬ್ ಗಳಿಂದ ಪರಿಸರ ಹಾನಿ ಉಂಟಾಗುವುದಲ್ಲಲದೆ,ಬೆಲೆ
ಏರಿಕೆ,ನಿರುದ್ಯೋಗ,ಆರೋಗ್ಯ ಸಮಸ್ಯೆ,ಬಡತನ ಇತ್ಯಾದಿ ಭೀಕರ ಸಮಸ್ಯೆಗಳು ಉಂಟಾಗುತ್ತದೆ.ಇಂತಹ
ಯುದ್ಧಗಳು ನಮಗೆ ಬೇಕೇ, ಯುದ್ಧವನ್ನು ವಿರೋಧಿಸೋಣ,ಪ್ರಕೃತಿಯನ್ನು ರಕ್ಷಿಸೋಣ
ಗುರು ನಾನಕ್
ಗುರು
ನಾನಕ್ ಜಯಂತಿ
ಸಿಖ್ ಧರ್ಮ ಸ್ಥಾಪಕರಾದ ಗುರು ನಾನಕ್ ತಲವಂಡಿ
ಎಂಬ ಹಳ್ಳಿಯಲ್ಲಿ ಮಹ್ತಾಕಾಲೂ ಚಂದ್ ಮತ್ತು ತೃಪ್ತಾ ದೇವೀ ದಂಪತಿಗಳ ಮಗನಾಗಿ 1469ರಲ್ಲಿ
ಜನಿಸಿದರು.ಬಾಲ್ಯದಿಂದಲೇ ದೇವರು,ಧರ್ಮ ಆಧ್ಯಾತ್ಮಗಳಲ್ಲಿ ಆಸಕ್ತಿ ವಹಿಸಿದ್ದರು.ಪಂಜಾಬೀ,ಹಿಂದಿ,ಪರ್ಷಿಯನ್,ಸಂಸ್ಕೃತ
ಭಾಷೆಗಳನವ್ನು ಬಲ್ಲವರಾಗಿದ್ದರು.ಜೀವನದಲ್ಲಿ ವೈರಾಗ್ಯ ತಾಳಿ ಮನೆ ಬಿಟ್ಟು ತೆರಳಿದರು.ಹಿಂದೂ
ಮುಸಲ್ಮಾನರ ಐಕ್ಯತೆಯನ್ನು ಪ್ರತಿಪಾದಿಸಿದರು.ಹಿಂದೂಮತ್ತು ಇಸ್ಲಾಮ್ ಧರ್ಮ್ ಗಳಲ್ಲಿರುವ ಉನ್ನತ
ಮೌಲ್ಯಗಳನ್ನು ಹೊಂದಿರುವ ಹೊಸ ಧರ್ಮವೊಂದನ್ನು ಸ್ಥಾಪಿಸಿದರು.ಅದುವೇ ‘ಸಿಖ್ ಧರ್ಮ’.’ಸಿಖ್’ ಎಂದರೆ ಶಿಷ್ಯ.ನಾನಕರು ರಚಿಸಿದ ಕವಿತೆಗಳನ್ನು’ಜಪಜೀ’ ಎಂದು ಕರೆಯುತ್ತಾರೆ.
ಕ್ಷಮೆಯೇ ನನ್ನ ತಾಯಿ,ಸಂತೋಷವೇ ನನ್ನ
ತಂದೆ,ಸತ್ಯ ನಿಷ್ಠೆ ನನ್ನ ಬಂಧುಗಳು ಎಂದು ನಂಬಿದ್ದರು.
WORLD KINDNESS DAY
ನವೆಂಬರ್
೫ ವಿಶ್ವ ಕಾರುಣ್ಯ
ದಿನ
ಕರುಣೆ
ತುಂಬಿದ ಹೃದಯ,ದೇವ
ಮಂದಿರ ಎಬ
ಮಾತಿದೆ.ಕರುಣೆ
ಉಳ್ಳವರ
ವ್ಯಕ್ತಿತ್ವಸುಂದರವಾಗಿರುತ್ತದೆ.ಕಷ್ಟದಲ್ಲಿರುವವರಿಗೆ,ಅಸಹಾಯಕರಿಗೆ,ಬಡಬಗ್ಗರಿಗೆ,ನಾವು
ಕರುಣೆ ತೋರಿಸುವುದರೊಂದಿಗೆ,ಅವರಿಗೆ
ಧೈರ್ಯ ತುಂಬಿ,ಸಹಾಯ
ಮಾಡಬೇಕಾದುದು ನಮ್ಮ ಕರ್ತವ್ಯ
ವಾಗಲಿ.ವಿದ್ಯಾರ್ಥಿ
ಜೀವನದಲ್ಲೇ ಉತ್ತಮ ಅಭ್ಯಾಸಗಳನ್ನು
ಬೆಳೆಸೋಣ.
Subscribe to:
Posts (Atom)


