ನವೆಂಬರ್: 6 ಯುಧ್ಧ ಹಾಗೂ ಶಸ್ತ್ರಾಸ್ತ್ರ ದಂಗೆಯು
ಉಂಟುಮಾಡುವ ಪರಿಸರ ವಿನಾಶವನ್ನು ಪ್ರತಿಭಟಿಸುವ ದಿನ
ರಾಮಾಯಣ,ಮಹಾಭಾರತ ಕಾಲದಿಂದಲೇ ಮಣ್ಣು,ಹೊನ್ನು,ಸಂಪತ್ತಿಗಾಗಿ ಯುದ್ಧಗಳು ನಡೆದಿವೆ ಎಂದು
ನಾವು ತಿಳಿದಿದ್ದೇವೆ. ಚರಿತ್ರೆಯಲ್ಲೂ ಸಾಕಷ್ಟು ಯುದ್ಧಗಳು ನಡೆದು ಅಪಾರ ಹಾನಿ ಸಾವು,ನೋವು
ಉಂಟಾಗಿದೆ.ಯುದ್ಧ ಉಂಟಾಗಲು ಪ್ರಧಾನ ಕಾರಣ ಮಾನವನ ಮನಸ್ಸಿನಲ್ಲಿ ಉಂಟಾಗುವ ಅತ್ಯಾಸೆ,
ಮೋಹ,ಅಹಂಕಾರ.ಮಾತ್ಸರ್ಯ.
ಯುದ್ಧಗಳಲ್ಲಿ ಬಳಸುವ ಬಾಂಬ್ ಗಳಿಂದ ಪರಿಸರ ಹಾನಿ ಉಂಟಾಗುವುದಲ್ಲಲದೆ,ಬೆಲೆ
ಏರಿಕೆ,ನಿರುದ್ಯೋಗ,ಆರೋಗ್ಯ ಸಮಸ್ಯೆ,ಬಡತನ ಇತ್ಯಾದಿ ಭೀಕರ ಸಮಸ್ಯೆಗಳು ಉಂಟಾಗುತ್ತದೆ.ಇಂತಹ
ಯುದ್ಧಗಳು ನಮಗೆ ಬೇಕೇ, ಯುದ್ಧವನ್ನು ವಿರೋಧಿಸೋಣ,ಪ್ರಕೃತಿಯನ್ನು ರಕ್ಷಿಸೋಣ
No comments:
Post a Comment