Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Thursday, November 6, 2014

AWARD FOR SCHOOL BLOG


ಶಾಲಾ ಬ್ಲಾಗಿಗೆ ಬಹುಮಾನ

ಕಂಪ್ಯೂಟರ್ ಸಂವಹನ ಕ್ಷೇತ್ರದಲ್ಲಿ ಮಹಾ ಕ್ರಾಂತಿಯನ್ನು ಉಂಟುಮಾಡಿದೆ. ಕಂಪ್ಯೂಟರ್ ಗೆ ಟೆಲಿ ಫೋನ್ ಸಂಪರ್ಕ ಉಂಟಾಗಿದ್ದರಿಂದ ಜಗತ್ತಿನ ಕಂಪ್ಯೂಟರ್ ಗಳು ಪರಸ್ಪರ ಜೋಡಿಸಲ್ಪಟ್ಟಿವೆ.ಇದನ್ನು ಇಂಟರ್ ನೆಟ್ ಎನ್ನುವರು.ಇದರಿಂದಾಗಿ ಇಂದು ಜಗತ್ತು ಕಿರಿದಾಗಿದೆ.
ಶೈಕ್ಷಣಿಕ ಕ್ಷೇತ್ರದಲ್ಲಿ ಈ ತಾಂತ್ರಿಕತೆಯನ್ನು ಸಮರ್ಪಕ ರೀತಿಯಲ್ಲಿ ಬಳಸಿದಲ್ಲಿ,ಅದು ಎಲ್ಲರಿಗೂ ಪ್ರಯೋಜನಕಾರಿ,ಎಂದು ಅರಿತ ಕಾಸರಗೋಡಿನ ಶಿಕ್ಷಣ ಇಲಾಖೆಯು,ಬ್ಲೆಂಡ್(Blog for Dynamic Educational Network) ಎಂಬ ಯೋಜನೆಯೊಂದಿಗೆ ಈ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಕಾರ್ಯಗತಗೊಳಿಸಿತು.
2014ರ ಜುಲೈ 5ರಂದು ಆರಂಭವಾದ ನಮ್ಮ ಶಾಲಾ ಬ್ಲಾಗ್,ಸೆಪ್ಟೆಂಬರ್ ನಲ್ಲಿ,ರಕ್ಷಕ-ಶಿಕ್ಷಕರ ಸಮ್ಮುಖದಲ್ಲಿ ವಾರ್ಡ್ ಮೆಂಬರ್ ರವರು ಔಪಚಾರಿಕವಾಗಿ ಉದ್ಘಾಟಿಸಿದರು. ಶಾಲೆಯಲ್ಲಿ ಜರಗುತ್ತಿರುವ ಪ್ರಮುಖ ಕಾರ್ಯಕ್ರಮಗಳ,ಚಟುಟವಟಿಕೆಗಳ ಚಿತ್ರ ಸಹಿತ ವಿವರಣೆ,ವಿದ್ಯಾರ್ಥಿಗಳು ರಚಿಸಿದ ಉತ್ಪನ್ನಗಳ ಪರಿಚಯವನ್ನು,ಸಮಾಜಕ್ಕೆ ತಿಳಿಸಲು ಬ್ಲಾಗ್ ಒಂದು ವೇದಿಕೆಯಾಗಿದೆ.
ಮಂಜೇಶ್ವರ ಉಪಜಿಲ್ಲಾ ಮಟ್ಟದ ಯು.ಪಿ. ಶಾಲಾ ಬ್ಲಾಗ್ ಗಳ ಮೌಲ್ಯಮಾಪನದಲ್ಲಿ ನಮ್ಮ ಶಾಲಾ ಬ್ಲಾಗ್ ಉತ್ತಮವಾಗಿದ್ದು ದ್ವಿತೀಯ ಸ್ಥಾನ ಪಡೆದು ಜನ ಮನ್ನಣೆ ಗಳಿಸಿರುವುದು ಸಂತೋಷದ ವಿಷಯ.ಇದಕ್ಕೆ ಸಹಕರಿಸಿದ ಎಲ್ಲರಿಗೂ ವಂದನೆಗಳು.ಮುಂದೆಯೂ ಎಲ್ಲರ ಸಹಕಾರವನ್ನು ಕೋರುವ
        .                BLOG TEAM OF S S A U P S CHEVAR

                                                               

No comments:

Post a Comment