ಗುರು
ನಾನಕ್ ಜಯಂತಿ
ಸಿಖ್ ಧರ್ಮ ಸ್ಥಾಪಕರಾದ ಗುರು ನಾನಕ್ ತಲವಂಡಿ
ಎಂಬ ಹಳ್ಳಿಯಲ್ಲಿ ಮಹ್ತಾಕಾಲೂ ಚಂದ್ ಮತ್ತು ತೃಪ್ತಾ ದೇವೀ ದಂಪತಿಗಳ ಮಗನಾಗಿ 1469ರಲ್ಲಿ
ಜನಿಸಿದರು.ಬಾಲ್ಯದಿಂದಲೇ ದೇವರು,ಧರ್ಮ ಆಧ್ಯಾತ್ಮಗಳಲ್ಲಿ ಆಸಕ್ತಿ ವಹಿಸಿದ್ದರು.ಪಂಜಾಬೀ,ಹಿಂದಿ,ಪರ್ಷಿಯನ್,ಸಂಸ್ಕೃತ
ಭಾಷೆಗಳನವ್ನು ಬಲ್ಲವರಾಗಿದ್ದರು.ಜೀವನದಲ್ಲಿ ವೈರಾಗ್ಯ ತಾಳಿ ಮನೆ ಬಿಟ್ಟು ತೆರಳಿದರು.ಹಿಂದೂ
ಮುಸಲ್ಮಾನರ ಐಕ್ಯತೆಯನ್ನು ಪ್ರತಿಪಾದಿಸಿದರು.ಹಿಂದೂಮತ್ತು ಇಸ್ಲಾಮ್ ಧರ್ಮ್ ಗಳಲ್ಲಿರುವ ಉನ್ನತ
ಮೌಲ್ಯಗಳನ್ನು ಹೊಂದಿರುವ ಹೊಸ ಧರ್ಮವೊಂದನ್ನು ಸ್ಥಾಪಿಸಿದರು.ಅದುವೇ ‘ಸಿಖ್ ಧರ್ಮ’.’ಸಿಖ್’ ಎಂದರೆ ಶಿಷ್ಯ.ನಾನಕರು ರಚಿಸಿದ ಕವಿತೆಗಳನ್ನು’ಜಪಜೀ’ ಎಂದು ಕರೆಯುತ್ತಾರೆ.
ಕ್ಷಮೆಯೇ ನನ್ನ ತಾಯಿ,ಸಂತೋಷವೇ ನನ್ನ
ತಂದೆ,ಸತ್ಯ ನಿಷ್ಠೆ ನನ್ನ ಬಂಧುಗಳು ಎಂದು ನಂಬಿದ್ದರು.
No comments:
Post a Comment