ನವೆಂಬರ್ 30 ಜಗದೀಶ ಚಂದ್ರ ಬೋಸ್ ಜನ್ಮ ದಿನ
J.C.BOSE |
ಸಸ್ಯಗಳಿಗೂ ಜೀವ ವಿದೆ.ಅವುಗಳೂ ನಮ್ಮಂತೆ ಆಹಾರ ಸೇವಿಸುತ್ತವೆ,ಅವುಗಳೂರಾತ್ರಿ ಮಲಗಿ
ಮುಂಜಾನೆ ಏಳುತ್ತವ ,ಅವುಗಳೂ ನೋವನ್ನು ಅನುಭವಿಸುತ್ತವೆ,ಮುಂತಾದ ವಿಷಯಗಳನ್ನು ಜಗತ್ತಿಗೆ
ತೋರಿಸಿಕೊಟ್ಟವರು,ಭಾರತೀಯ ವಿಜ್ಞಾನಿ ಜಗದೀಶ ಚಂದ್ರ ಬೋಸ್ ಅವರು.
ಗ ಬಾಂಗ್ಲಾ ದಲ್ಲಿರುವ ಢಾಕಾ ಜಿಲ್ಲೆಯ ಫರೀದಾಬಾದ್ ಎಂಬಲ್ಲಿ 1858ರ ನವೆಂಬರ್ 30 ರಂದು
ಜನಿಸಿದರು.ತಂದೆ ಭಗವಾನ್ ಚಂದ್ರ ಬೋಸರು,ತಾಂತ್ರಿಕ ಶಾಲೆಗಳನ್ನು ಸ್ಥಾಪಿಸಿದವರು .ಅವರ ಮಾರ್ಗ
ದರ್ಶನದಲ್ಲಿ ಬೆಳೆದಗ ಇಅವರು ಬಾಲ್ಯದಲ್ಲಿಯೇ ಸಂಶೋಧನಾ ಗುಣವನ್ನು ಮೈಗೂಡಿಸಿಕೊಂಡಿದ್ದರು.
1880ರಲ್ಲಿ ಇಂಗ್ಲೆಂಡಿಗೆ ತೆರಳಿ ಪ್ರಕೃತಿ ವಿಜ್ಞಾನ,ವೈದ್ಯ ಶಾಸ್ತ್ರ ಕಲಿತರು.’ಚೇತನ ಅಚತೇತನಗಳಲ್ಲಿ ಪ್ರತಿಕ್ರಿಯೆ’ಸಸ್ಯ ಪ್ರತಿಕ್ರಿಯೆ,ಸಸ್ಯಗಳ ಚಲನ ವಲನಗಳ ಯಾಂತ್ರಿಕ
ವ್ಯವಸ್ಥೆ, ಮುಂತಾದ ಗ್ರಂಥಗಳನ್ನು ಬರೆದರು.
ವಿಜ್ಞಾನದ ಆಕಾಶ ತಾರೆ ಯಂತೆ ಮಿನುಗಿದ ಬೋಸರು 1937ರ ನವೆಂಬರ್ 23ರಂದು ತೀರಿಕೊಂಡರು.
No comments:
Post a Comment