Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Wednesday, June 10, 2015

PTA MEETING


ಶ್ರೀ ಶಾರದಾ ಎ.ಯು.ಪಿ.ಶಾಲೆ ಚೇವಾರು
ಪೋಸ್ಟ್ ಕುಡಾಲುಮೇರ್ಕಳ,ಪಿನ್ 671324
ಶಾಲಾ ಬ್ಲಾಗ್-www.11264ssaupschevar.blogspot.in

ಮಾನ್ಯರೇ,
       ನಮ್ಮ ಶಾಲಾ ರಕ್ಷಕ-ಶಿಕ್ಷಕ ಸಂಘ,ಮಾತೃ ರಕ್ಷಕ-ಶಿಕ್ಷಕ ಸಂಘಗಳ ಮಹಾ ಸಭೆಯು ದಿನಾಂಕ 16-06-2015 ನೇ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಸರಿಯಾಗಿ ನಮ್ಮ ಶಾಲಾ ಸಭಾಂಗಣದಲ್ಲಿ ಜರಗಲಿದೆ.ಸಭೆಗೆ ಎಲ್ಲಾ ರಕ್ಷಕ ಬಾಂಧವರನ್ನು ಆಹ್ವಾನಿಸುತ್ತಿದ್ದೇವೆ.
ಕಾರ್ಯಕ್ರಮಗಳು-
       ವಾರ್ಷಿಕ ವರದಿ ಮಂಡನೆ.
       ವಾರ್ಷಿಕ ಲೆಕ್ಕ ಪತ್ರ ಮಂಡನೆ,ಚರ್ಚೆ-ಅಂಗೀಕಾರ.
       ನೂತನ ಕಾರ್ಯಕಾರೀ ಸಮಿತಿ ರೂಪೀಕರಣ
       ಇತರ ವಿಷಯಗಳು
ಚೇವಾರು
10-6-2015                                           ಮುಖ್ಯೋಪಾಧ್ಯಾಯರು

SCHOOL ELECTION

ಶಾಲಾ ನಾಯಕ/ನಾಯಕಿಯ ಚುನಾವಣೆ-2015-16
ನಾಮ ಪತ್ರ ಸಲ್ಲಿಸಲು ಕೊನೆ ದಿನಾಂಕ: 9-6-2015
ನಾಮ ಪತ್ರ ಹಿಂತೆಗೆಯುವ ಕೊನೆ ದಿನಾಂಕ: 10-6-2015
ಚುನಾವಣಾ ದಿನಾಂಕ :12-06-2015,2pm
ಸ್ಥಳ :         ಶಾಲಾ ಸಭಾಂಗಣ

Sunday, June 7, 2015

ENVIRONMENT DAY CELEBRATION


ಚೇವಾರಿನಲ್ಲಿ ವಿಶ್ವ ಪರಿಸರ ದಿನಾಚರಣೆ

ಚೇವಾರು ಶ್ರೀ ಶಾರದಾ ಎ.ಯು.ಪಿ.ಶಾಲೆಯಲ್ಲಿ ವಿಶ್ವ ಪರಿಸರದಿನದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಸಭಾಕಾರ್ಯಕ್ರಮವನ್ನು ಪೈವಳಿಕೆ ಪಂಚಾಯತು ಸದಸ್ಯೆ ಸುಬೈದಾ ಯಂ.ಪಿ.ಉದ್ಘಾಟಿಸಿದರು.ಭೂಮಿಯ ಮೇಲಿನ ಜೀವ ಸಂಕುಲದ ಉಳಿವಿಗೆ ಉತ್ತಮ ಪರಿಸರದ ಆವಶ್ಯಕತೆಯಿದೆ.ಮುಂದಿನ ತಲೆಮಾರಿಗಾಗಿ,ಪ್ರಕೃತಿ ಸಂಪತ್ತನ್ನು ಉಳಿಸಿ ಬೆಳೆಸುವ ಮನೋಭಾವವನ್ನು ಎಳವೆಯಲ್ಲಿಯೇ ಬೆಳೆಸಬೇಕೆಂದು ಕರೆ ಕೊಟ್ಟರು. ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕ ಶ್ಯಾಮ ಭಟ್,ನಮ್ಮ ಪರಿಸರವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದು,ಒಂದು ಮರ ಕಡಿದಲ್ಲಿ ಹತ್ತು ಗಿಡಗಳನ್ನು ನೆಟ್ಟು ಬೆಳೆಸಬೇಕು,ಆಗ ಮಾತ್ರ ಜೀವ ಸಂಕುಲದ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯಪಟ್ಟರು.ಈ ಸಂದರ್ಭದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಗಿಡಗಳನ್ನು ವಿತರಿಸಲಾಯಿತು.ರವಿ ಕುಮಾರ್ ಗಿಡಗಳನ್ನು ನೆಟ್ಟು ಬೆಳೆಸುವ ಕುರಿತಾದ ಮಾಹಿತಿ ನೀಡಿದರು.ವಿಜಯನ್,ಪ್ರಮೀಳಾ,ಪ್ರಸಾದ್ ರೈ ಉಪಸ್ಥಿತರಿದ್ದರು.ಪರಿಸರ ಕುರಿತಾದ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಯಿತು. ಪ್ರಬಂಧಗಳನ್ನು ಮಂಡಿಸಲಾಯಿತು.ಜ್ಯೋತಿಕಾ ಸ್ವಾಗತಿಸಿದಳು.ಮಹಮ್ಮದ್ ನಿಶಾದ್ ವಂದಿಸಿದನು.

Friday, June 5, 2015

WORLD ENVIRONMENT DAY CELEBRATION-2015

ವಿಶ್ವ ಪರಿಸರ ದಿನದ ಅಂಗವಾಗಿ ಸಭಾ ಕಾರ್ಯಕ್ರಮಃಗಿಡಗಳ ವಿತರಣೆ
ಸ್ವಾಗತ ಭಾಷಣಃ  ಜ್ಯೋತಿಕಾಳಿಂದ

ಉದ್ಘಾಟನೆಃ ವಾರ್ಡ್ ಸದಸ್ಯೆ ಶ್ರೀಮತಿ ಸುಬೈದಾ ಟೀಚರ್ ರಿಂದ

ಗಿಡಗಳ ವಿತರಣೆ





ಪ್ರಮೀಳಾರಿಂದ ಭಾಷಣ

ವಿಜಯನ್ ರಿಂದ ಭಾಷಣ

ಮುಖ್ಯೋಪಾಧ್ಯಾಯರಿಂದ ಭಾಷಣ

ಮಹಮ್ಮದ್ ನಿಶಾದ್ ನಿಂದ ಧನ್ಯವಾದ

Thursday, June 4, 2015

WORLD ENVIRONMEN DAY


ಜೂನ್ 5-ವಿಶ್ವ ಪರಿಸರ ದಿನ

ನಮ್ಮ ಸುತ್ತು ಮುತ್ತಲಿರುವ ನೆಲ,ಜಲ,ವಾತಾವರಣ,ಸಸ್ಯಗಳನ್ನಂಲ್ಲಾ ಒಟ್ಟಾಗಿ ಪರಿಸರ ಎನ್ನುತ್ತೇವೆ.ಭೂಮಿಯ ಮೇಲಿರುವ ಜೀವಿಗಳು ಜೀವಿಸಬೇಕಾದರೆ,ಉತ್ತಮ ಪರಿಸರದ ಅಗತ್ಯವಿದೆ.ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ,ಯುಕ್ತ ರಾಷ್ಟ್ರ ಸಂಘದ ನೇತೃತ್ವದಲ್ಲಿ ಜಗತ್ತಿನಾದ್ಯಂತ ಜೂನ್ 5 ನ್ನು ವಿಶ್ವ ಪರಿಸರ ದಿನವನ್ನಾಗಿ ಆಚರಿಸಲಾಗುತ್ತಿದೆ.
ಸುಸ್ಥಿರ ಜೀವನ ಶೈಲಿಗಾಗಿ ಪರಿಸರ,ಎಂಬ ತತ್ವದೊಂದಿಗೆ ಈ ವರ್ಷದ ಪರಿಸರ ದಿನವನ್ನು ಆಚರಿಸಲು ವಿಶ್ವ ಸಂಸ್ಥೆ ನಿರ್ಧರಿಸಿದೆ. ಸುಸ್ಥಿರ ಜೀವನ ಶೈಲಿ ಎಂದರೆ,ಮುಂದಿನ ತಲೆಮಾರಿಗೆ,ಸಂಪನ್ಮೂಲಗಳನ್ನು ಉಳಿಸುವುದಕ್ಕಾಗಿ ಈಗ ಹಿತ ಮಿತವಾಗಿ ಬಳಸುವುದಾಗಿದೆ.ಹಂಚಿಕೊಂಡು ಬದುಕುವುದು ನಮ್ಮ ಧ್ಯೇಯವಾಗಬೇಕಾಗಿದೆ.
ನಮಾಮ ಪರಿಸರವನ್ನು ಉಳಿಸಿ ಬೆಳೆಸಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ.ಸಸ್ಯಗಳನ್ನು ಬೆಳೆಸಿ ಮಾಲಿನ್ಯವನ್ನು ಕಡಿಮೆಮಾಡಬೇಕು.ಹಸಿರೇ ನಮ್ಮ ಉಸಿರಾಗ ಬೇಕು.ಪರಿಸರವನ್ನು ಉಳಿಸಿಬೆಳೆಸಿದರೆ ಮಾತ್ರ ಜೀವ ಸಂಕುಲದ ಅಭಿವೃದ್ಧಿ ಸಾಧ್ಯ.   

Tuesday, June 2, 2015

G.Shankara Kurup Birth Day

ಜೂನ್ 3 ಜಿ.ಶಂಕರ ಕುರುಪ್ ಜನ್ಮ ದಿನ

ಕೇರಳದ ಶ್ರೇಷ್ಠ ಸಾಹಿತಿ,ಮೊದಲ ಜ್ಞಾನ ಪೀಠ ಪ್ರಶಸ್ತಿ ಪಡೆದವರು  ಜಿ.ಶಂಕರ ಕುರುಪ್.ಇವರು 1901ರ    ಜೂನ್ 3ರಂದು ಜನಿಸಿದರು.ಇವರ ಪ್ರಧಾನ ಕೃತಿಗಳು ಓಡಕುಸಲ್,ನಿಮಿಷಮ್, ವಿಶ್ವ ದರ್ಶನಂ,ಅಂತರ್ದಾಹಂ ಗಳಾಗಿವೆ.ಅವರ  ಓಡಕುಸಲ್ ಕೃತಿಗೆ ಜ್ಞಾನ ಪೀಠ ಪ್ರಶಸ್ತಿಲಭಿಸಿತು.1978ರ ಫೆಬ್ರವರಿ 2ರಂದು ನಿಧನರಾದರು.

PRAVESHOTHSAVA-2015-16

ಶಾಲಾ ಪ್ರವೇಶೋತ್ಸವ ಸಮಾರಂಭ
ಶಾಲಾ ಪುಟಾಣಿಗಳಿಂದ ಮೆರವಣಿಗೆ


ಉದ್ಘಾಟನಾ ಸಮಾರಂಭದ ನಿರೂಪಣೆ-ರವಿ ಕುಮಾರ್

ಪುಟಾಣಿಗಳಿಂದ ಪ್ರಾರ್ಥನೆ

ಮುಖ್ಯೋಪಾಧ್ಯಾಯ ಶ್ರೀ ಶ್ಯಾಮ್ ಭಟ್ ರಿಂದ ಸ್ವಾಗತ ಭಾಷಣ

ವಾರ್ಡ್ ಮೆಂಬರ್ ಸುಬೈದಾ ಯಂ.ಪಿ.ಯವರಿಂದ ಉದ್ಘಾಟನೆ

ಹೊಸ ಪುಟಾಣಿಗಳಿಂದ ಪರಿಚಯ

ಪುಟಾಣಿಗಳಿಗೆ ಬ್ಯಾಗ್ ವಿತರಣೆ-ಶ್ರೀ ಕುಮಾರ ಸುಬ್ರಹ್ಮಣ್ಯ ಅವರಿಂದ



ಶುಭಾಶಂಸನೆ-MPTA ಅಧ್ಯಕ್ಷೆ ಶ್ರೀಮತಿ ಇಂದಿರಾ

ಅಧ್ಯಕ್ಷೀಯ ಭಾಷಣ-ಶ್ರೀ ಕುಮಾರ ಸುಬ್ರಹ್ಮಣ್ಯ ಅವರಿಂದ


ಪ್ರವೇಶೋತ್ಸವ ಗೀತೆ-ಶ್ರೀಮತಿ ಪ್ರಮೀಳಾರಿಂದ
ಚೇವಾರು ಶಾಲಾ ಪ್ರವೇಶೋತ್ಸವ

ಪುಟ್ಟ ಪುಟ್ಟ ಹೆಜ್ಜೆ ಹಾಕುತ್ತಾ,ಡೊಡ್ಡಕನಸುಗಳನ್ನು ಹೊತ್ತು ಬಂದ ಚಿಣ್ಣರ ಶಾಲಾ ಪ್ರವೇಶೋತ್ಸವ ಚೇವಾರು ಶ್ರೀ ಶಾರದಾ ಎ.ಯು.ಪಿ.ಶಾಲೆಯಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು.ಕಾರ್ಯಕ್ರಮವನ್ನು ವಾರ್ಡ್ ಸದಸ್ಯೆ ಶ್ರೀಮತಿ ಸುಬೈದಾ  ಉದ್ಘಾಟಿಸಿದರು.ಉತ್ತಮ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಉತ್ತಮ ಸಮಾಜವನ್ನು ರೂಪಿಸಬಲ್ಲರು ಎಂದು ಅಭಿಪ್ರಾಯಪಟ್ಟರು.ಶಾಲಾ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಕೆ.ಎಸ್.ಇ.ಬಿ.ಸಬ್ ಎಂಜಿನಿಯರ್ ಕುಮಾರ ಸುಬ್ರಹ್ಮಣ್ಯ ಅಧ್ಯಕ್ಷ ಸ್ಥಾನ ವಹಿಸಿದರು.ಶಾಲಾ ವ್ಯವಸ್ಥಾಪಕರ  ವತಿಯಿಂದ ವಿದ್ಯಾರ್ಥಿಗಳಿಗೆ ಬ್ಯಾಗುಗಳನ್ನು ವಿತರಿಸಲಾಯಿತು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಪರಮೇಶ್ವರ ಪಾವಲುಕೋಡಿ, ಮಾತೃ ರಕ್ಷಕ ಸಂಘದ ಅಧ್ಯಕ್ಷೆ,ಇಂದಿರಾ ಮಿತ್ತಡ್ಕ ಶುಭ ಹಾರೈಸಿದರು.ಶಾಲಾ ವ್ಯವಸ್ಥಾಪಕ ಬಿ.ನಾರಾಯಣ ಭಟ್ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಶ್ಯಾಮ ಭಟ್ ಸ್ವಾಗತಿಸಿದರು.ಪ್ರಸಾದ್ ರೈ ವಂದಿಸಿದರು.ರವಿಕುಮಾರ್ ಕಾರ್ಯಕ್ರಮ ನಿರೂಪಿಸಿದರು.ಪ್ರಮೀಳಾ ಪ್ರವೇಶೋತ್ಸವ ಗೀತೆ ಹಾಡಿದರು.ಸರಸ್ವತಿ,ರಾಜೇಶ್ವರಿ,ಪುಷ್ಪಲತಾ,ವಿಜಯನ್,ಗೋಪಾಲ ಕೃಷ್ಣ ಭಟ್ ಸಹಕರಿಸಿದರು. ಪ್ರವೇಶೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಂದ ಮೆರವಣಿಗೆ ನಡೆಯಿತು.