ಅಕ್ಟೋಬರ್:30 ವಿಶ್ವ ಮಿತವ್ಯಯ ದಿನ
ಭೂ
|
ಮಿಯ ಮೇಲೆ ಲಭಿಸುವ ಸಂಪತ್ತನ್ನು,ಚೈತನ್ಯವನ್ನೂ,ಸೂಕ್ತ
ರೀತಿಯಲ್ಲಿ,ದುರುಪಯೋಗವಾಗದಂತೆ ಬಳಸುವ ಉದ್ದೇಶದೊಂದಿಗೆ,ಜಗತ್ತಿನಾದ್ಯಮತ ವಿಶ್ವ ಮಿತವ್ಯಯ
ದಿನವನ್ನು ಆಚರಿಸಲಾಗುತ್ತಿದೆ.
ನೀರು ಒಂದು ಅಮೂಲ್ಯ ಸಂಪತ್ತಾಗಿದ್ದು,ಅದನ್ನು ಮಿತವಾಗಿ
ಬಳಸಬೇಕಾಗಿದೆ.ಇದೇ ರೀತಿ ವಿದ್ಯುತ್,ಶಕ್ತಿ,ಪೆಟ್ರೋಲ್ ನಂತರ ಇಂಧನಗಳನ್ನು ಅಗತ್ಯಕ್ಕೆ ತಕ್ಕಷ್ಟು
ಮಾತ್ರ ಉಪಯೋಗಿಸದಿದ್ದರೆ,ಮುಂದೆ ಅವುಗಳ ಕ್ಷಾಮವನ್ನು ಎದುರಿಸ ಬೇಕಾಗ ಬಹುದು.ಮದುವೆಗಳಂತಹ
ಸಮಾರಂಭಗಳಲ್ಲಿ ಆಹಾರವು ಪೋಲಾಗುತ್ತಿರುವುದನ್ನು ಕಾಣುತ್ತಿದ್ದೇವೆ.ವಿಶ್ವದಲ್ಲಿ ಎ,ಟೋ ಜನರು
ಒಂದು ಹೊತ್ತಿನ ಊಟಕ್ಕಾಗಿ ಪರದಾಡುತ್ತಿದ್ದಾರೆ.ಆತ್ಮ ಪ್ರತಿಷ್ಠೆಗಾಗಿ ಇಂಧನವನ್ನು ಪೋಲು
ಮಾಡುವುದನ್ನು ಕಾಣಬಹುದು.ನೀರನ್ನು ಯಥೇಚ್ಛವಾಗಿ ಭಳಸುತ್ತಿದ್ದೇವೆ.ನೀರಿಗೆ ಬರವಿರುವ ಊರುಗಳನ್ನು
ನೋಡಿದವರಿಗೆ ಗೊತ್ತು ನೀರಿನ ಬೆಲೆ.
ಲಭಿಸುವ ಸಂಪನ್ಮೂಲಗಳನ್ನು ,ಮಿತವಾಗಿ
ಬಳಸುತ್ತಾ,ಎಲ್ಲರಿಗೂ ಹಂಚುತ್ತಾ ಆನಂದದಿಂದ ಬಾಳೋಣ.
ಮಿತವೇ ಹಿತ
No comments:
Post a Comment