ಡಿಸೆಂಬರ್ 3 ಡಾ.ರಾಜೇಂದ್ರ
ಪ್ರಸಾದ್ ಜನ್ಮ ದಿನ
ಸ್ವತಂತ್ರ ಭಾರತದ ಮೊದಲ
ರಾಷ್ಟ್ರಪತಿಗಳಾದ ಡಾ.ರಾಜೇಂದ್ರ ಪ್ರಸಾದರು 1884ರ ಡಿಸೆಂಬರ್ 3 ರಂದು ಜನಿಸಿದರು.ಇವರ ತಂದೆ
ಆಯುರ್ವೇದ ವೈದ್ಯರಾಗಿದ್ದರು.ಕಲ್ಕತ್ತಾ ದಲ್ಲಿ ವ್ಯಾಸಂಗ ಮಾಡಿ ಮುಸಾಫರ ನಗರದ ಕಾಲೇಜೊಂದರಲ್ಲಿ
ಅಧ್ಯಾಪಕರಾದರು..ನಂತರ ಕಾನೂನು ಪರೀಕ್ಷೆಗೆ ಕೂತು,ವಕೀಲ ವೃತ್ತಿ ಆರಂಭಿಸಿದರು.ಗಾಂಧೀಜಿಯವರ
ಪ್ರಭಾವಕ್ಕೆ ಒಳಗಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದರು.
ಭಾರತ 1947ರಲ್ಲಿ
ಸ್ವತಂತ್ರವಾದಾಗ ದೇಶದ ಪ್ರಥಮ ರಾಷ್ಟ್ರಾಧ್ಯಕ್ಷರಾಗಿ ಆಯ್ಕೆಯಾದರು.ಇವರು ಒಳ್ಳೆಯ
ಬರಹಗಾರರಾಗಿದ್ದರು.ಎಕನಾಮಿಕ್ಸ್ ಆಫ್ ಖಾದಿ ಎಂಬುದು ಅವರ ಭಾಷಣಗಳ ಸಂಗ್ರಹ ಕೃತಿಯಾಗಿದೆ.1963ರ
ಮಾರ್ಚ್ 1 ರಂದು ಅಸ್ತಂಗತ ರಾದರು.
No comments:
Post a Comment