ಮಕ್ಕಳ ದಿನಾಚರಣೆ- ಪಂಡಿತ್ ಜವಹರಲಾಲ್
ನೆಹರು ಜನ್ಮ ದಿನ
ಜವಹರಲಾಲ್ ನೆಹರುರವರು ಸ್ವತಂತ್ರ ಭಾರತದ ಪ್ರಪ್ರಥಮ ಪ್ರಧಾನಿಯಾಗಿದ್ದವರು.ಇವರು 1889ರ
ನವೆಂಬರ್ 14ರಂದು ಜನಿಸಿದರು.ತಂದೆ ಮೋತಿಲಾಲ್ ನೆಹರು,ತಾಯಿ ಸ್ವರೂಪ ರಾಣಿ.
ನೆಹರುರವರು ಕೇಂಬ್ರಿಜ್ ನಲ್ಲಿ ಉನ್ನತ ಶಿಕ್ಷಣ ಪಡೆದು,ಬ್ಯಾರಿಸ್ಟರ್ ಪದವಿಯೊಂದಿಗೆ
ಭಾರತಕ್ಕೆ ಮರಳಿದರು.ಅಲಹಾಬಾದ್ ನಲ್ಲಿ ವಕೀಲರಾಗಿ ವೃತ್ತಿಯನ್ನು ಆರಂಭಿಸಿದರು.1919ರಲ್ಲಿ
ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು.ಗಾಂಧೀಜಿಯವರಿಂದ ಪ್ರಭಾವಿತರಾದ ಇವರು ಅಹಿಂಸಾತ್ಮಕ
ಪ್ರತಿಭಟನೆ,ಸತ್ಯಾಗ್ರಹ,ಅಸಹಕಾರ ಆಂದೋಲನದಲ್ಲಿ ಭಾಗವಹಿಸಿದರು.1947 ಆಗಸ್ಟ್ 15ರಂದು
ಸ್ವಾತಂತ್ರ್ಯ ಪಡೆದ ಭಾರತದ ಪ್ರಥಮ ಪ್ರಧಾನಿಯಾದರು.ಔದ್ಯಮೀಕರಣಕ್ಕೆ ಹೆಚ್ಚಿನ ಪ್ರಾಶಸ್ತ್ಯ
ಕೊಟ್ಟರು.ಡಿಸ್ಕವರಿ ಆಫ್ ಇಂಡಿಯಾ ಇವರು ಬರೆದ ಕೃತಿಯಾಗಿದೆ. ಪಂಡಿತ್ ಜವಹರಲಾಲ್ ನೆಹರುರವರ ಜನ್ಮ
ದಿನವನ್ನು ದೇಶಾದ್ಯಂತ ಮಕ್ಕಳ ದಿನ ವನ್ನಾಗಿ ಆಚರಿಸಲಾಗುತ್ತದೆ.
No comments:
Post a Comment