ನವೆಂಬರ್
26 ರಾಷ್ಟ್ರೀಯ
ಕಾನೂನು ದಿನ (ಸಂವಿಧಾನ
ರಚನಾ ದಿನ)
ದೇಶದಾದ್ಯಂತ
ನವೆಂಬರ್ 26ನ್ನು
ರಾಷ್ಟ್ರೀಯ ಕಾನೂನು ದಿನ (ಸಂವಿಧಾನ
ರಚನಾ ದಿನ)ವನ್ನಾಗಿ
ಆಚರಿಸಲಾಗುತ್ತಿದೆ.1949ರ
ನವೆಂಬರ್ 26ರಂದು
ಭಾರತ ಸಂವಿಧಾನ ರಚನಾ ಸಭೆಯು ದೇಶದ
ಸಂವಿಧಾನವನ್ನು ಅಂಗೀಕರಿಸಿದ
ಕುರುಹಾಗಿ ಈ ದಿನವನ್ನು ಆಚರಿಸಲಾಗುತ್ತದೆ.
ಕಾನೂನು
ಪ್ರತಿಯೊಂದು ದೇಶಕ್ಕೂ
ರಕ್ಷೆಯಿದ್ದಂತೆ.ಪ್ರಜೆಗಳ
ಹಕ್ಕು ಹಾಗೂ ಕರ್ತವ್ಯಗಳನ್ನು
ರಕ್ಷಿಸುವ ಕಾನೂನು,ಅಪರಾಧಿಗಳಿಗೆ
ಶಿಕ್ಷೆಯನ್ನೂ ನೀಡುತ್ತದೆ.ಹೀಗಾಗಿ
ಕಾನೂನು ಎಂಬುದು ನಾಗರಿಕ ಸರಕಾರದ
ಬೆನ್ನೆಲುಬು.ದೇಶದಲ್ಲಿ
ನ್ಯಾಯಾಂಗ ವ್ಯವಸ್ಥೆ ಕುಸಿದರೆ,ದೇಶದಲ್ಲಿ
ಅರಾಜಕತೆ ಸೃಷ್ಟಿಯಾಗಬಹುದು.ಬಿಕ್ಕಟ್ಟುಗಳು
ಎದುರಾಗಬಹುದು.
ಆದ್ದರಿಂದ
ಪ್ರತಿಯೊಂದು ದೇಶಕ್ಕೂ ಸದೃಢ
ನ್ಯಾಯಾಂಗ ವ್ಯವಸ್ಥೆಯ ಅಗತ್ಯವಿದೆ.
ಶಾಲೆಯಲ್ಲಿ ರಾಷ್ಟ್ರೀಯ
ಕಾನೂನು ದಿನಾಚರಣೆ
ಶಾಲೆಯಲ್ಲಿ ವಿಶೇಶ ಎಸೆಂಬ್ಲಿ ನಡೆಸಿ ದಿನದ ಮಹತ್ವವನ್ನು ವಿವರಿಸಲಾಯಿತು.ಸಂವಿಧಾನದ ಕುರಿತಾದ ಚರ್ಚಾಗೋಷ್ಠಿಯನ್ನು ತರಗತಿಯಲ್ಲಿ ಏರ್ಪಡಿಸಲಾಯಿತು.ರಸಪ್ರಶ್ನೆ ಸ್ಪರ್ಧೆ ನಡೆಸಲಾಯಿತು.
No comments:
Post a Comment