ನವೆಂಬರ್ ೧೧,ರಾಷ್ಟ್ರೀಯ ವಿದ್ಯಾಭ್ಯಾಸ ದಿನ
ಭಾರತದ ಮೊದಲ ಶಿಕ್ಷಣ ಸಚಿವರಾಗಿದ್ದ,ಮೌಲಾನಾ ಅಬ್ದುಲ್ ಕಲಾಂ ಆಜಾದ್ ಅವರ ಜನ್ಮ ದಿನ ವಾದ ನವೆಂಬರ್ ೧೧ನ್ನು ದೇಶೀಯ ಶಿಕ್ಷಣ ದಿನ ವನ್ನಾಗಿ ಆಚರಿಸಲಾಗುವುದು.ಮೌಲಾನಾ ಅಬ್ದುಲ್ ಕಲಾಂ ಆಜಾದರು ೧೮೮೮ರ ನವೆಂಬರ್ ೧೧ರಂದು ಮೆಕ್ಕಾದಲ್ಲಿ ಜನಿಸಿದರು.ಕೇವಲ ೧೨ನೇ ವಯಸ್ಸಗೆ ಅರೆಬಿಕ್ ಹಾಗೂ ಪರ್ಷಿಯನ್ ಭಾಷೆಗಳಲ್ಲಿ ಪಾರಂಗತರಾದರು.ಅವರು ಹಿಂದು ಮುಸ್ಲಿಂ ಏಕತೆಗಾಗಿ ಶ್ರಮಿಸಿದವರು.ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ,ಬ್ರಿಟಿಷರಿಂದ ಗೃಹ ಬಂಧನವನ್ನು ಅನುಭವಿಸಿದರು.೧೯೪೬ರಲ್ಲಿ ಜವಾಹರಲಾಲ್ ನೆಹರು ನೇತೃತ್ವದಲ್ಲಿ ರೂಪುಗೊಂಡ ಆಂಕರಿಕ ಸರಕಾರದ ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿದರು.ಸ್ವಾತಂತ್ರ್ಯಾ ನಂತರವೂ ಅದೇ ಹುದ್ದೆಯಲ್ಲಿ ಮುಂದುವರಿದರು.ಇವರು ಸಾಹಿತ್ಯ ಕೃಷಿಯನ್ನು ಮಾಡಿದರು.ಇಂಡಿಯಾ ವಿನ್ಸ್ ಫ್ರೀಡಂ ಇವರ ಕೃತಿಗಳಲ್ಲಿ ಒಂದು. ಇವರಿಗೆ ಮರ ಣೋತ್ತರ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
No comments:
Post a Comment