ನವೆಂಬರ್-14,ವಿಶ್ವ
ಮಧುಮೇಹ ಜಾಗೃತಿ ದಿನ
ನೂರಾರು ವರ್ಷಗಳಿಂದ ಮನು
ಕುಲವನ್ನು ಕಾಡುತ್ತಿರುವ ಕಾಯಿಲೆ ಮಧುಮೇಹ.ದೇಹದ ಶಕ್ತಿ ಉತ್ಪಾದನೆ ವ್ಯವಸ್ಥೆಯಲ್ಲಿ
ಏರುಪೇರಾಗುವುದರಿಂದ ರಕ್ತದಲ್ಲಿ ಸಕ್ಕರೆಯ ಅಂಶ ಅಸಮರ್ಪಕವಾಗಿ ಹೆಚ್ಚುತ್ತದೆ.ಇದನ್ನು ಡಯಾಬಿಟಿಸ್
ಮೆಲಿಟಿಸ್ ಎನ್ನುತ್ತೇವೆ.
ನಾವು ಸೇವಿಸುವ ಆಹಾರದಲ್ಲಿರುವ
ಗ್ಲುಕೋಸ್ ಅಂಶವನ್ನು ಜಠರ ಹೀರಿಕೊಂಡು ರಕ್ತಕ್ಕೆ ಸೇರಿಸುತ್ತದೆ.ಈ ಗ್ಲುಕೋಸ್ ಜೀವ ಕೋಶಗಳಿಗೆ ಶಕ್ತಿಯನ್ನು ಉತ್ಪಾದಿಸಲು
ಕಾರಣವಾಗುತ್ತದೆ. ಗ್ಲುಕೋಸ್ ನ್ನು ಜೀವಕೋಶಗಳಿಗೆ ಸೇರಿಸಲು ಇನ್ಸುಲಿನ್
ಸಹಾಯಮಾಡುತ್ತದೆ.ಇನ್ಸುಲಿನ್ ಉತ್ಪಾದಿಸಲು ಮೇದೋಜ್ಜೀರಕ ಗ್ರಂಥಿ ವಿಫಲವಾದಾಗ,ಉತ್ಪಾದಿಸಲ್ಪಟ್ಟ
ಇನ್ಸುಲಿನ್ ಕಾರ್ಯ ನಿರ್ವಹಿಸದಿದ್ದಾಗ ಮಧುಮೇಹ ಕಂಡು ಬರುತ್ತದೆ
ಇದಕ್ಕೆ ಕಾರಣ ಕೌಟುಂಬಿಕ ಹಿನ್ನಲೆ,ಚಟುವಟಿಕೆ ಇಲ್ಲದ ಜೀವನ ಶೈಲಿ,ಧೂಮ
ಪಾನ,ಮದ್ಯಪಾನ,ಬಿ.ಪಿ.ಮುಂತಾದವುಗಳು.
. ಮಧುಮೇಹದಿಂದಾಗಿ, ಸದಾ ಸುಸ್ಸು,ಪದೇ ಪದೇ ಮೂತ್ರ ವಿಸರ್ಜನೆ,,ಕಡಿಮೆ ತೂಕ,ಗಾಯ ಗುಣವಾಗದೇ
ಇರುವುದು,ಅತಿಯಾದ ಹಸಿವು,ಬಾಯಾರಿಕೆ ಇತ್ಯಾದಿ ಲಕ್ಷಣಗಳು ಕಂಡು ಬರುವುದು.
No comments:
Post a Comment