ಶ್ರದ್ಧಾಂಜಲಿ
|
||
ಸರಳತೆ,ಮೇಧಾ ಶಕ್ತಿ ಮತ್ತು ಮಾನವೀಯತೆಯ ಸಾಕಾರ
ಮೂರ್ತಿಯೇ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ.1931 ರ ಅಕ್ಟೋಬರ್ 15 ರಂದು ತಮಿಳುನಾಡಿನ ರಾಮೇಶ್ವರಂ
ನಲ್ಲಿ ಜನಿಸಿದರು.ಬಾಲ್ಯದಲ್ಲಿ ಬಡತನದ ಬೇಗೆಯಲ್ಲಿಯೇ ವಿದ್ಯಾಭ್ಯಾಸ ಪೂರೈಸಿದರು.ಅವರಲ್ಲಿದ್ದ
ಕನಸು,ಗುರಿ, ಪ್ರತಿಭೆಗಳಿಂದಾಗಿ ಮದ್ರಾಸಿನ ತಾಂತ್ರಿಕ ವಿಶ್ವ ವಿದ್ಯಾಲಯದಲ್ಲಿ ಎಂಜಿನಿಯರಿಂಗ್
ಮುಗಿಸಿ,ಸಂಶೋಧನೆಯಲ್ಲಿ ತೊಡಗಿದರು.SLV-IV ಬಾಹ್ಯಾಕಾಶ ಉಡಾವಣೆಯಲ್ಲಿ ಸಕ್ರಿಯ ಪಾತ್ರವಹಿಸಿದರು.ಇಸ್ರೋದಲ್ಲಿ
20ವರ್ಷಗಳ ಸೇವೆಯಲ್ಲಿ ಕ್ಷಿಪಣಿಗಳ ಅಭಿವೃದ್ಧಿಗೆ ನಾಂದಿಹಾಡಿ,Missile Man of India ಎಂಬ
ಗೌರವಕ್ಕೆ ಪಾತ್ರರಾದರು.ರಕ್ಷಣಾ ಇಲಾಖೆಯ ವೈಜ್ಞಾನಿಕ ಸಲಹೆಗಾರರಾದರು.ಪೋಖ್ರಾನ್ ನಲ್ಲಿ ಭಾರತವು
ಯಶಸ್ವಿಯಾಗಿ ಅಣುಪರೀಕ್ಷೆ ಮಾಡುವಲ್ಲಿ ಕಲಾಂ ಕಾರಣ ಕರ್ತರಾದರು.
ಕಲಾಂ ಅವರು ಭಾರತದ ಹೆಮ್ಮೆಯ ವಿಜ್ಞಾನಿ.ರಾಜಕೀಯ
ಮುತ್ಸದ್ದಿ.ಭಾರತದ 11ನೇ ರಾಷ್ಟ್ರಪತಿಯಾಗಿ 202ರ ಜುಲೈ 25 ರಂದು ಆಯ್ಕೆಯಾದರು.30 ವಿಶ್ವ
ವಿದ್ಯಾಲಯಗಳಿಂದ ಡಾಕ್ಟರೇಟ್ ಪಡೆದವರು.1997ರಲ್ಲಿ ಭಾರತ ರತ್ನ ಪ್ರಶಸ್ತಿ ಪಡೆದವರು.ಇವರು
ಪ್ರಸಿದ್ಧ ಲೇಖಕರಾಗಿದ್ದರು.Wings Of Fire ಇವರ ಆತ್ಮ ಚರಿತ್ರೆ.India-20-20,A vision for new millennium,
My journey, Ignited minds-un leaping the power within India ಮುಂತಾದವುಗಳು ಅವರ ಕೃತಿಗಳು.
2015ರ ಜುಲೈ 27ರಂದು ನಮ್ಮನ್ನಗಲಿದರು.
ಅವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕೊಡಲಿ
ಎಂಬುದು ನಮ್ಮೆಲ್ಲರ ಪ್ರಾರ್ಥನೆ.
No comments:
Post a Comment