ಗಣಿತ ಕ್ಲಬ್ ನ ಆಶ್ರಯದಲ್ಲಿ ಗಣಿತ
ರಸಪ್ರಶ್ನೆ ಸ್ಪರ್ಧೆ
9-7-2015ನೇ ಗುರುವಾರದಂದು, ಗಣಿತ ಕ್ಲಬ್ ನ ಆಶ್ರಯದಲ್ಲಿ ಗಣಿತ ರಸಪ್ರಶ್ನೆ ಸ್ಪರ್ಧೆ
ಜರಗಿತು.ಶಿಕ್ಷಕ ರವಿ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ, ರಸಪ್ರಶ್ನೆ ಸ್ಪರ್ಧೆಯನ್ನು
ನಡೆಸಿಕೊಟ್ಟರು.ಗಣಿತದಲ್ಲಿ ಆಸಕ್ತಿಯನ್ನು ಬೆಳೆಸಲು,ಚಿಂತನಾ ಸಾಮರ್ಥ್ಯವನ್ನು ಹೆಚ್ಚಿಸಲು ಇಂತಹ
ಕಾರ್ಯಕ್ರಮಗಹಳು ಸಹಕಾರಿ ಎಂದು ಅಭಿಪ್ರಾಯಪಟ್ಟರು.ಸ್ಪರ್ಧೆಗಳಲ್ಲಿ ಬಹುಮಾನ
ಗಳಿಸುವುದಕ್ಕಿಂತಲೂ,ಭಾಗವಹಿಸಿ,ಜ್ಞಾನವನ್ನು ಹೆಚ್ಚಿಸಬೇಕೆಂದು ಕರೆ ಕೊಟ್ಟರು.ಯು.ಪಿ.ಭಾಗದಲ್ಲಿ
ಜ್ಯೋತಿಕಾ.ಸಿ.ಟಿ. ಪ್ರಥಮ,ಪುಷ್ಪಲತಾ,ಶರಣ್ಯ ದ್ವಿತೀಯ ಸ್ಥಾನ ಪಡೆದರು.ಅವರನ್ನು
ಅಭಿನಂದಿಸಲಾಯಿತು.ಗಣಿತ ಕ್ಲಬ್ ನ ಕಾರ್ಯದರ್ಶಿ, ಜ್ಯೋತಿಕಾ.ಸಿ.ಟಿ ಸ್ವಾಗತಿಸಿದಳು.ಫಮೀಸಾ
ವಂದಿಸಿದಳು.
No comments:
Post a Comment