ಜುಲೈ 22-ಸಸ್ಯ ಶಾಸ್ತ್ರಜ್ಞ,ಗ್ರಿಗೋರ್ ಮೆಂಡಲ್
ಜನ್ಮದಿನ
|
ತಳಿ ಶಾಸ್ತ್ರದ ಜನಕ ಗ್ರಿಗೋರ್ ಮೆಂಡಲ್,1822ರ ಜುಲೈ
22ರಂದು ಜೆಕೋಸ್ಲೊವಾಕಿಯಾದಲ್ಲಿ ರೈತನ ಮಗನಾಗಿ ಜನಿಸಿದರು.ಆರಂಭದ ವಿದ್ಯಾಭ್ಯಾಸ ತನ್ನ
ಊರಿನಲ್ಲೇ ಮುಗಿಸಿ,ನಂತರ ಓಲ್ಮುಟ್ಸ್ ಎಂಬಲ್ಲಿನ ಫಿಲಾಸಾಫಿಕಲ್ ಇನ್ ಸ್ಟಿಟ್ಯೂಟ್ ಗೆ
ಸೇರಿದರು.ಪ್ರೌಢ ಶಾಲೆಯಲ್ಲಿ 14 ವರ್ಷಗಳ ಕಾಲ ಅಧ್ಯಾಪಕರಾಗಿ ದುಡಿದರು.ಬಿಡುವಿನ ವೇಳೆಯಲ್ಲಿ
ಸಸ್ಯಗಳ ಕುರಿತು ಸಂಶೋಧನೆ ಮಾಡಿದರು.ಅನುವಂಶೀಯ ಗುಣಗಳ ಕುರಿತು ಅಧ್ಯಯನ ಮಾಡಿದರು.ಇವರ
ಸಂಶೋಧನೆ ಡಾರ್ವಿನ್ ರ ವಿಕಾಸ ವಾದಕ್ಕೆ ಪುಷ್ಟಿ ನೀಡಿತು.1884ರ ಜನವರಿ 6 ರಂದು
ವಿಧಿವಶರಾದರು.
|
No comments:
Post a Comment