ಗಣಿತ ಬುಲೆಟಿನ್ ಬೋರ್ಡ್-ಗಣಿತ ಬಿಂಬದ
ಅನಾವರಣ
3-7-2015ನೇ ಶುಕ್ರವಾರದಂದು, ಗಣಿತ ಕ್ಲಬ್ ನ ಆಶ್ರಯದಲ್ಲಿ ತಯಾರಾದ ಗಣಿತ ಬಿಂಬ ಎಂಬ ಬುಲೆಟಿನ್ ಬೋರ್ಡ್ ನ್ನು ಶಿಕ್ಷಕ
ರವಿಕುಮಾರ್ ಅನಾವರಣಗೊಳಿಸಿದರು.ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಪ್ರದರ್ಶಿಸಲು ಇದು ಕೂಡ
ಒಂದು ವೇದಿಕೆಯಾಗಿದ್ದು,ಇದನ್ನು ಯೇಗ್ಯ ರೀತಿಯಲ್ಲಿ ಬಳಸಬೇಕೆಂದು
ಕರೆಕೊಟ್ಟರು.ಸೂಕ್ಷ್ಮತೆ,ನಿಖರತೆ ಹೆಚ್ಚಿಸಲು ಗಣಿತ ಚಿತ್ರ ರಚನೆ ಸಹಕಾರಿ,ಮಾನಸಿಕ
ಸಾಮರ್ಥ್ಯ,ತರ್ಕ,ಚಿಂತನೆಗಳನ್ನು ಹೆಚ್ಚಿಸಲು ಜಾಣ್ಮೆ ಲೆಕ್ಕಗಳು ಸಹಕಾರಿ.ಇವುಗಳನ್ನು ಗಣಿತ ಬಿಂಬ
ಒಳಗೊಂಡಿದೆ.ಇದಲ್ಲದೆ ಗಣಿತ ಶಾಸ್ತ್ರಜ್ಞರ ಪರಿಚಯ,ಹೊಸ ಮಾಹಿತಿ ಮನರಂಜನೆಗಳನ್ನು ಒಳಗೊಳ್ಳಲಿದೆ.
No comments:
Post a Comment