1969ರಜುಲೈ 21ರಂದು
ಬೆಳಿಗ್ಗೆ ನೀಲ್ ಆರ್ಮ್ ಸ್ಟ್ರಾಂಗ್ ಮತ್ತು ಎಡ್ವಿನ್ ಆಲ್ಡ್ರೀನ್ ಚಂದ್ರನ ಮೇಲೆ ಮೊತ್ತ ಮೊದಲು
ಕಾಲಿರಿಸಿದರು.ಇದು ಒಂದು ಐತಿಹ್ಯ ದಿನ.ಮಾನವನ ವೈಜ್ಞಾನಿಕ ಸಂಶೋಧನೆಯ ಪ್ರಗತಿಯ ಒಂದು
ಮೈಲಿಗಲ್ಲು.ಚಂದ್ರನು ಭೂಮಿಯ ಸುತ್ತಲೂ ತಿರುಗುವ ಏಕೈಕ ಪ್ರಾಕೃತಿಕ ಉಪಗ್ರಹ.ಸುಮಾರು
400ವರ್ಷಗಳ ಹಿಂದೆ ಗೆಲಿಲಿಯೋ ಟೆಲಿಸ್ಕೋಪಿನ ಮೂಲಕ ಚಂದ್ರನ ಮೇಲಿನ ಗುಡ್ಡಗಳನ್ನು,ಕುಳಿಗಳನ್ನು
ಕಂಡುಹಿಡಿದರು.ಚಂದ್ರನ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯಲು,ಬಾಙ್ಯಾಕಾಶದ ಕುರಿತು ಹೆಚ್ಚಿನ
ವಿವರ ತಿಳಿಯಲು ಪ್ರತಿವರ್ಷ ಜುಲೈ21ನ್ನು ವಿಶ್ವ ಚಾಂದ್ರ ದಿನವನ್ನಾಗಿ ಆಚರಿಸಲಾಗುತ್ತಿದೆ.
|
No comments:
Post a Comment