ಜುಲೈ-4,ಮೇರಿ ಕ್ಯೂರಿ ಸಂಸ್ಮರಣೆ
ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರೂ ಕೆಲಸಮಾಡಿ ಯಶಸ್ಸುಗಳಿಸಬಹುದೆಂಬುದಕ್ಕೆ ಸಾಕ್ಷಿ ಮೇಡಂ
ಕ್ಯೂರಿ.ವರು ಎರಡು ಬಾರಿ ನೋಬೆಲ್ ಪ್ರಶಸ್ತಿ ಪಡೆದವರು.ಜಗತ್ತಿನಲ್ಲಿಯೇ ಅತೀ ಹೆಚ್ಚು ನೋಬೆಲ್
ಪ್ರಶಸ್ತಿ ಪಡೆದವರು ಕ್ಯೂರಿ ಕುಟುಂಬದವರು.
ಮೇರಿ ಕ್ಯೂರಿ ಪೇಲೆಂಡಿನ ರಾಜಧಾನಿ ವಾರ್ಸಾದಲ್ಲಿ 1867ರ ನವೆಂಬರ್ 7ರಂದು
ಜನಿಸಿದರು.ಚಿಕ್ಕಂದಿನಲ್ಲೇ ವಿಜ್ಞಾನದಲ್ಲಿ ಆಸಕ್ತಿ ಬೆಳೆಸಿದಳು.1891ರಲ್ಲಿ ಪ್ಯಾರಿಸ್ ಗೆ
ತೆರಳಿ ಬಿ.ಎಸ್.ಸಿ ಪದವಿ ಪಡೆದಳು.
ಮೇರಿ ತನ್ನ ಪತಿಯೊಡನೆ ಪರಮಾಣುಗಳ ಕುರಿತು ಅಧ್ಯಯನ ಮಡ ವಿಕಿರಣಗಳ ಕುರಿತು ಸಂಶೋಧನೆ
ಮಾಡಿದರು.1890ರಲ್ಲಿ ಯುರೇನಿಯಂ ಧಾತುವನ್ನೊಳಗೊಂಡ ಹೊಸ ಮೂಲ ವಸ್ತುವನ್ನು ಕಂಡುಹಿಡಿದರು.ಇದನ್ನು
ಪೊಲೋನಿಯಂ ಎಂದು ಹೆಸರಿಸಿದರು. ಇದಕ್ಕಿಂತಲೂ ಶಕ್ತಿಯುತವಾದ ಮೂಲವಸ್ತು ರೇಡಿಯಂ ನ್ನು
ಕಂಡುಹಿಡಿದರು.ಇದಕ್ಕಾಗಿ ವೇರಿ ಕ್ಯೂರಿ,ಪಿಯರಿ ಕ್ಯೂರಿ, ಹಾಗೂ ಬೆಕ್ವಿರಲ್ ನೋಬೆಲ್ ಪ್ರಶಸ್ತಿ
ಪಡೆದರು 1911 ರಲ್ಲಿ ರೇಡಿಯಂ ಮತ್ತು ಪೊಲೋನಿಯಂಗಳನ್ನು ಪ್ರತ್ಯೇಕಿಸಿ,ಅವುಗಳ ರಾಸಾಯನಿಕ
ಗುಣಗಳನ್ನು ಅಭ್ಯಸಿಸುದಕ್ಕಾಗಿ ರಸಾಯನ ಶಾಸ್ತ್ರದ ನೋಬೆಲ್ ಲಭಿಸಿತು.
ಬಡಜನರ,1ನೇ ಮಹಾ ಯುದ್ಧದಲ್ಲಿ ಸಂತ್ರಸ್ತರಾದವರ ಉಪಚಾರಕ್ಕಾಗಿ ಪ್ಯಾರಿಸ್ನಲ್ಲಿ ವೇರಿ ಕ್ಯೂರಿ ಇನ್ಸ್ ಸ್ಟಿಟ್ಯೂಟ್ ಆಫ್ ರೇಡೇಯಂ ಎಂಬ
ಸಂಸ್ಥೆ ಸ್ಥಾಪಿಸಿದರು.ಅವರ ಗೌರವಾರ್ಥ ರಾಸಾಯನಿಕ ಮೂಲ ವಸ್ತುವೊಂದಕ್ಕೆ ಕ್ಯೂರಿಯಂ ಎಂದು ನಾಮಕರಣ
ಮಾಡಿದರು.
1934ರ ಜುಲೈ 4ರಂದು ವಿಧಿವಶರಾದರು.
No comments:
Post a Comment