ಜುಲೈ 29-ಜಾಗತಿಕ ಹುಲಿ ಸಂರಕ್ಷಣಾ
ಸಂರಕ್ಷಣಾ ದಿನ.
|
2010ನೇ ಇಸವಿಯಲ್ಲಿ,ರಷ್ಯಾದಲ್ಲಿ ನಡೆದ
ಸಮ್ಮೇಳನದಲ್ಲಿ,ಹುಲಿಗಳ ಸಂರಕ್ಷಣೆ ಬಗ್ಗೆ ಚರ್ಚಿಸಿ, ಜುಲೈ 29ನ್ನು ಜಾಗತಿಕ ಹುಲಿ ಸಂರಕ್ಷಣಾ
ದಿನವನ್ನಾಗಿ ಆಚರಿಸಲು ತೀರ್ಮಾನಿಸಲಾಯಿತು.ಈ ಸಮ್ಮೇಳನದಲ್ಲಿ ಭಾರತ ಸೇರಿದಂತೆ ಬಾಂಗ್ಲಾ,ಭೂತಾನ್,ಕಾಂಬೋಡಿಯಾ,ಚೀನಾ,ಇಂಡೋನೇಷ್ಯಾ,ಲಾವೋ,ಮಲೇಶ್ಯಾ,ಬರ್ಮಾ,ನೇಪಾಳ,ಥಾಯಿಲೇಂಡ್,ವಿಯೇಟ್ನಾಂ
ಹಾಗೂ ರಷ್ಯಾ ಭಾಗವಹಿಸಿದ್ದವು.
100 ವರ್ಷಗಳ ಹೆಂದೆ,ಜಗತ್ತಿನಾದ್ಯಂತ 1 ಲಕ್ಷಕ್ಕಿಂತಲೂ
ಹೆಚ್ಚಿನ ಸಂಖ್ಯೆಯಲ್ಲಿದ್ದ ಹುಲಿಗಳು,ಈಗ ಕೇವಲ 3500ರಷ್ಟಿವೆ.ಭಾರತದಲ್ಲಿ 2007ರಲ್ಲಿ 1411
ಹುಲಿಗಳಿದ್ದರೆ,ಈಗ 1706ಕ್ಕೆ ಹೆಚ್ಚಿದೆ.ಕರ್ನಾಟಕದಲ್ಲಿ ,ಬಂಡೀಪುರ,ದಾಂಡೇಲಿ,ಭದ್ರಾ,ನಾಗರ ಹೊಳೆ
ಅಭಯಾರಣ್ಯಗಳಲ್ಲಿ ಸಂರಕ್ಷಣಾ ಯೋಜನೆಗಳಿವೆ. ಹುಲಿಗಳ ಸಂಖ್ಯೆ ಕಡಿಮೆಯಾಗಲು ಕಾರಣಗಳೆಂದರೆ,ಅವುಗಳ
ಆವಾಸ ಸ್ಥಾನಗಳ ನಾಶ,ಕಳ್ಳ ಬೇಟೆ,ಅಕ್ರಮ ವನ್ಯ ಜೀವಿ ವ್ಯಾಪಾರ,ಮುಂತಾದವುಗಳಾಗಿವೆ.ದೇಶದಲ್ಲಿ ಈಗ
39 ಹುಲಿ ತಾಣಗಳಿವೆ.ವಿಶ್ವದ ಒಟ್ಟು ಹುಲಿಗಳ 50 ಪ್ರತಿಶತ ಹುಲಿಗಳು ಭಾರತದಲ್ಲಿವೆ.ವನ್ಯ ಜೀವಿಗಳ
ರಕ್ಷಣೆಗೆ ಅಪೂರ್ವ ಭದ್ರತೆಯ ಅಗತ್ಯವಿದೆ.
No comments:
Post a Comment