ಆಗಸ್ಟ್ 20- ವಿಶ್ವ ಸೊಳ್ಳೆ ನಿರ್ಮೂಲನಾ ದಿನಾಚರಣೆ
ವಿಶ್ವ ಸೊಳ್ಳೆ ನಿರ್ಮೂಲನಾ ದಿನದ ಅಂಗವಾಗಿ,ಶಾಲೆಯಲ್ಲಿ ವಿಶೇಷ ಅಸೆಂಬ್ಲಿಯನ್ನು ನಡೆಸಿ,ಈ ಕುರಿತಾದ
ಮಾಹಿತಿಯನ್ನು ನೀಡಲಾಯಿತು.ಆರೋಗ್ಯ ಕ್ಲಬ್ ನ ನೇತೃತ್ವದಲ್ಲಿ ಶಾಲಾ ಪರಿಸರವನ್ನು
ಶುಚಿಗೊಳಿಸಲಾಯಿತು.
ವಿವಿಧ ಜಾತಿಯ ಸೊಳ್ಳೆಗಳಿಂದ ಬರಬಹುದಾದ ವಿವಿಧ ರೋಗಗಳ ಕುರಿತಾದ ಮಾಹಿತಿ ಯನ್ನು
ನೀಡಲಾಯಿತು.
ದಿನಾಚರಣೆಯ ಹಿನ್ನೆಲೆ: ಸೊಳ್ಳೆಗಳಿಂದ ಹರಡುವ ರೋಗಗಳ ಬಗ್ಗೆ ಜಾಗೃತಿ ಮೂಡಿಸುವ ದೃಷ್ಟಿಯಿಂದ
ಈ ಆಚರಣೆಯನ್ನು ಹಮ್ಮಿಕೊಳ್ಳಲಾಗುತ್ತಿದೆ.ಮನು ಕುಲಕ್ಕೆ ಮಹತ್ತರ
ಕೊಡುಗೆಯಿತ್ತು,1902ರಲ್ಲಿ,ವೈದ್ಯಕೀಯ ಕ್ಷೇತ್ರಕ್ಕಾಗಿ ನೋಬೆಲ್ ಪ್ರಶಸ್ತಿ ಪಡೆದ ಭಾರತೀಯ ಮೂಲದ
ಬ್ರಿಟಿಷ್ ವೈದ್ಯ ಸರ್ ರೋನಾಲ್ಡ್ ರೋಸ್ ನನ್ನು ಸ್ಮರಿಸುವ ದಿನ.
ರೋನಾಲ್ಡ್ ರೋಸ್ ನು, 1897ನೇ ಆಗಸ್ಟ್ 20ರಂದು,ಮಲೇರಿಯಾ ರೋಗಕ್ಕೆ ಸೊಳ್ಳೆಗಳೇ ಕಾರಣ ಎಂದು
ತನ್ನ ಸಂಶೋಧನೆಗಳ ಮೂಲಕ ಜಗತ್ತಿಗೆ ಸಾರಿದನು.ಮಳೆಗಾಲದಲ್ಲಿ ಅಲ್ಲಲ್ಲಿ ನೀರು ನೆಲೆನಿಂತು ಸೊಳ್ಳೆಗಳ
ಸಂತಾನೋತ್ಪತ್ತಿ ಅಧಿಕಗೊಳ್ಳುತ್ತದೆ.ಅನಾಫಿಲೀಸ್ ಸೊಳ್ಳೆಗಳಿಂದ ಮಲೇರಿಯಾ,ಏಡೀಸ್ ಸೊಳ್ಳೆಗಳಿಂದ
ಡೆಂಗೆ ಹಾಗೂ ಚಿಕುನ್ ಗುನ್ಯ ಜ್ವರ,ಕ್ಯುಲೆಕ್ಸ್ ಸೊಳ್ಳೆಗಳಿಂದ ಆನೆಕಾಲು
ಹರಡುತ್ತವೆ.ಜಗತ್ತಿನಲ್ಲಿ ವರ್ಷಕ್ಕೆ ಸುಮಾರು 50ಲಕ್ಷ ಜನ ಮಲೇರಿಯಾ ರೋಗಕ್ಕೆಬಲಿಯಾಗುತ್ತಿದ್ದಾರೆ.
ರೋನಾಲ್ಡ್ ರೋಸ್ ನು1857ರ ಮೇ13ರಂದು,ಭಾರತದ ಉತ್ತರಾಖಂಡ ರಾಜ್ಯದಲ್ಲಿ ಜನಿಸಿದನು.ವೈದ್ಯಕೀಯ
ಶಿಕ್ಷಣವನ್ನು ಇಂಗ್ಲೆಂಡಿನಲ್ಲಿ ಮುಗಿಸಿದ ಇವರು,ಭಾರತೀಯ ಸೇನೆಯಲ್ಲಿ ವೈದ್ಯರಾಗಿ ಸೇವೆ
ಸಲ್ಲಿಸಿದರು. ಸೊಳ್ಳೆಗಳ ಹೊಟ್ಟೆಯಲ್ಲಿರುವ ಪ್ಲಾಸ್ಮೋಡಿಯಂ ಎಂಬ ಪರಾವಲಂಬಿಗಳಿಂದ ಮಲೇರಿಯಾ ರೋಗ
ಬರುತ್ತದೆ ಎಂದು ಸಂಶೋಧನೆಗಳಿಂದ ಕಂಡುಹಿಡಿದನು.
No comments:
Post a Comment