|
Add caption |
ಚೇವಾರು ಶಾಲೆಯಲ್ಲಿ ಯುದ್ಧ ವಿರೋಧಿ ದಿನಾಚರಣೆ
|
ವಾರ್ಡ್ ಸದಸ್ಯೆ ಶ್ರೀಮತಿ ಸುಬೈದಾ ಟೀಚರ್ ರಿಂದ ಯುದ್ದ ವಿರೋಧಿ ಮೆರವಣಿಗೆ ಉದ್ಘಾಟನೆ
| | | | | | |
|
|
ಶಾಲಾ ಮುಖ್ಯ ಶಿಕ್ಷಕ,ಶ್ಯಾಮ ಭಟ್ ರಿಂದ ವಿವರಣೆ
ಚೇವಾರು ಶಾಲೆಯಲ್ಲಿ ಹಿರೋಶಿಮಾ ದಿನಾಚರಣೆ
1945ನೇ ಇಸವಿಯಲ್ಲಿ,ಅಮೇರಿಕವು ಜಪಾನ್ ದೇಶದ ಹಿರೋಶಿಮಾ ನಗರದ ಮೇಲೆ ಬಾಂಬ್ ಸ್ಪೋಟಿಸಿದ
ಪರಿಣಾಮ ಉಂಟಾದ ಲಕ್ಷಾಂತರ ಜನರ ಸಾವು,ನೋವು ಮನುಕುಲದ ಹೇಯ ಕೃತ್ಯ.ಈದಿನವಾದ ಆಗಸ್ಟ್ 6ನ್ನು
ವಿಶ್ವದಾದ್ಯಂತ ಯುದ್ಧ ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತಿದೆ.ಇದರ ಅಂಗವಾಗಿ ಚೇವಾರು ಶ್ರೀ
ಶಾರದಾ ಎ.ಯು.ಪಿ ಶಾಲೆಯಲ್ಲಿ, ಯುದ್ಧ ವಿರೋಧಿ ಘೋಷಣೆಗಳೊಂದಿಗೆ ಮೆರವಣಿಗೆ ಏರ್ಪಡಿಸಲಾಯಿತು.ನಂತರ
ನಡೆದ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಪೈವಳಿಕೆ ಪಂಚಾಯತು ಸದಸ್ಯೆ ಸುಬೈದಾ ಯಂ.ಪಿ.
ನೆರವೇರಿಸಿ,ಮನುಷ್ಯರಲ್ಲಿ,ಪರಸ್ಪರ ಪ್ರೀತಿ,ಪ್ರೇಮ,ವಿಶ್ವಾಸ ಬೆಳೆದು,ಒಗ್ಗಟ್ಟಿನಲ್ಲಿ ಬಾಳಿದರೆ
ಮಾತ್ರ ಈ ವಿಶ್ವವನ್ನು ಒಂದು ಕುಟುಂಬವನ್ನಾಗಿಸಬಹುದೆಂದು ಅಭಿಪ್ರಾಯಪಟ್ಟರು.ಸಭಾಧ್ಯಕ್ಷ
ಸ್ಥಾನವನ್ನು ವಹಿಸಿದ ಶಾಲಾ ಮುಖ್ಯ ಶಿಕ್ಷಕ ಸ್ಯಾಮ ಭಟ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿಯೇ
ಶಾಂತಿ,ಸಹಬಾಳ್ವೆಯನ್ನು ಅಳವಡಿಸಬೇಕೆಂದು ಕರೆಯಿತ್ತರು.ಸ್ಟಾಫ್ ಕಾರ್ಯದರ್ಶಿ ವಿನೋದ್ ಯುದ್ಧದ
ಭೀಕರತೆಯನ್ನು,ಅದನ್ನು ತಡೆಯ ಬೇಕಾದ ಅನಿವಾರ್ಯತೆಯನ್ನು ವಿವರಿಸಿದರು. ವಿದ್ಯಾರ್ಥಿಗಳು ಪ್ರಬಂಧ
ಮಂಡಿಸಿದರು.ಶಾಲಾ ನಾಯಕ ಮಹಮ್ಮದ್ ನಿಶಾದ್ ಅತಿಥಿಗಳನ್ನು ಸ್ವಾಗತಿಸಿದಳನು,ಜ್ಯೋತಿಕಾ
ವಂದಿಸಿದಳು.ಅನ್ಸಾಫ್ ಕಾರ್ಯಕ್ರಮ ನಿರೂಪಿಸಿದಳನು.ಶ್ರೀಮತಿ ಸರಸ್ವತಿ, ಶ್ರೀಮತಿ
ರಾಜೇಶ್ವರಿ,ವಿಜಯನ್,ರವಿಕುಮಾರ್,ಪುಷ್ಪಲತ,ಪ್ರಸಾದ್. ಸಹಕರಿಸಿದರು.
|
|
No comments:
Post a Comment