|
||||
1945ನೇ ಇಸವಿಯಲ್ಲಿ
ಜಗತ್ತಿನ 2ನೇ ಮಹಾಯುದ್ಧದ ಕಾಲ. ಆಗಸ್ಟ್ 6ನೇ ತಾರೀಕಿನಂದು ಬೆಳಿಗ್ಗೆ 8 ಗಂಟೆಗೆ ಅಮೇರಿಕಾದ
ಯುದ್ಧ ವಿಮಾನಗಳು, ಜಪಾನಿನ ಹಿರೋಶಿಮಾ ಎಂಬ ನಗರದ ಆಕಾಶದಲ್ಲಿ ಹಾರಾಡಿಕೊಂಡಿದ್ದವು. ವಿಮಾನ
ಒಂದರಿಂದ ಪ್ಯಾರಾಚೂಟಿನಿಂದ,ನ್ಯೂಕ್ಲಿಯರ್ ಬಾಂಬೊಂದು ಹಿರೋಶಿಮಾ ನಗರದ ನೆಲಕ್ಕೆ ಬಿದ್ದು
ಸ್ಫೋಟಿಸಿತು.ಈ ಪ್ರಬಲ ಬಾಂಬುಸ್ಫೋಟದಿಂದ ನಿಮಿಷಾರ್ಧದಲ್ಲಿ,1 ಲಕ್ಷಕ್ಕಿಂತಲೂ ಹೆಚ್ಚು ಮಂದಿ
ದಾರುಣವಾಗಿ ಮರಣವನ್ನಪ್ಪಿದರು. ಸ್ಫೋಟದಿಂದೆದ್ದ ಬೆಂಕಿ,ವಿಕಿರಣ,ಜೀವಲೋಕವನ್ನು ಹೊಸಕಿ
ಹಾಕಿದುವು.ಆ ಪಟ್ಟಣ ಮಸಣ ಭೂಮಿಯಾಯಿತು.ಅಲ್ಲಲ್ಲಿ ಬದುಕುಳಿದವರು ವಿವಿಧ ರೋಗಕ್ಕೆ
ತುತ್ತಾದರು.ನಂತರ ಹುಟ್ಟಿದ ಮಕ್ಕಳು ಅಂಗವಿಕಲತೆ ಹೊಂದಿದರು.ಆಮ್ಲ ಮಳೆ ಸುರಿಯಿತು.ವಿಜ್ಞಾನದ
ಒಂದು ಹೇಯಕೃತ್ಯವಿದು.ಶತಮಾನಗಳಿಂದ ಕಾಪಾಡಿದ ಮೌಲ್ಯಗಳೆಲ್ಲವೂ ನಾಶವಾಗಿ ಹೋಯಿತು.
ಇಂದಿನ
ವಿಶ್ವದಲ್ಲಿ ಹಿರೋಶಿಮಾ-ನಾಗಸಾಕಿ ಬಾಂಬಿಗಿಂತಲೂ ಲಕ್ಷ ಪಟ್ಟು ಅಧಿಕ ಸಾಮರ್ಥ್ಯದ ಹೈಡ್ರೋಜನ್
ಬಾಂಬುಗಳ ಸಂಗ್ರಹವಿದೆ.ಇವುಗಳನ್ನು ನಾಶಕ್ಕಾಗಿ ಬಳಸದೇ ಜನರ ಅಭಿವೃಧ್ಧಿಗಾಗಿ ಬಳಸ ಬೇಕಾಗಿದೆ.
ಮನುಷ್ಯರಲ್ಲಿ
ಪರಸ್ಪರ ಪ್ರೀತಿ,ಪ್ರೇಮ,ವಿಶ್ವಾಸ ಬೆಳೆದು ಒಗ್ಗಟ್ಟಿನಲ್ಲಿ ಬಾಳಿದರೆ ಮಾತ್ರ ಈ ವಿಶ್ವವನ್ನು
ಒಂದು ಕುಟುಂಬವನ್ನಾಗಿಸಬಹುದು.ನಿಜ,ಮನುಷ್ಯ ಏನನ್ನಾದರೂ ಮಾಡಬಲ್ಲ.ತಾನಿರುವ
ಇಳೆಯಲ್ಲಿ,ನಾಕವನ್ನೂ ನಿರ್ಮಿಸಬಲ್ಲ,ನರಕವನ್ನೂ ಸೃಷ್ಟಿಸಬಲ್ಲ.ನಮ್ಮ ಗುರಿಯು ಸುಂದರ ಜಗತ್ತಿನ
ನಿರ್ಮಾಣವಾಗಲಿ.
|
||||
ನಾವೆಲ್ಲರೂ ಯುಧ್ಧವನ್ನು ವಿರೋಧಿಸೋಣ
|
Friday, August 7, 2015
HIROSHIMA DAY
Subscribe to:
Post Comments (Atom)
No comments:
Post a Comment