ಬರುತಿದೆ...
ಬರುತಿದೆ... ...ಓಣಂ ಹಬ್ಬ
|
ಓಣಂ ಸಮಯವು ಕೇರಳದ ಉಪ ವಸಂತ ಕಾಲವಾಗಿದೆ. ಎಳೆ ಬಿಸಿಲಿನಲ್ಲಿ ಮಹಾಬಲಿ ಚಕ್ರವರ್ತಿಯನ್ನು
ಸ್ವಾಗತಿಸಲು ಪ್ರಕೃತಿಯು ಹೂಗಳೊಂದಿಗೆ ಸಜ್ಜಾಗಿ ನಿಂತಿದೆ.ಸಿಂಹ ಮಾಸದ ಹಸ್ತಾ ನಕ್ಷತ್ರದಿಂದ
ಶ್ರವಣ ನಕ್ಷತ್ರದ ವರೆಗೆ 10 ದಿನಗಳ ಕಾಲ,ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.ಕೇರಳವನ್ನು
ಬಲಿ ಚಕ್ರವರ್ತಿ ಎಂಬ ರಾಜ ಆಳುತ್ತಿದ್ದ.ಅವನ ಪ್ರಜೆಗಳು ಸುಳ್ಳು,ಕಪಟ
ವಂಚನೆ,ಮೋಸವಿಲ್ಲದೆ,ಪ್ರೀತಿ,ಹೃದಯವಂತಿಕೆ,ಸತ್ಯ,ನೆಮ್ಮದಿಯಿಂದ ಬಾಳುತ್ತಿದ್ದರು.ರಾಜಾ
ಪ್ರತ್ಯಕ್ಷ ದೇವತಾ ಎಂಬ ಉಕ್ತಿಯಂತೆ,ಆ ಪ್ರಜೆಗಳು ಮಾವೇಲಿಯನ್ನು ದೇವರಂತೆ
ಪೂಜಿಸುತ್ತಿದ್ದರು.100ನೇ ಅಶ್ವ ಮೇಧ ಯಾಗಕ್ಕೆ ಸಿದ್ಧನಾದ ದೊರೆಯನ್ನು ಕಂಡು ದೇವತೆಗಳ ವಿಷ್ಣುವು
ವಾಮನ ರೂಪ ತಾಳಿ,ಬಲಿ ಚಕ್ರವರ್ತಿಯನ್ನು ಪಾತಾಳಕ್ಕೆ ತಳ್ಳುತ್ತಾನೆ.ಓಣಂ ದಿನದಂದು,ಬಲಿ
ಚಕ್ರವರ್ತಿಯು ತನ್ನ ಪ್ರಜೆಗಳನ್ನು ನೋಡಲು ನಮ್ಮ ರಾಜ್ಯಕ್ಕೆ ಬರುವನೆಂಬ ನಂಬಿಕೆ.
ದೇವರ ನಾಡಿನ ಹೂ ಗಳ ಹಬ್ಬವಾದ ಓಣಂ,ಕೇರಳಿಗರಿಗೆ ಕೇವಲ ಹಬ್ಬ ಮಾತ್ರವಲ್ಲ,ಸಮೃದ್ಧಿಯ
ಸಂಕೇತ.ಸಡಗರ,ಸಂಭ್ರಮದಿಂದ ಆಚರಿಸುವಈ ಹಬ್ಬ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಓಣಂ
ಹಬ್ಬದಂದು ಮುಂಜಾವ ಎದ್ದು ಶುಚಿರ್ಭೂತರಾಗಿ,ಓಣಕ್ಕೋಡಿ ಧರಿಸಿ,ಹಿರಿಯರಿಗೆ
ನಮಸ್ಕರಿಸಿ,ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ,ಹಿರಿಯರ ಆಶೀರ್ವಾದ ಪಡೆದು,ಪೂಕಳಂ
ರಚಿಸಿ,ಸ್ವಾದಿಷ್ಠವಾದ ಓಣಂ ಸದ್ಯಸವಿಯುತ್ತಾರೆ.
ಓಣಂ ಹಬ್ಬದ
ಶುಭಾಶಯಗಳು
|
No comments:
Post a Comment