ಬ್ರಿ
|
ಟಿಷರು ನಮ್ಮ ದೇಶವನ್ನು ಆಕ್ರಮಿಸಿ,ಇಲ್ಲಿಯ ಸಂಪತ್ತನ್ನು ಲೂಟಿಮಾಡಿ,ತಮ್ಮ ದೇಶಕ್ಕೆ
ಸಾಗಿಸುತ್ತಿದ್ದರು.ಇಲ್ಲಿಯ ಜನರನ್ನು ಹೀನಾಯವಾಗಿ ಕಾಣುತ್ತಿದ್ದರು. ಇಲ್ಲಿಯ ಜನರ ಸಂಪೂರ್ಣ
ಸ್ವಾತಂತ್ರ್ಯವನ್ನು ಕಿತ್ತು ಕೊಂಡಿದ್ದರು.ಇಂತಹ ಬ್ರಿಟಿಷರನ್ನು ನಮ್ಮ ದೇಶದಿಂದ ಹೊಡೆದೋಡಿಸಲು ಸಾವಿರಾರು
ಸ್ವಾತಂತ್ರ್ಯ ಯೋಧರು ಶ್ರಮ ಪಟ್ಟಿದ್ದಾರೆ.
ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ, ಅತೀ ಕಿರಿಯ ವಯಸ್ಸಿನ ಕ್ರಾಂತಿಕಾರಿಯಾಗಿ, ಬ್ರಿಟಿಷರ
ವಿರುದ್ಧ ಮೊತ್ತ ಮೊದಲು ಬಾಂಬನ್ನು ಪ್ರಯೋಗಿಸಿದವರು ಖುದಿರಾಮ್ ಬೋಸ್ ಎಂಬ 17ರ ಯುವಕ.
1903ರಲ್ಲಿ,ಬ್ರಿಟಿಷ್ ಕ್ರೂರ ನ್ಯಾಯಾಧೀಶ ಕಿಂಗ್ಸ್ ಫೋರ್ಡ್,ಗಾಡಿಯಲ್ಲಿ ಬರುತ್ತಿದ್ದಾಗ,
ಖುದಿರಾಮ್ ಬೋಸ್, ತನ್ನ ಕೈಯಲ್ಲಿದ್ದ ಬಾಂಬನ್ನು,ಎಸೆದನು.ಅದು ಭಾರತದಮೊತ್ತ ಮೊದಲ
ಬಾಂಬ್ಸ್ಪೋಟ.ಈಕಾರಣಕ್ಕಾಗಿಯೇ 1908ರ ಆಗಸ್ಟ 11ರಂದು, ಖುದಿರಾಮ್ ಬೋಸ್ ರನ್ನು ಬ್ರಿಟಿಷರು
ಗಲ್ಲಿಗೇರಿಸಿದರು.ತನ್ನ 19ನೇ ವಯಸ್ಸಿನಲ್ಲಿ ದೇಶಕ್ಕಾಗಿ ಪ್ರಾಣತೆತ್ತ ವೀರ ಯೋಧ.ಕಾಲಾಂತರದಲ್ಲಿ
ದೇಶಕ್ಕಾಗಿ ಸಾವಿರಾರು ಮಂದಿ ಹೋರಾಡಿ ಪ್ರಾಣತೆತ್ತು ನಮಗೆ ಸ್ವಾತಂತ್ರ್ಯವನ್ನು ತಂದು ಕೊಟ್ಟರು.
ಸ್ವಾತಂತ್ರ್ಯವನ್ನು ಗಳಿಸಿ 67 ವರ್ಷಕಳೆದು,ನಾವು 68ನೇ ಸ್ವಾತಂತ್ರ್ಯೋತ್ಸವನ್ನು
ಆಚರಿಸುತ್ತಿದ್ದೇವೆ.ಇದನ್ನು ಉಳಿಸಿ ಬೆಳೆಸಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಜೈಭಾರತ್
No comments:
Post a Comment