ಚೇವಾರು ಶಾಲೆಯಲ್ಲಿ ಸಂಸ್ಕೃತೋತ್ಸವ
ಮಂಜೇಶ್ವರ:ಚೇವಾರು ಶ್ರೀ ಶಾರದಾ
ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಟ್ಟದ ಸಂಸ್ಕೃತೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ
ಜರಗಿತು.ಪೈವಳಿಕೆ ಪಂಚಾಯತು ಸದಸ್ಯೆ ಸುಬೈದಾ ಯಂ.ಪಿ,ಕಾರ್ಯಕ್ರಮವನ್ನು
ಉದ್ಘಾಟಿಸಿ,ಸಂಸ್ಕೃತವು,ಇತರ ಭಾಷೆಗಳ ತಾಯಿಯಾಗಿದ್ದು,ಅಗಾಧ ಜ್ಞಾನವನ್ನು ಹೊಂದಿದೆ ಎಂದು
ಅಭಿಪ್ರಾಯಪಟ್ಟರು.ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕ ಶ್ಯಾಮ
ಭಟ್,ಸಂಸ್ಕೃತ ಕಲಿಕೆಯಿಂದ ಸಂಸ್ಕೃತಿ ಬೆಳೆಯುವುದರೊಂದಿಗೆ,ಪ್ರಾಚೀನ ಕಾಲದ ಜ್ಞಾನದ ಅರಿವು
ಉಂಟಾಗುವುದೆಂದು ಅಭಿಪ್ರಾಯ ಪಟ್ಟರು.ಹಿರಿಯ ಅಧ್ಯಾಪಿಕೆ ಸರಸ್ವತಿ.ಬಿ,ಶುಭ ಹಾರೈಸಿದರು. ಸಂಸ್ಕೃತ
ಅಧ್ಯಾಪಿಕೆ ಪ್ರಮೀಳಾ.ಡಿ.ಎನ್ ಕಾರ್ಯಕ್ರಮದ ಪ್ರಾಧಾನ್ಯತೆಯನ್ನು ವಿವರಿಸಿದರು. ಪ್ರಸಾದ್ ರೈ ಉಪಸ್ಥಿತರಿದ್ದರು.ಸಾಹಿತ್ಯ
ರಸಪ್ರಶ್ನೆ,ಜ್ಞಾಪಕ ಶಕ್ತಿ ಪರೀಕ್ಷೆ,ಕೈ ಬರಹ ಮುಂತಾದ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು
ನೀಡಲಾಯಿತು. ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.ಅಶ್ವಿನಿ.ಬಿ
ಸ್ವಾಗತಿಸಿದಳು.ಪುಷ್ಪಲತಾ ವಂದಿಸಿದಳು.ಜ್ಯೋತಿಕಾ ಕಾರ್ಯಕ್ರಮ ನಿರೂಪಿಸಿದಳು.
No comments:
Post a Comment