ಶ್ರದ್ಧಾಂಜಲಿ
ಕಯ್ಯಾರ ಕಿಞಣ್ಣ ರೈ
|
ಕನ್ನಡದ ಕಟ್ಟಾಳು, ಪಂಪ
ಪ್ರಶಸ್ತಿ ಪುರಸ್ಕೃತ,ಸ್ವಾತಂತ್ರ್ಯ ಹೋರಾಟಗಾರ,ಸಾಹಿತಿ,ನಾಡೋಜ ಕಯ್ಯಾರ ಕಿಞಣ್ಣ
ರೈ,9-7-2015ರಂದು 101ನೇ ವಯಸ್ಸಿನಲ್ಲಿ ನಮ್ಮನ್ನಗಲಿರುವುದು ವಿಷಾದವನ್ನು
ತಂದಿದೆ.ಕಯ್ಯಾರರು, ಶ್ರೇಷ್ಠ ಶಿಕ್ಷಕ,ಕೃಷಿಕ,ಸಂಘಟಕ,ಅನುವಾದಕ,ರಾಜಕಾರಣಿ,ಶಿಶು
ಸಾಹಿತ್ಯಕಾರ,ಹೀಗೆ ಎಲ್ಲಾ ರಂಗಗಳಲ್ಲೂ ಗುರುತಿಸಿಕಂಡವರು.ಕಾಸರಗೋಡನ್ನು ಅನ್ಯಾಯವಾಗಿ
ಕೇರಳಕ್ಕೆ ಸೇರಿಸಿದುದರ ವಿರುದ್ಧ ನಿಂದ ಕೈಯಾರರು,ಬೆಂಕಿ ಬಿದ್ದಿದೆ ಮನೆಗೆ,ಓ ಬೇಗ ಬನ್ನಿ
ಎಂದು ಕೂಗಿ ಕರೆಯುವ ಬಗ್ಗೆ ಕವಿತೆ ರಚಿಸಿ ಕನ್ನಡಿಗರನ್ನು ಎಚ್ಚರಿಸಿದರು.
ಕಯ್ಯಾರರರು ಒಬ್ಬ ಕನ್ನಡದ
ಕಾವಲು ಯೋಧನಾಗಿದ್ದವರು.ಇವರಿಗೆ ಲಭಿಸಿದ ಪ್ರಶಸ್ತಿಗಳು ಅನೇಕ.1961ರಲ್ಲಿ ಶ್ರೇಷ್ಠ ಅಧ್ಯಾಪಕ
ಪ್ರಶಸ್ತಿ,1969ರಲ್ಲಿ ಸಾಹಿತ್ಯ ಅಕಾಡೆಮಿ ಪುರಸ್ಕಾರ,19963ರಲ್ಲಿ ಪುನರ್ನವ ಕವನ ಸಂಕಲನಕ್ಕೆ
ಮೈಸೂರು ಸರಕಾರದಿಂದ ಉತ್ತಮ ಕವಿತಾ ಪ್ರಶಸ್ತಿ,ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,ರತತ್ನ
ರಾಶಿ ಗ್ರಂಥಕ್ಕೆ ಉತ್ತಮ ಜೀವನ ಚರಿತ್ರೆ ಪ್ರಶಸ್ತಿ,1985ರಲ್ಲಿ ಕರ್ನಾಟಕ ರಾಜ್ಯೋತ್ಸವ
ಪ್ರಶಸ್ತಿ,ಮಂಗಳೂರು ವಿಶ್ವ ವಿದ್ಯಾನಿಲಯದಿಂದ ಡಾಕ್ಟರೇಟ್ ಗೌರವ,ಹಂಪಿ ವಿಶ್ವ
ವಿದ್ಯಾನಿಲಯದಿಂದ ನಾಡೋಜ ಪ್ರಶಸ್ತಿ,ಕರ್ನಾಟಕ ಸರಕಾರದಿಂದ ಪಂಪ ಪ್ರಶಸ್ತಿಗಳು ಲಭಿಸಿವೆ.
ಕಯ್ಯಾರ ಕಿಞಣ್ಣ ರೈಯವರ
ಆತ್ಮಕ್ಕೆ ಭಗವಂತನು ಚಿರ ಶಾಂತಿಯನ್ನು ನೀಡಲಿ ಎಂಬುದು ನಮ್ಮೆಲ್ಲರ ಪ್ರಾರ್ಥನೆ
|
Sunday, August 9, 2015
KAYYARA KINHIANNA RAI
Subscribe to:
Post Comments (Atom)
No comments:
Post a Comment