21-8-2015ರಂದು ಶಾಲೆಯಲ್ಲಿ ಓಣಂ ಹಬ್ಬದ ಆಚರಣೆ
ಶಾಲೆಯಲ್ಲಿ ಓಣಂ ಹಬ್ಬವನ್ನು ಸಂಭ್ರಮ,ಸಡಗರದಿಂದ ವೈವಿಧ್ಯಪೂರ್ಣವಾಗಿ ಆಚರಿಸಲಾಯಿತು.ವಿಶೇಷ
ಎಸೆಂಬ್ಲಿ ನಡೆಸಿ ಹಬ್ಬದ,ಹಿನ್ನೆಲೆ,ಮಹತ್ವವನ್ನು ವಿವರಿಸಲಾಯಿತು.
ಎಲ್ಲಾ ತರಗತಿಗಳಲ್ಲಿ,ವಿದ್ಯಾರ್ಥಿ,ವಿದ್ಯಾರ್ಥಿನಿಯರು,ಆಕರ್ಷಕವಾದ ಪೂಕಳಂನ್ನು ರಚಿಸಿದರು.ಇದೇ
ಸಮಯದಲ್ಲಿ ಮಹಾಬಲಿ ಚಕ್ರವರ್ತಿಯ ಆಗಮನವಾಯಿತು.ಇವರನ್ನು ಸ್ವಾಗತಿಸಲು,ಗೋಪಿಕಾಸ್ತ್ರೀಯರು,ಗೋಪಾಲಕರು,ಮೌಲ್ವಿಗಳು,ಸನ್ಯಾಸಿಗಳು,ಪಾದ್ರಿಗಳು,ನರಸಣ್ಣರು,ಆಟಿಕಳಂಜರು,ಯಕ್ಷರು,ಗಂಧರ್ವರ
ಗಡಣವೇ ಶಾಲೆಯಲ್ಲಿ ಸೇರಿತ್ತು..ಮಹಾಬಲಿ ಚಕ್ರವರ್ತಿಯು , ಎಲ್ಲಾ ತರಗತಿಗಳಿಗೂ ಭೇಟಿಕೊಟ್ಟು ಕ್ಷೇಮ
ಸಮಾಚಾರವನ್ನು ವಿಚಾರಿಸಿದರು ಹೂವಿನ ರಂಗವಲ್ಲಿಯ ಸುತ್ತಲೂ ,ಗೋಪಿಕಾ ಸ್ತ್ರೀಯರ ನೃತ್ಯ ಮನ ಮೋಹಕ
ವಾಗಿತ್ತು..ತದನಂತರ, ಪಾಯಸ,ಲಡ್ಡು, ಹಣ್ಣುಹಂಪಲುಗಳನ್ನೊಳಗೊಂಡ ಓಣಂ ಔತಣವನ್ನು ಮಹಾಬಲಿ
ಚಕ್ರವರ್ತಿಯೊಂದಿಗೆ ಎಲ್ಲರೂ ಸವಿದರು.ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
No comments:
Post a Comment