69ನೇ ಸ್ವಾತಂತ್ರ್ಯೋತ್ಸವ
68ನೇ ಸ್ವಾತಂತ್ರ್ಯೋತ್ಸವದ ಸಡಗರದಲ್ಲಿ ನಾವಿದ್ದೇವೆ.ಆಗಸ್ಟ15ರಂದು,ಸಾಕಷ್ಟು
ಉತ್ಸಾಹದಿಂದ ಸಂಭ್ರಮದಿಂದ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತೇವೆ.ಈ ದಿನ, ಸ್ವಾತಂತ್ರ್ಯ
ಹೋರಾಟಗಾರರನ್ನು,ದೇಶ ಭಕ್ತರನ್ನು ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತೇವೆ.ಅವರ ತ್ಯಾಗ,ಬಲಿದಾನದಿಂದ
ದೊರಕಿದ ಈ ಸ್ವಾತಂತ್ರ್ಯವನ್ನು ನಾವು ಉಳಿಸಬೇಕಾಗಿದೆ.ಈ ಸ್ವತಂತ್ರ ದೇಶವನ್ನು ಸಮರ್ಥವಾಗಿ
ಮುನವ್ನಡೆಸಬೇಕಾದ ಜವಾಬ್ದಾರಿ ನಮ್ಮ ಮುಂದಿದೆ.ಭಯೋತ್ಪಾದನೆ,ಭ್ರಷ್ಟಾಚಾರ.ಮಹಿಳಾ
ದೌರ್ಜನ್ಯ,ಬಡತನ,ನಿರುದ್ಯೋಗ,ಮೂಢ ನಂಬಿಕೆ ಮುಂತಾದವುಗಳನ್ನು ತೊಡೆದು ಹಾಕಬೇಕಾಗಿದೆ.
ಇಂದು ಸಮಾಜದಲ್ಲಿ,ಹೆಚ್ಚಿನವರು,ತಮ್ಮ
ಮಕ್ಕಳು,ಇಂಜಿನಿಯರ್,ಡಾಕ್ಟರ್ ಆಗಿ ಉದ್ಯೋಗ ಪಡೆದು ತುಂಬಾ ಹಣ ಸಂಪಾದಿಸಿ ಸುಖವಾಗಿರಬೇಕಂದು
ಇಚ್ಚಿಸುತ್ತಾರೆ.ಆದರೆ,ಮಕ್ಕಳು
ಸಂಸ್ಕಾರವಂತರಾಗಿ,ದೇಶಭಕ್ತರಾಗಿ,ಯೋಧರಾಗಬೇಕು,ಸಮಾಜಸೇವಕರಾಗಬೇಕೆಂದು ಹೇಳುವವರು ವಿರಳ.ಭಾರತ
ಮಾತೆಯ ರಕ್ಷಣೆಗಾಗಿ,ಹೋರಾಡುವವರು ಬೇಕಾಗಿದ್ದಾರೆ.
No comments:
Post a Comment