69ನೇ ಸ್ವಾತಂತ್ರ್ಯೋತ್ಸವ-2015
ಚೇವಾರು ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ
ಆಚರಣೆ
ಪೈವಳಿಕೆ: ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಸ್ವಾತಂತ್ರ್ಯೋತ್ಸವದಂದು,ಪೈವಳಿಕೆ
ಪಂಚಾಯತು ಸದಸ್ಯೆ,ಶ್ರೀಮತಿ ಸುಬೈದಾ ಯಂ.ಪಿ.ಧ್ವಜಾರೋಹಣ ನೆರವೇರಿಸಿದರು.ಸಮಾಜದಲ್ಲಿ,ಜಾತಿ,ಮತ,ಭೇದವಿಲ್ಲದೆ
ಎಲ್ಲರೂ,ಸತ್ಯ,ಅಹಿಂಸೆ,ಶಾಂತಿಯೊಂದಿಗೆ ರಾಷ್ಟ್ರಪ್ರೇಮವನ್ನೂ ಬೆಳೆಸ ಬೇಕೆಂದು ಕರೆ ಕೊಟ್ಟರು.ನಂತರ
ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಇಂದಿರಾ ಮಿತ್ತಡ್ಕ
ವಹಿಸಿದ್ದರು.ಮುಖ್ಯಅತಿಥಿಗಳಾಗಿ ಮಾತೃ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀಮತಿ ಕದೀಜಾ
ಭಾಗವಹಿಸಿದ್ದರು.ಮುಖ್ಯ ಶಿಕ್ಷಕರಾದ ಶ್ರೀ ಶ್ಯಾಮ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸ್ಟಾಫ್
ಕಾರ್ಯದರ್ಶಿ ವಿನೋದ್ ಚೇವಾರ್ ಶುಭ ಹಾರೈಸಿದರು.ಪಿ.ಟಿ.ಎ.ಉಪಾಧ್ಯಕ್ಷರಾದ ಶ್ರೀ ಕುಮಾರ ಸುಬ್ರಹ್ಮಣ್ಯ ಭಟ್,ರಕ್ಷಣಾ ಸಮಿತಿ ಅಧ್ಯಕ್ಷ ಅಬ್ದುಲ್ ಕೋಯಾ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ
ಬಹುಮಾನಗಳನ್ನು ವಿತರಿಸಲಾಯಿತು.ತದ ನಂತರ ಸ್ವಾತಂತ್ರ್ಯೋತ್ಸವ ಮೆರವಣಿಗೆ ಹಾಗೂ
ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು., ಅತಿಥಿಗಳನ್ನು ಶ್ರೀಮತಿ ಸರಸ್ವತಿ
ಸ್ವಾಗತಿಸಿದರು. ರವಿಕುಮಾರ್ ವಂದಿಸಿದರು.ಪುಷ್ಪಲತಾ ಕಾರ್ಯಕ್ರಮ ನಿರೂಪಿಸಿದರು. ಪ್ರಸಾದ್ ರೈ,ರಾಜೇಶ್ವರಿ.ಬಿ,ಪ್ರಮೀಳಾ,ರತೀಶ್,ಗೋಪಾಲ
ಕೃಷ್ಣ ಭಟ್ ಸಹಕರಿಸಿದರು.
ವಾರ್ಡ್ ಸದಸ್ಯೆ ಸುಬೈದಾ ಎಂ.ಪಿ.ಯವರಿಂದ ಧ್ವಜಾರೋಹಣ |
No comments:
Post a Comment