ಆಗಸ್ಟ್ 17 ಕೃಷಿಕರ ದಿನ
ಪ್ರಪಂಚದ ಫಲವತ್ತಾದ ನಾಡುಗಳಲ್ಲಿ ಭಾರತವೂ ಒಂದಾಗಿದೆ.ಭಾರತದ ಶೇಕಡಾ 44ರಷ್ಟು ಭೂಮಿ ಕೃಷಿಗೆ
ಯೋಗ್ಯವಾದುದಾಗಿದೆ.100 ಕೋಟಿಗಿಂತಲೂ ಹೆಚ್ಚು ಜನರಿಗೆ ಆಹಾರವನ್ನು ಒದಗಿಸುವ ಸಾವರ್ಥ್ಯವನ್ನು
ಹೊಂದಿದೆ.ನಮ್ಮ ಕೃಷಿಕರ ಶ್ರಮವೇ ಇದಕ್ಕೆ ಪ್ರಧಾನ ಕಾರಣ.ಕೃಷಿಕರನ್ನು ದೇಶದ ಬೆನ್ನೆಲುಬು ಎನ್ನುತ್ತಾರೆ.ಕೃಷಿಕರ
ದಣಿವರಿಯದ ಶ್ರಮ ಹಾಗೂ ವಿಜ್ಞಾನ ತಂತ್ರ ಜ್ಞಾನದ ಸಹಾಯದಿಂದ ಆಹಾರೋತ್ಪಾದನೆಯಾಗುತ್ತಿದೆ
ಇಂದು ಕೃಷಿಕರು ಅನೇಕ ಸಮಸ್ಯಗಳನ್ನು ಎದುರಿಸುತ್ತಿದ್ದಾರೆ.ಹವಾಮಾನ ವೈಪರೀತ್ಯ,ಸೂಕ್ತವಾದ
ಬೆಲೆ ಲಭಿಸದೇ ಇರುವುದು,ಮಾರುಕಟ್ಟೆಯ ಕೊರತೆ ಇತ್ಯಾದಿ.ರೈತರ ಕಷ್ಟದಲ್ಲಿ ನಾವೂ ಭಾಗಿಯಾಗಿ
ಅವರಿಗೆ ಆತ್ಮ ಸ್ಥೈರ್ಯಕೊಡೋಣ ಉತ್ತಮ ಸಮಾಜ ನಿರ್ಮಿಸೋಣ.
ಜೈ ಕಿಸಾನ್
No comments:
Post a Comment