ಚೇವಾರು
ಶಾಲೆಯಲ್ಲಿ ಓಣಂ ಹಬ್ಬ ಆಚರಣೆ
|
||
ಮಂಜೇಶ್ವರ: ಚೇವಾರು ಶ್ರೀ ಶಾರದಾ ಹಿರಿಯ
ಪ್ರಾಥಮಿಕ ಶಾಲೆಯಲ್ಲಿ ಓಣಂ ಹಬ್ಬವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ
ಆಚರಿಸಲಾಯಿತು.ಕಾರ್ಯಕ್ರಮವನ್ನು ಪೈವಳಿಕೆ ಪಂಚಾಯತು ಸದಸ್ಯೆ ಸುಬೈದಾ ಎಂ.ಪಿ ಉದ್ಘಾಟಿಸಿ,ಹಬ್ಬಗಳ
ಆಚರಣೆ ಯಿಂದ ಸಮಾಜದಲ್ಲಿ ಶಾಂತಿ ಸಹಬಾಳ್ವೆ,ಸಾಮರಸ್ಯ ಉಂಟಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಶಾಲಾ
ಮುಖ್ಯಶಿಕ್ಷಕರಾದ ಶ್ಯಾಮ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.ರಕ್ಷಕ ಶಿಕ್ಷಕ ಸಂಘದ
ಅಧ್ಯಕ್ಷೆ ಇಂದಿರಾ ಮಿತ್ತಡ್ಕ,ಉಪಾಧ್ಯಕ್ಷ ಕುಮಾರ ಸುಬ್ರಹ್ಮಣ್ಯ ಕೊಂದಲಕಾಡು,ಮಾತೃ ಸಂಘದ
ಅಧ್ಯಕ್ಷೆ ಕದೀಜ,ರಕ್ಷಣಾ ಸಮಿತಿಯ ಅಧ್ಯಕ್ಷ ಅಬ್ದುಲ್ ಕೋಯಾ ಉಪಸ್ಥಿತರಿದ್ದರು.ಎಲ್ಲಾ ತರಗತಿಗಳಲ್ಲೂ
ವಿದ್ಯಾರ್ಥಿಗಳು ಹೂವಿನ ರಂಗೋಲಿ ರಚಿಸಿದರು.ತದನಂತರ ವಿದ್ಯಾರ್ಥಿಗಳು, ಮಹಾಬಲಿ ಚಕ್ರವರ್ತಿ
ಹಾಗೂ ಇತರ ವಿವಿಧ ವೇಷಗಳನ್ನು ಧರಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.ಶಿಕ್ಷಕ
ಕಾರ್ಯದರ್ಶಿ ಸ್ಕೌಟ್ ಅಧ್ಯಾಪಕ ವಿನೋದ್ ರ ನೇತೃತ್ವದಲ್ಲಿ ಮೆರವಣಿಗೆಯನ್ನು ಏರ್ಪಡಿಸಲಾಯಿತು.ಓಣಂ
ಸದ್ಯವನ್ನು ಏರ್ಪಡಿಸಲಾಯಿತು. ಸರಸ್ವತಿ, ರಾಜೇಶ್ವರಿ ಪ್ರಮೀಳಾ,ವಿಜಯನ್, ರವಿಕುಮಾರ್,ಪ್ರಸಾದ್
ರೈ, ಪುಷ್ಪಲತಾ,ಕವಿತಾ,ಗೋಪಾಲ ಕೃಷ್ಣ ಭಟ್ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸ್ವ ಸಹಾಯ ಸಂಘದ
ಸದಸ್ಯರು ಸಹಕರಿಸಿದರು.
|
Friday, August 21, 2015
ONAM CELEBRATION IN OUR SCHOOL
Subscribe to:
Post Comments (Atom)
No comments:
Post a Comment